ಬರೋಬ್ಬರಿ 60 ಕಂಪನಿಗಳಿಗೆ ಕೋಟಿ ಕೋಟಿ ವಂಚನೆ: ಭಾರತದ ಈ ಸ್ಟಾರ್ ಕ್ರಿಕೆಟಿಗ ಅರೆಸ್ಟ್!

Indian Cricketer Arrested: ನಾಗರಾಜ ಬುಡುಮುರು ಎಂಬ ಆಟಗಾರನನ್ನು ಮುಂಬೈ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ನಾಗರಾಜ ಬುಡುಮೂರು ಆಂಧ್ರ ಸಿಎಂ ಹೆಸರು ಹೇಳಿಕೊಂಡು ಮೋಸ ನಡೆಸಿದ್ದು, ಈ ಮೂಲಕ 60 ಕಂಪನಿಗಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಾಗರಾಜ ಬುಡುಮಾರು ಆಂಧ್ರಪ್ರದೇಶದ ಮಾಜಿ ರಣಜಿ ಆಟಗಾರ. ಅಷ್ಟೇ ಅಲ್ಲ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಗರಾಜ ಬುಡುಮಾರು ಕೂಡ ಭಾಗಿಯಾಗಿದ್ದನು.

Written by - Bhavishya Shetty | Last Updated : Mar 15, 2023, 07:39 PM IST
    • ಸುಮಾರು 60 ಕಂಪನಿಗಳಿಗೆ ಕೋಟಿ ಕೋಟಿ ವಂಚಿಸಿದ ಆರೋಪ ಕೇಳಿ ಬಂದಿದೆ.
    • ಈ ಆಟಗಾರ ತನ್ನನ್ನು ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಪಿಎ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಎನ್ನಲಾಗಿದೆ.
    • ಸುದ್ದಿ ಪ್ರಕಾರ, ಮುಂಬೈ ಸೈಬರ್ ಸೆಲ್ 28 ವರ್ಷದ ಕ್ರಿಕೆಟಿಗನನ್ನು ಬಂಧಿಸಿದೆ
ಬರೋಬ್ಬರಿ 60 ಕಂಪನಿಗಳಿಗೆ ಕೋಟಿ ಕೋಟಿ ವಂಚನೆ: ಭಾರತದ ಈ ಸ್ಟಾರ್ ಕ್ರಿಕೆಟಿಗ ಅರೆಸ್ಟ್! title=
Indian Cricket

Indian Cricketer Arrested: ಕ್ರಿಕೆಟಿಗರು ಮೋಸ ಹೋಗಿರುವ ಅಥವಾ ಕ್ರಿಕೆಟಿಗರೇ ಬೇರೆಯವರಿಗೆ ಮೋಸ ಮಾಡಿರುವ ಪ್ರಕರಣಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಪ್ರಕರಣ ದಾಖಲಾಗಿದ್ದು, ಮಾಜಿ ಕ್ರಿಕೆಟಿಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Team India: ಏಕದಿನ ತಂಡಕ್ಕೆ ರೋಹಿತ್ ಬದಲಿಗೆ ಈ ಸ್ಟಾರ್ ಆಲ್’ರೌಂಡರ್ ನಾಯಕ!

ಸುಮಾರು 60 ಕಂಪನಿಗಳಿಗೆ ಕೋಟಿ ಕೋಟಿ ವಂಚಿಸಿದ ಆರೋಪ ಕೇಳಿ ಬಂದಿದೆ. ಈ ಆಟಗಾರ ತನ್ನನ್ನು ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಪಿಎ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಎನ್ನಲಾಗಿದೆ. ಸುದ್ದಿ ಪ್ರಕಾರ, ಮುಂಬೈ ಸೈಬರ್ ಸೆಲ್ 28 ವರ್ಷದ ಕ್ರಿಕೆಟಿಗನನ್ನು ಬಂಧಿಸಿದೆ. ಈ ಆಟಗಾರ ಐಪಿಎಲ್‌’ನ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿಯೂ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. .

ನಾಗರಾಜ ಬುಡುಮುರು ಎಂಬ ಆಟಗಾರನನ್ನು ಮುಂಬೈ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ನಾಗರಾಜ ಬುಡುಮೂರು ಆಂಧ್ರ ಸಿಎಂ ಹೆಸರು ಹೇಳಿಕೊಂಡು ಮೋಸ ನಡೆಸಿದ್ದು, ಈ ಮೂಲಕ 60 ಕಂಪನಿಗಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಾಗರಾಜ ಬುಡುಮಾರು ಆಂಧ್ರಪ್ರದೇಶದ ಮಾಜಿ ರಣಜಿ ಆಟಗಾರ. ಅಷ್ಟೇ ಅಲ್ಲ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಗರಾಜ ಬುಡುಮಾರು ಕೂಡ ಭಾಗಿಯಾಗಿದ್ದನು.

ಮುಖ್ಯಮಂತ್ರಿ ಮೋಹನ್ ರೆಡ್ಡಿ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಕಂಪನಿಯಿಂದ ನಾಗರಾಜ ಬುಡುಮಾರು 12 ಲಕ್ಷ ರೂ. ಸೇರಿದಂತೆ ಸುಮಾರು 60 ಕಂಪನಿಗಳಿಗೆ 3 ಕೋಟಿ ರೂ. ವಂಚನೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ನಾಗರಾಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ ಬುಡುಮಾರು ಬ್ಯಾಂಕ್ ಖಾತೆಯಿಂದ ಪೊಲೀಸರು 7 ಲಕ್ಷಕ್ಕೂ ಹೆಚ್ಚು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಾಗರಾಜನ ಮೇಲೆ ಸುಮಾರು 30 ಪ್ರಕರಣಗಳಿದ್ದು, ಪೊಲೀಸರು ಪ್ರತಿಯೊಂದು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral Video: ‘ಕೈಗೆ ಬಂದಿದ್ದು, ಕಾಲಲ್ಲಿ ಹೋಯ್ತು’; ಈ ಅಂಕಲ್ ಫೀಲ್ಡಿಂಗ್ ನೋಡಿದ್ರೆ ನೀವು ಜೀವಮಾನದಲ್ಲಿ ನಕ್ಕಿರಲ್ಲ… ಅಷ್ಟು ನಗ್ತೀರಿ

ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡಿದ ಸೈಬರ್ ಕ್ರೈಮ್ ಡಿಸಿಪಿ ಡಾ.ಬಾಲಸಿಂಗ್ ರಜಪೂತ್, 'ದೂರು ಸ್ವೀಕರಿಸಿದ ನಂತರ, ನಮ್ಮ ತಂಡವು ವರ್ಗಾವಣೆ ಹಣವನ್ನು ಟ್ರ್ಯಾಕ್ ಮಾಡಿದೆ. ಎಲ್ಲಾ ಹಣದ ಹಾದಿಗಳು ಬುಡುಮೂರು ಕಡೆಗೆ ತೋರಿಸುತ್ತಿದ್ದವು. ಶ್ರೀಕುಲಂ ಜಿಲ್ಲೆಯ ಯವರಿಪೆಟ್ಟಾ ಎಂಬಲ್ಲಿನ ಅವರ ಗ್ರಾಮದಿಂದ ಅವರನ್ನು ಬಂಧಿಸಿದ್ದೇವೆ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News