VIDEO: ವಿಚಿತ್ರವಾಗಿ ಔಟಾದ ಬ್ಯಾಟ್ಸ್ ಮನ್, ಆತನ ಮೂರ್ಖತನಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ

Viral Video - ಕರಾಚಿಯಲ್ಲಿ (Karachi) ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (PAK VS AUS) ನಡುವೆ ಎರಡನೇ ಟೆಸ್ಟ್ ಪಂದ್ಯ (Pak Vs Aus 2nd Test) ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಪಾಕ್ ಬ್ಯಾಟ್ಸ್‌ಮನ್ ವೋಬ್ಬರು ವಿಚಿತ್ರ ರೀತಿಯಲ್ಲಿ ಔಟಾಗುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.  

Written by - Nitin Tabib | Last Updated : Mar 16, 2022, 03:45 PM IST
  • ವಿಚಿತ್ರ ರೀತಿಯಲ್ಲಿ ಔಟಾದ ಬ್ಯಾಟ್ಸ್‌ಮನ್
  • DRS ತೆಗೆದುಕೊಳ್ಳದಿರುವುದು ಬ್ಯಾಟ್ಸ್‌ಮನ್‌ಗೆ ದುಬಾರಿ ಪರಿಣಮಿಸಿದೆ
  • ನಾಟೌಟ್ ಇದ್ದರೂ ಕೂಡ ಔಟಾದ ಬ್ಯಾಟ್ಸ್ ಮನ್
VIDEO: ವಿಚಿತ್ರವಾಗಿ ಔಟಾದ ಬ್ಯಾಟ್ಸ್ ಮನ್, ಆತನ ಮೂರ್ಖತನಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ title=
Viral Video (Video Grab)

ನವದೆಹಲಿ: Viral Video - ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿಯ ಎರಡನೇ ಪಂದ್ಯ (Cricket News) ನಡೆಯುತ್ತಿದೆ. ಆಸ್ಟ್ರೇಲಿಯಾ ತಂಡ 24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಪ್ರವಾಸದಲ್ಲಿ ತನ್ನ ಮೊದಲ ಗೆಲುವಿಗಾಗಿ ಕಾಯುತ್ತಿದೆ. ಈ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ವಿಚಿತ್ರ ಘಟನೆ ನಡೆದಿದೆ. ಪಾಕಿಸ್ತಾನದ ಇನಿಂಗ್ಸ್‌ನ 23ನೇ ಓವರ್‌ನಲ್ಲಿ ಅಜರ್ ಅಲಿ (Azhar Ali) ಔಟಾದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಜರ್ ಅಲಿ ಪಾಕಿಸ್ತಾನ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಆದರೆ ಅಜರ್ ಔಟಾದ ರೀತಿ ಮೂರ್ಖತನಕ್ಕಿಂತ ಕಮ್ಮಿಯೇನಿಲ್ಲ ಎನ್ನಲಾಗುತ್ತಿದೆ.

ವಿಚಿತ್ರವಾಗಿ ಔಟಾದ ಅಜರ್ 
ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಕ್ಯಾಮರೂನ್ ಗ್ರೀನ್, 23 ನೇ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ತನ್ನ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದ ಕ್ಯಾಮರೂನ್ ಗ್ರೀನ್ (Cameron Green), ತಮ್ಮ ಮೊದಲ ಬಾಲ್ ಅನ್ನು ಶಾರ್ಟ್ ಬಾಲ್ ಮಾಡಿದ್ದಾರೆ. ಅಜರ್ ಆ ಬಾಲನ್ನು ಹಾಗೆಯೇ ಬಿಡಲು ನಿರ್ಧರಿಸಿದ್ದರು, ಆದರೆ, ಬಾಲ್ ಬಂದು ಅವರ ದೇಹಕ್ಕೆ ತಗುಲಿದೆ. ನಂತರ ಆಸ್ಟ್ರೇಲಿಯಾದ ಆಟಗಾರರು ಅಪೀಲ್ ಮಾಡಿದ್ದಾರೆ ಮತ್ತು ಅಂಪೈರ್ LBW ಔಟ್ (LBW Out) ಎಂದು ತೀರ್ಪು ನೀಡಿದ್ದಾರೆ. ಈ ಸಂದರ್ಭದಲ್ಲಿ ನಾನ್ ಸ್ಟ್ರೈಕ್ ನಲ್ಲಿ ನಿಂತಿದ್ದ ಅಬ್ದುಲ್ಲಾ ಶಫೀಕ್ ಜೊತೆ ಅಜರ್ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಆದರೆ. ಅಷ್ಟೊತ್ತಿಗಾಗಲೇ DRS ತೆಗೆದುಕೊಳ್ಳುವ ಸಮಯಾವಕಾಶ ಮೀರಿ ಹೋಗಿದೆ. ಪಾಕಿಸ್ತಾನದ ಬಳಿ ಕೇವಲ ಎರಡು ರಿವ್ಯೂಗಳು ಮಾತ್ರ ಉಳಿದಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-Kohli Mumbai House : ₹34 ಕೋಟಿ ಮೌಲ್ಯದ ಕೊಹ್ಲಿ - ಅನುಷ್ಕಾ ಮುಂಬೈನ ಅದ್ದೂರಿ ಮನೆ ಹೇಗಿದೆ ನೋಡಿ

ನಾಟ್ ಔಟ್ ಆಗಿದ್ದರೂ ಕೂಡ ಔಟ್ ಆದ ಅಜರ್
ಅಜರ್ ಅಲಿ ತಾವು ಔಟಾದ ಬಳಿಕ ರಿವ್ಯೂ ತೆಗೆದುಕೊಳ್ಳಲಿಲ್ಲ ಮತ್ತು ಹಾಗೆಯೇ ಪೆವಿಲಿಯನ್ ಗೆ ಮರಳಿದ್ದಾರೆ. ಆದರೆ, ರಿಪ್ಲೇ ನಲ್ಲಿ ಚೆಂಡು ಅವರ ಗ್ಲೌಸ್ ಗೆ ತಾಕಿ ಹೋಗಿರುವಂತೆ ಗೋಚರಿಸಿದೆ. ಒಂದು ವೇಳೆ ಅಜರ್ ರಿವ್ಯೂ ಪಡೆದುಕೊಂಡಿದ್ದರೆ, ಅವರು ನಾಟ್ ಔಟ್ ಉಳಿಯುತ್ತಿದ್ದರು. ಆದರೆ, ಅಜರ್ ಹಾಗೆ ಮಾಡಲಿಲ್ಲ ಮತ್ತು ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ತಮಾಷೆ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ-IPL 2022: ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ! ದಾಳಿಕೋರರನ್ನು ಬಂಧಿಸಿದ ಪೊಲೀಸರು

ಈ ರೀತೀ ಔಟಾಗಿದ್ದಾರೆ ಅಜರ್ ಅಲಿ

ಇದನ್ನೂ ಓದಿ-IPL 2022: ಐಪಿಎಲ್‌ನಲ್ಲಿ ಎಚ್ಚರಿಕೆ ವಹಿಸದಿದ್ದರೆ ಆಘಾತ ಗ್ಯಾರಂಟಿ! ಪ್ಲೇಯರ್ಸ್ ತಪ್ಪಿಗೆ ಬಿಸಿಸಿಐ ವಿಧಿಸುವ ದಂಡ ಎಷ್ಟು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News