Haris Rauf Fight Video Viral: ಟಿ20 ವಿಶ್ವಕಪ್’ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನಿ ಆಟಗಾರರನ್ನು ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ಹೊಸ ಕೋಚ್ ಗ್ಯಾರಿ ಕರ್ಸ್ಟನ್ ಕೂಡ ಈ ಬಗ್ಗೆ ಮಾತನಾಡಿದ್ದು, “ತಂಡದಲ್ಲಿ ಶಿಸ್ತಿನ ಕೊರತೆ ಇದ್ದು, ಆಟಗಾರರು ಪರಸ್ಪರ ಬೆಂಬಲಿಸುತ್ತಿಲ್ಲ” ಎಂದು ಹೇಳಿದ್ದರು.
ಇದೀಗ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ರನ್ ಕೊರತೆ ಕಂಡುಬಂದಿದ್ದು ಮಾತ್ರವಲ್ಲ, ಸದ್ಯ ಎದುರಾಗಿರುವ ವಿವಾದವೂ ಕೂಡ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ ನಟ ದರ್ಶನ್’ಗೆ ಸಿಗುತ್ತೆ ಈ ಕಠಿಣ ಶಿಕ್ಷೆ!!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಹ್ಯಾರಿಸ್ ರೌಫ್ ಅಮೆರಿಕದಲ್ಲಿ ಅಭಿಮಾನಿಯೊಬ್ಬನ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ಪತ್ನಿ ಮುಜ್ನಾ ಮಸೂದ್ ಮಲಿಕ್ ತಡೆಯಲು ಯತ್ನಿಸಿದರೂ ಸಿಟ್ಟಿನಿಂದ ಆತನ ವಿರುದ್ಧ ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಹ್ಯಾರಿಸ್ ರೌಫ್ ಅವರನ್ನು ತಡೆದಿರುವುದು ಕಾಣಿಸುತ್ತದೆ.
A heated argument between Haris Rauf and a fan in the USA. pic.twitter.com/d2vt8guI1m
— Mufaddal Vohra (@mufaddal_vohra) June 18, 2024
ಟಿ20 ವಿಶ್ವಕಪ್’ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪಾಕಿಸ್ತಾನ ಸೋಲನುಭವಿಸಿತ್ತು. ಆ ನಂತರ ಭಾರತದ ವಿರುದ್ಧವೂ ನ್ಯೂಯಾರ್ಕ್’ನಲ್ಲಿ ಸೋಲು ಕಂಡಿತ್ತು. ಇದರ ನಂತರ ಪಾಕಿಸ್ತಾನ ಕಂಬ್ಯಾಕ್ ಮಾಡಿ, ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಸೂಪರ್-8 ತಲುಪಲು ಸಾಧ್ಯವಾಗಲಿಲ್ಲ.
ಭಾರತ 4 ಪಂದ್ಯಗಳಲ್ಲಿ 7 ಅಂಕ ಪಡೆದು ಎ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿತು. ಮಳೆಯಿಂದಾಗಿ ರದ್ದಾದ ಐರ್ಲೆಂಡ್ ವಿರುದ್ಧದ ಪಂದ್ಯದ ಲಾಭ ಅಮೆರಿಕಕ್ಕೆ ಸಿಕ್ಕಿತ್ತು. ಈ ಮೂಲಕ ಆಡದೇ ಒಂದು ಪಾಯಿಂಟ್ ಅವರ ಖಾತೆಗೆ ಸೇರ್ಪಡೆಯಾಯಿತು. 4 ಪಂದ್ಯಗಳಲ್ಲಿ 5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಸೂಪರ್-8 ತಲುಪಿತು. ಇದರ ಜೊತೆಗೆ ಪಾಕಿಸ್ತಾನದೊಂದಿಗೆ ಕೆನಡಾ ಮತ್ತು ಐರ್ಲೆಂಡ್ ತಂಡಗಳು ಹೊರಬಿದ್ದಿವೆ.
ವಿವಾದದ ಬಗ್ಗೆ ಹ್ಯಾರಿಸ್ ರೌಫ್ ಹೇಳಿಕೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹ್ಯಾರಿಸ್ ರೌಫ್ ಸ್ಪಷ್ಟನೆ ನೀಡಿದ್ದಾರೆ. "ನಾನು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ತರದಿರಲು ನಿರ್ಧರಿಸಿದ್ದೆ, ಆದರೆ ಈಗ ವೀಡಿಯೊ ವೈರಲ್ ಆಗಿದ್ದು, ಈ ಪರಿಸ್ಥಿತಿಯ ಬಗ್ಗೆ ವಿವರಿಸುವುದು ಮುಖ್ಯ ಎಂದುಕೊಳ್ಳುತ್ತೇನೆ" ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲ
“ನಾನು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ, ಸಾರ್ವಜನಿಕರಿಂದ ಬರುವ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮುಕ್ತರಾಗಿದ್ದೇವೆ. ನಮ್ಮನ್ನು ಬೆಂಬಲಿಸುವ ಅಥವಾ ಟೀಕಿಸುವ ಹಕ್ಕು ಅವರಿಗೆ ಇದೆ, ಆದರೆ ನನ್ನ ತಂದೆ ತಾಯಿ ಮತ್ತು ನನ್ನ ಕುಟುಂಬದ ವಿಷಯಕ್ಕೆ ಬಂದರೆ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ನಾನು ಹಿಂಜರಿಯುವುದಿಲ್ಲ. ಯಾರೇ ಆಗಲಿ, ಅವರ ವೃತ್ತಿ ಯಾವುದೇ ಇರಲಿ, ತಮ್ಮ ಕುಟುಂಬಗಳಿಗೆ ಗೌರವವನ್ನು ತೋರಿಸುವುದು ಮುಖ್ಯ” ಎಂದು ಬರೆದುಕೊಂಡಿದ್ದಾರೆ.
— Haris Rauf (@HarisRauf14) June 18, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ