Indian Cricket Team: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ 2023 ಪಂದ್ಯವು ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ರೋಹಿತ್ ಶರ್ಮಾ ಪ್ರಸ್ತುತ ಎಲ್ಲಾ ಮೂರು ಫಾರ್ಮ್ಯಾಟ್ ಗಳಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದಾರೆ. ಈ ಮಧ್ಯೆ ಮಾಜಿ ಹಿರಿಯ ಕ್ರಿಕೆಟಿಗರೊಬ್ಬರು ಹೊಸ ನಾಯಕನ ಬೇಡಿಕೆ ಇಟ್ಟಿದ್ದಾರೆ. ಅದಕ್ಕೊಂದು ಹೆಸರನ್ನೂ ಸಹ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಹಲವು ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಭವಿಷ್ಯದ ಟೀಮ್ ಇಂಡಿಯಾದ ಬಗ್ಗೆ ಭಜ್ಜಿ ಹೇಳಿದ್ದೇನು ಗೊತ್ತೇ?
ಈ ಆಟಗಾರನಿಗೆ ನಾಯಕತ್ವ ಸಿಗಲಿ…
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಬಗ್ಗೆ ಟೀಂ ಇಂಡಿಯಾಗೆ ಸಲಹೆಗಳನ್ನು ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಮಾತನಾಡಿದ ಅವರು, ಹೊಸ ತಂಡವನ್ನು ರಚಿಸುವ ಅಗತ್ಯವಿದೆ ಎಂದು ಹೇಳಿದರು. ಹೆಸರನ್ನು ಸೂಚಿಸುವಾಗ, ಈ ತಂಡವನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮಾಡಬೇಕು ಎಂದು ಹೇಳಿದರು. ಅಷ್ಟೇ ಅಲ್ಲ, ಯುವ ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಓಪನಿಂಗ್ ಮಾಡಬೇಕು. ಮತ್ತು ರಿಂಕು ಸಿಂಗ್, ರಿತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ ಮತ್ತು ನಿತೀಶ್ ರಾಣಾಗೆ ತಂಡದಲ್ಲಿ ಅವಕಾಶ ನೀಡಬೇಕು ಎಂದು ಅವರು ಹೇಳಿದರು. ಆದರೆ, ಇದು ಅವರ ಸಲಹೆ ಮಾತ್ರ. ಸದ್ಯಕ್ಕೆ ರೋಹಿತ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಈ ಆಟಗಾರ ತುಂಬಾ ಪ್ರತಿಭಾವಂತನಂತೆ!
ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಹರ್ಭಜನ್ ಸಿಂಗ್ ಹೊಗಳಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಅತ್ಯಂತ ಪ್ರತಿಭಾನ್ವಿತ ಆಟಗಾರನಾಗಿದ್ದು, ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಪರ ಆಡುವುದು ಖಚಿತ ಎಂದು ಹೇಳಿದ್ದಾರೆ. ಪ್ರಸ್ತುತ ಐಪಿಎಲ್ ಸೀಸನ್ ನಲ್ಲಿ ಯಶಸ್ವಿ ಅವರು ತಮ್ಮ ಸಾಮರ್ಥ್ಯ ಮತ್ತು ಮಾರಕ ಬ್ಯಾಟಿಂಗ್ ಗಾಗಿ ಅನುಭವಿ ಕ್ರಿಕೆಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು 14 ಪಂದ್ಯಗಳಲ್ಲಿ 625 ರನ್ ಗಳಿಸಿದ್ದಾರೆ, ಇದರಲ್ಲಿ 5 ಅರ್ಧ ಶತಕ ಮತ್ತು 1 ಶತಕ ಸೇರಿದೆ.
ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಬೇಕೇ? ರಾತ್ರಿ ವೇಳೆ ಈ ತಪ್ಪನ್ನು ಮಾಡಲೇಬೇಡಿ
ಐಪಿಎಲ್ 2023 ರಲ್ಲಿ ಅತ್ಯುತ್ತಮ ಪ್ರದರ್ಶನ:
ಹರ್ಭಜನ್ ಸಿಂಗ್ ಉಲ್ಲೇಖಿಸಿರುವ ಎಲ್ಲಾ ಆಟಗಾರರು ಐಪಿಎಲ್ 2023 ರಲ್ಲಿ ಆಯಾ ಫ್ರಾಂಚೈಸಿಗಳಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಿಲ್ ಗುಜರಾತ್ ಟೈಟಾನ್ಸ್ ಪರ ಆಡಿದ 15 ಪಂದ್ಯಗಳಲ್ಲಿ 722 ರನ್ ಗಳಿಸಿದ್ದಾರೆ. ರಿತುರಾಜ್ ಚೆನ್ನೈ ಸೂಪರ್ ಕಿಂಗ್ಸ್ ಪರ 15 ಪಂದ್ಯಗಳಲ್ಲಿ 564 ರನ್ ಗಳಿಸಿದ್ದಾರೆ. ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ 14 ಪಂದ್ಯಗಳಲ್ಲಿ 474 ರನ್ ಗಳಿಸಿದ್ದಾರೆ. ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ 10 ಪಂದ್ಯಗಳನ್ನು ಆಡುವಾಗ 300 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.