ಬ್ರಿಸ್ಬೇನ್: ಇಲ್ಲಿನ ಗಬ್ಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಆತಿಥೇಯ ಆಸ್ಟ್ರೇಲಿಯಾ ತಂಡವು ಡಕ್ವರ್ತ್ ಲೂಯಿಸ್ ಅನ್ವಯ 4 ರನ್ ಅಂತರದ ಗೆಲುವನ್ನು ಸಾಧಿಸಿದೆ.
Australia win by four runs by the DLS method!
An excellent last over from Marcus Stoinis gets Australia over the line. He dismissed the dangermen Krunal Pandya and Dinesh Karthik. #AUSvIND FOLLOW 👇https://t.co/TpS5WMZxTP pic.twitter.com/vjP3MJfaKY
— ICC (@ICC) November 21, 2018
ಆ ಮೂಲಕ ಮೂರು ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.ಮಳೆ ಕಾರಣದಿಂದ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 17 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.ಇದಾದ ನಂತರ ಡಕ್ವರ್ತ್ ನಿಯಮದ ಪ್ರಕಾರ ಭಾರತಕ್ಕೆ 174 ರನ್ ಗಳ ಗುರಿಯನ್ನು ನೀಡಲಾಯಿತು.
ಈ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡವು ಶಿಖರ್ ಧವನ್(76) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆಲುವಿನ ಹತ್ತಿರ ಬಂದು ಸೋಲನ್ನು ಅನುಭವಿಸಿತು.ಇನ್ನೊಂದೆಡೆಗೆ ಆಸ್ಟ್ರೇಲಿಯಾದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಗ್ಲೆನ್ ಮಾಕ್ಸ್ವೆಲ್ (46),ಕ್ರಿಸ್ ಲೈನ್ (37) ಅವರ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ತ ಗಳಿಸಿತು.