ಶಾರುಖ್ ಖಾನ್, ಕ್ರಿಸ್ಟಿಯಾನೋ ರೋನಾಲ್ಡೋ ಸಾಲಿಗೆ ಸೇರಿದ ಸಾನಿಯಾ ಮಿರ್ಜಾ

ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಂಜಯ್ ದತ್ ನಂತರ ಈಗ ದುಬೈ ಗೋಲ್ಡನ್ ವೀಸಾ ಪಡೆದ ಮೂರನೇ ಭಾರತೀಯಳು ಎನ್ನುವ ಹೆಗ್ಗಳಿಕೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ.

Written by - Zee Kannada News Desk | Last Updated : Jul 16, 2021, 09:47 PM IST
  • ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಂಜಯ್ ದತ್ ನಂತರ ಈಗ ದುಬೈ ಗೋಲ್ಡನ್ ವೀಸಾ ಪಡೆದ ಮೂರನೇ ಭಾರತೀಯಳು ಎನ್ನುವ ಹೆಗ್ಗಳಿಕೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ.
  • ಸಾನಿಯಾ ಮತ್ತು ಶೋಯೆಬ್ ಕೂಡ ಶೀಘ್ರದಲ್ಲೇ ತಮ್ಮ ಕ್ರೀಡಾ ಅಕಾಡೆಮಿಯನ್ನು ಟೆನಿಸ್ ಮತ್ತು ಕ್ರಿಕೆಟ್ ತರಬೇತಿಯನ್ನು ದುಬೈಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಶಾರುಖ್ ಖಾನ್, ಕ್ರಿಸ್ಟಿಯಾನೋ ರೋನಾಲ್ಡೋ ಸಾಲಿಗೆ ಸೇರಿದ ಸಾನಿಯಾ ಮಿರ್ಜಾ  title=
ಸಂಗ್ರಹ ಚಿತ್ರ

ನವದೆಹಲಿ: ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಂಜಯ್ ದತ್ ನಂತರ ಈಗ ದುಬೈ ಗೋಲ್ಡನ್ ವೀಸಾ ಪಡೆದ ಮೂರನೇ ಭಾರತೀಯಳು ಎನ್ನುವ ಹೆಗ್ಗಳಿಕೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ.

ಆ ಮೂಲಕ ಈಗ ಪತಿ ಶೋಯೆಬ್ ಮಲಿಕ್ ಅವರ ಜೊತೆಗೆ ಅವರು ಯುಎಇಯಲ್ಲಿ 10 ವರ್ಷಗಳ ವಾಸದ ಅವಕಾಶವನ್ನು ಪಡೆಯಲಿದ್ದಾರೆ.ಇದಕ್ಕೂ ಮೊದಲು ಯುಎಇ ಗೋಲ್ಡನ್ ವೀಸಾ ಪಡೆದವರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಪಾಲ್ ಪೊಗ್ಬಾ ಮತ್ತು ನೊವಾಕ್ ಜೊಕೊವಿಕ್ ಅವರಂತಹ ಇತರ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳು ಸೇರಿದ್ದಾರೆ.

ಇದನ್ನೂ ಓದಿ: ಏನೇ ಆಗಲಿ ಭಾರತಕ್ಕೆ ಬೆಂಬಲಿಸೋದು ಎಂದು ಶೋಯಬ್ ಮಲಿಕ್ ಗೆ ಸ್ಪಷ್ಟಪಡಿಸಿದ್ದ ಸಾನಿಯಾ ..!

'ಮೊದಲಿಗೆ ನಾನು ದುಬೈ ಗೋಲ್ಡನ್ ವೀಸಾವನ್ನು ನೀಡಿದ್ದಕ್ಕಾಗಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.ದುಬೈ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಹತ್ತಿರವಾಗಿದೆ ಎಂದು ಸಾನಿಯಾ (Sania Mirza) ಹೇಳಿದರು.

ಇದನ್ನೂ ಓದಿ: Wimbledon 2021: ರೋಹನ್ ಬೋಪಣ್ಣ, ಸಾನಿಯಾ ಮಿರ್ಜಾ ಜೋಡಿಗೆ ಗೆಲುವಿನ ಆರಂಭ

'ಇದು ನನ್ನ ಎರಡನೇ ಮನೆ ಮತ್ತು ನಾವು ಇಲ್ಲಿ ಹೆಚ್ಚು ಸಮಯ ಕಳೆಯಲು ಎದುರು ನೋಡುತ್ತಿದ್ದೇವೆ.ಭಾರತದಿಂದ ಆಯ್ಕೆಯಾದ ಕೆಲವೇ ಕೆಲವು ನಾಗರಿಕರಲ್ಲಿ ಒಬ್ಬರಾಗಿರುವುದರಿಂದ ಇದು ನಮಗೆ ಸಂಪೂರ್ಣ ಗೌರವವನ್ನು ತರುತ್ತದೆ. ಮುಂದಿನ ಎರಡು ತಿಂಗಳಲ್ಲಿ ತೆರೆಯುವ ಗುರಿ ಹೊಂದಿರುವ ನಮ್ಮ ಟೆನಿಸ್ ಮತ್ತು ಕ್ರಿಕೆಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕೆಲಸ ಮಾಡಲು ಇದು ನಮಗೆ ಅವಕಾಶ ನೀಡುತ್ತದೆ"ಎಂದು ಅವರು ಹೇಳಿದರು.

ಇದನ್ನೂ ಓದಿ: SRH ತಂಡದ ಮೇಲೆ ಅಸಮಾಧಾನ ಹೊರಹಾಕಿದ ಸಾನಿಯಾ ಮಿರ್ಜಾ ತಂದೆ..!

ಸಾನಿಯಾ ಮತ್ತು ಶೋಯೆಬ್ ಕೂಡ ಶೀಘ್ರದಲ್ಲೇ ತಮ್ಮ ಕ್ರೀಡಾ ಅಕಾಡೆಮಿಯನ್ನು ಟೆನಿಸ್ ಮತ್ತು ಕ್ರಿಕೆಟ್ ತರಬೇತಿಯನ್ನು ದುಬೈನಲ್ಲಿ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ.ಜುಲೈ 23 ರಿಂದ ಆರಂಭವಾಗಲಿರುವ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನ ಡಬಲ್ಸ್ ಪಂದ್ಯಾವಳಿಯಲ್ಲಿ ಸಾನಿಯಾ ಅಂಕಿತಾ ರೈನಾ ಅವರೊಂದಿಗೆ ಪಾಲುದಾರರಾಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News