ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಕ್ಷಮೆಯಾಚನೆ

ಸಿಡ್ನಿಯಲ್ಲಿ ಭಾರತ ವಿರುದ್ಧದ 3 ನೇ ಟೆಸ್ಟ್ ಪಂದ್ಯದ 5 ನೇ ದಿನದಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮಂಗಳವಾರ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪೈನ್, ಒತ್ತಡದ ಸಂದರ್ಭದಲ್ಲಿ ಹಾಗೆ ಮಾತನಾಡಿದ್ದೇನೆ ಈ ವಿಚಾರವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

Last Updated : Jan 13, 2021, 10:13 PM IST
  • ಈಗ ಅಶ್ವಿನ್ (R.Ashwin) ಜೊತೆಗಿನ ವಿಚಾರವಾಗಿ ಪ್ರಸ್ತಾಪಿಸಿದ ಪೈನ್ ಅವರು "ನಾನು ವರ್ತಿಸಿದ ವಿಷಯಗಳ ಬಗ್ಗೆ ಕ್ಷಮೆಯಾಚಿಸಲು ನಾನು ಬಯಸುತ್ತೇನೆ,
  • 'ನಾನು ಈ ತಂಡವನ್ನು ಮುನ್ನಡೆಸುವ ಹಾದಿಯಲ್ಲಿ ತನ್ನನ್ನು ತಾನು ಹೆಮ್ಮೆಪಡುವವನು ಮತ್ತು ನಿನ್ನೆ ಅದರ ಕಳಪೆ ಪ್ರತಿಬಿಂಬವಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಕ್ಷಮೆಯಾಚನೆ title=
Photo Courtesy: AFP

ನವದೆಹಲಿ: ಸಿಡ್ನಿಯಲ್ಲಿ ಭಾರತ ವಿರುದ್ಧದ 3 ನೇ ಟೆಸ್ಟ್ ಪಂದ್ಯದ 5 ನೇ ದಿನದಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮಂಗಳವಾರ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪೈನ್, ಒತ್ತಡದ ಸಂದರ್ಭದಲ್ಲಿ ಹಾಗೆ ಮಾತನಾಡಿದ್ದೇನೆ ಈ ವಿಚಾರವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೂ ಮುನ್ನ ರಹಾನೆಗೆ ಸಂದೇಶ ರವಾನಿಸಿದ ವಾಸಿಮ್ ಜಾಫರ್

ನಾಥನ್ ಲಿಯಾನ್ ಅವರ ಓವರ್‌ನಲ್ಲಿ ಸ್ಟಂಪ್‌ನ ಹಿಂದಿನಿಂದ ಅಶ್ವಿನ್ ಅವರಿಗೆ ಕೆಟ್ಟ ಪದಗಳನ್ನು ಬಳಸಿದ್ದಾರೆ, ಆದರೆ ಇದಕ್ಕೆ ತಾಳ್ಮೆ ಕಳೆದುಕೊಳ್ಳದ ಅಶ್ವಿನ್ ಕೂಲ್ ಆಗಿ ಘಟನೆಯನ್ನು ನಿಭಾಯಿಸಿದ್ದರು.ಅಂತಿಮ ದಿನದ ಎರಡನೇ ಇನಿಂಗ್ಸ್ ನಲ್ಲಿ ಆಶ್ವಿನ್ ಮತ್ತು ಹನುಮಾ ವಿಹಾರಿ ಅವರು ಗೋಡೆಯಂತೆ ಭದ್ರವಾಗಿ ನೆಲೆವೂರಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಈಗ ಸರಣಿಯೂ 1-1 ರಲ್ಲಿ ಸಮಗೊಂಡಿದೆ.

ಇದನ್ನೂ ಓದಿ: ಕೇಂದ್ರ ಸಚಿವರಿಗೆ ಕ್ರಿಕೆಟರ್ ಹನುಮಾ ವಿಹಾರಿ ಕೊಟ್ಟ ಟಾಂಗ್ ಏನು ಗೊತ್ತಾ?

ಈಗ ಅಶ್ವಿನ್ (R.Ashwin) ಜೊತೆಗಿನ ವಿಚಾರವಾಗಿ ಪ್ರಸ್ತಾಪಿಸಿದ ಪೈನ್ ಅವರು "ನಾನು ವರ್ತಿಸಿದ ವಿಷಯಗಳ ಬಗ್ಗೆ ಕ್ಷಮೆಯಾಚಿಸಲು ನಾನು ಬಯಸುತ್ತೇನೆ, ನಾನು ಈ ತಂಡವನ್ನು ಮುನ್ನಡೆಸುವ ಹಾದಿಯಲ್ಲಿ ತನ್ನನ್ನು ತಾನು ಹೆಮ್ಮೆಪಡುವವನು ಮತ್ತು ನಿನ್ನೆ ಅದರ ಕಳಪೆ ಪ್ರತಿಬಿಂಬವಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆಡಲು ಸಿದ್ದ ಎಂದ ವೀರೇಂದ್ರ ಸೆಹ್ವಾಗ್...!

'ನನ್ನ ನಾಯಕತ್ವವು ಉತ್ತಮವಾಗಿಲ್ಲ, ಹೀಗಾಗಿ ಆಟದ ಒತ್ತಡಕ್ಕೆ ಒಳಗಾಗಿ ನಾನು ಹೀಗೆ ವರ್ತಿಸಿದೆ. ನಾನು ಮನುಷ್ಯ, ನಿನ್ನೆ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಲು ಬಯಸುತ್ತೇನೆ...ಕಳೆದ 18 ತಿಂಗಳುಗಳಲ್ಲಿ ನಾವು ನಿಜವಾಗಿಯೂ ಉನ್ನತ ಗುಣಮಟ್ಟವನ್ನು ಹೊಂದಿದ್ದೇವೆ ಮತ್ತು ನಿನ್ನೆ ಅದು ಸ್ವಲ್ಪ ಮಟ್ಟಿಗೆ ಕುಸಿಯಿತು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News