Unbreakable world records in cricket history: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್‌ಮನ್’ಗಳು ಮತ್ತು ಬೌಲರ್’ಗಳು ತಮ್ಮ ಮ್ಯಾಜಿಕ್’ನಿಂದ ಕ್ರಿಕೆಟ್ ಆಟದ ಮೋಜನ್ನು ದ್ವಿಗುಣಗೊಳಿಸಿದ್ದಾರೆ. ಅದರಲ್ಲೂ ಕ್ರಿಕೆಟ್ ಜಗತ್ತಿನ ಕೆಲ ದಾಖಲೆಗಳನ್ನು ನೋಡಿದರೆ ಮೈ ರೋಮಾಂಚನವಾಗುತ್ತದೆ. ಅಂತಹ ದಾಖಲೆಗಳಲ್ಲಿ ಕೆಲವು ಬ್ರೇಕ್ ಆಗಿದ್ದರೆ ಇನ್ನೂ ಕೆಲವನ್ನು ಮುಟ್ಟಲೂ ಸಹ ಸಾಧ್ಯವಾಗಿಲ್ಲ. ಅವುಗಳ ಬಗ್ಗೆ ನಾವಿಂದು ವರದಿಯಲ್ಲಿ ಉಲ್ಲೇಖಿಸಲಿದ್ದೇವೆ.
ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟ್ರೀಯ ಶತಕ:
ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ಸಚಿನ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಅಸಾಧ್ಯದ ಮಾತು. ಆದರೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 80 ಶತಕ ಸಿಡಿಸಿದ್ದಾರೆ. ಸಚಿನ್ ತಮ್ಮ ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಎಲ್ಲಾ ಮಾದರಿಗಳು ಸೇರಿದಂತೆ ಒಟ್ಟು 100 ಅಂತಾರಾಷ್ಟ್ರೀಯ ಶತಕಗಳಿವೆ. ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಎಲ್ಲಾ ಫಾರ್ಮ್ಯಾಟ್’ಗಳನ್ನು ಒಳಗೊಂಡಂತೆ ಒಟ್ಟು 201 ವಿಕೆಟ್ಗಳನ್ನು ಪಡೆದಿದ್ದಾರೆ.
ಸರ್ ಡಾನ್ ಬ್ರಾಡ್ಮನ್ ಸರಾಸರಿ:
ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಡೊನಾಲ್ಡ್ ಬ್ರಾಡ್ಮನ್ ತಮ್ಮ ಜೀವನದಲ್ಲಿ ಕೇವಲ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರಿಗಿಂತ ಉತ್ತಮ ಬ್ಯಾಟ್ಸ್ ಮನ್ ಕ್ರಿಕೆಟ್ ಲೋಕದಲ್ಲಿ ಹುಟ್ಟಿಲ್ಲ, ಹುಟ್ಟೋದು ಇಲ್ಲ ಅನಿಸುತ್ತದೆ.. ಡೊನಾಲ್ಡ್ ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ 6996 ಟೆಸ್ಟ್ ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಬ್ಯಾಟಿಂಗ್ ಸರಾಸರಿ 99.94. ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ. ಈ ದಾಖಲೆಯನ್ನು ಮುರಿಯಲು ಇಂದಿನವರೆಗೆ ಯಾವುದೇ ಬ್ಯಾಟ್ಸ್‌ಮನ್’ನಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಟೆಸ್ಟ್’ನಲ್ಲಿ ಗರಿಷ್ಠ 12 ದ್ವಿಶತಕಗಳು ಕೂಡ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಜೊತೆಗೆ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ 5028 ರನ್ ಗಳಿಸಿದ್ದಾರೆ.
ಬ್ರಿಯಾನ್ ಲಾರಾ ಟೆಸ್ಟ್ ಪಂದ್ಯದಲ್ಲಿ 400 ರನ್:
ವೆಸ್ಟ್ ಇಂಡೀಸ್’ನ ಮಾಜಿ ನಾಯಕ ಬ್ರಿಯಾನ್ ಲಾರಾ ಕ್ರಿಕೆಟ್ ಇತಿಹಾಸದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದೆನಿಸಲ್ಪಟ್ಟಿದ್ದಾರೆ. ಲಾರಾ 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 400 ರನ್ ಗಳಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಇಲ್ಲಿಯವರೆಗೆ, ಟೆಸ್ಟ್ ಪಂದ್ಯದಲ್ಲಿ ಬ್ರಿಯಾನ್ ಲಾರಾ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಯಾವುದೇ ಬ್ಯಾಟ್ಸ್‌ಮನ್‌ಗೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಬ್ರಿಯಾನ್ ಲಾರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಜೇಯ 501 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಓರ್ವ ಆಟಗಾರ ಗಳಿಸಿದ ಅತ್ಯಧಿಕ ರನ್ ಇದಾಗಿದೆ..
ಮುತ್ತಯ್ಯ ಮುರಳೀಧರನ್ 1347 ಅಂತಾರಾಷ್ಟ್ರೀಯ ವಿಕೆಟ್’ಗಳು
ಶ್ರೀಲಂಕಾದ ಲೆಜೆಂಡರಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 1347 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್’ಗೆ ಸಾಧ್ಯವಾಗಿಲ್ಲ. ಮುತ್ತಯ್ಯ ಮುರಳೀಧರನ್ ತಮ್ಮ ವೃತ್ತಿಜೀವನದಲ್ಲಿ 133 ಟೆಸ್ಟ್, 350 ODI ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಎಲ್ಲದರಲ್ಲೂ ಒಟ್ಟು 1347 ವಿಕೆಟ್ಗಳನ್ನು ಪಡೆದಿದ್ದಾರೆ.
ರೋಹಿತ್ ಶರ್ಮಾ 264 ರನ್
ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಅತ್ಯುತ್ತಮ ಹಿಟ್ಟರ್ ಎಂದು ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಇದು ಯಾವುದೇ ಬ್ಯಾಟ್ಸ್‌ಮನ್ ಮಾಡಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನದಲ್ಲಿ 3 ಬಾರಿ ದ್ವಿಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಅವರ ಈ ವಿಶ್ವ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ. ರೋಹಿತ್ ಶರ್ಮಾ ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ಶತಕ (5) ಗಳಿಸಿದ್ದಾರೆ. ಇದು ಒಂದೇ ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಶತಕಗಳ ವಿಶ್ವ ದಾಖಲೆಯಾಗಿದೆ.
ಇದನ್ನೂ ಓದಿ: ವಿರಾಟ್ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಲು ಕಾರಣ ಈ ಸ್ಟಾರ್ ಕ್ರಿಕೆಟಿಗ! ಅಂದು ಕೊಹ್ಲಿ ಹೆಸರು ಸೂಚಿಸಿದ್ದು ಯಾರು ಗೊತ್ತಾ?
ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ:
2015ರಲ್ಲಿ ಜೋಹಾನ್ಸ್ ಬರ್ಗ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ 149 ರನ್ ಗಳಿಸಿದ್ದರು. ಈ ಇನ್ನಿಂಗ್ಸ್’ನಲ್ಲಿ 16 ಸಿಕ್ಸರ್ ಮತ್ತು 9 ಬೌಂಡರಿ ಸೇರಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ