ಭಾರತ- ಪಾಕ್ ನಡುವೆ ಏಕದಿನ ಸರಣಿ..! ರಮೀಜ್ ರಾಜಾ ಹೇಳಿದ್ದೇನು?

ಭಾರತ-ಪಾಕ್ ನಡುವೆ ಏಕದಿನ ಸರಣಿ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷ ರಮೀಜ್ ರಾಜಾ ಅವರು ನಾಲ್ಕು ದೇಶಗಳ ನಡುವಿನ ಏಕದಿನ ಸರಣಿಯನ್ನು ಪ್ರಸ್ತಾಪಿಸಿದ್ದಾರೆ.

Written by - Zee Kannada News Desk | Last Updated : Mar 15, 2022, 07:10 PM IST
  • ಇದೇ ಮಾರ್ಚ್ 19 ರಂದು ಏಷ್ಯಾ ಕ್ರಿಕೆಟ್ ಮಂಡಳಿ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಮೀಜ್ ರಾಜಾ ಅವರ ಹೇಳಿಕೆ ಬಂದಿದೆ.
ಭಾರತ- ಪಾಕ್ ನಡುವೆ ಏಕದಿನ ಸರಣಿ..! ರಮೀಜ್ ರಾಜಾ ಹೇಳಿದ್ದೇನು?   title=

ನವದೆಹಲಿ: ಭಾರತ-ಪಾಕ್ ನಡುವೆ ಏಕದಿನ ಸರಣಿ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷ ರಮೀಜ್ ರಾಜಾ ಅವರು ನಾಲ್ಕು ದೇಶಗಳ ನಡುವಿನ ಏಕದಿನ ಸರಣಿಯನ್ನು ಪ್ರಸ್ತಾಪಿಸಿದ್ದಾರೆ.

ಭಾರತವು ಈಗಾಗಲೇ ಏಕದಿನ ಸರಣಿಗೆ ನಿರಾಸಕ್ತಿ ತೋರಿಸಿರುವ ಹಿನ್ನಲೆಯಲ್ಲಿ ಈಗ ರಮೀಜ್ ರಾಜಾ ಅವರು ನಾಲ್ಕು ದೇಶಗಳ ನಡುವಿನ ಸರಣಿಯನ್ನು ಪ್ರಸ್ತಾಪಿಸಿದ್ದಾರೆ.ಇದೇ ಮಾರ್ಚ್ 19 ರಂದು ಏಷ್ಯಾ ಕ್ರಿಕೆಟ್ ಮಂಡಳಿ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಮೀಜ್ ರಾಜಾ ಅವರ ಹೇಳಿಕೆ ಬಂದಿದೆ.

ಇದನ್ನೂ ಓದಿ: Karnataka Hijab Controversy: ಹಿಜಾಬ್ ವಿವಾದದಲ್ಲಿ HC ತೀರ್ಪಿನ ಕುರಿತು AIMIM ಮುಖ್ಯಸ್ಥ Asaduddin Owaisi ಹೇಳಿದ್ದೇನು?

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿರುವ ರಮೀಜ್ ರಾಜಾ "ಭಾರತ ಮತ್ತು ಪಾಕಿಸ್ತಾನದ ಆಟಗಾರರು ಪರಸ್ಪರ ಹೆಚ್ಚಾಗಿ ಆಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಇತರ ಸದಸ್ಯ ರಾಷ್ಟ್ರಗಳಿಗೆ ಆದಾಯವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಳಗೊಂಡಿರುವ ಪಂದ್ಯಾವಳಿಯನ್ನು ಪ್ರಸ್ತಾಪಿಸಿದ್ದೇನೆ ಎಂದು ರಮೀಜ್ (Ramiz Raja) ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ನಾವು ದುಬೈನಲ್ಲಿ ಎಸಿಸಿ ಸಭೆಗೆ ಭೇಟಿಯಾದಾಗ ಸೌರವ್ ಗಂಗೂಲಿ (Sourav Ganguly) ಅವರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ.ನಾವಿಬ್ಬರೂ ಮಾಜಿ ನಾಯಕರು ಮತ್ತು ಆಟಗಾರರು ಮತ್ತು ನಮಗೆ ಕ್ರಿಕೆಟ್ ರಾಜಕೀಯವಲ್ಲ,'' ಎಂದು ಹೇಳಿದರು.

ಈ ಪ್ರಸ್ತಾಪದಲ್ಲಿ ಭಾರತವು ನಮ್ಮ ಪರವಾಗಿ ಇರದಿದ್ದರೂ ಸಹ, ಪಾಕಿಸ್ತಾನದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನೊಂದಿಗೆ ವಾರ್ಷಿಕ ಮೂರು ರಾಷ್ಟ್ರಗಳ ಕಾರ್ಯಕ್ರಮವನ್ನು ಪ್ರಾರಂಭಿಸುವ ಬಗ್ಗೆ ನಾವು ಯೋಚಿಸುತ್ತೇವೆ,'' ಎಂದು ಅವರು ಹೇಳಿದರು.

ಇದೇ ವೇಳೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಭಾಗವಹಿಸಲು ಭಾರತ ತಂಡವು ಪಾಕ್ ಗೆ ಬರಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು."ಅವರು ಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ ನಾವು ಏನು ಮಾಡಬಹುದೆಂದು ನೋಡೋಣ" ಎಂದು ಅವರು ಹೇಳಿದರು.

ಇದನ್ನೂ ಓದಿ : Hijab Row: ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಡಿಕೆಶಿ ಮನವಿ

ಶ್ರೀಲಂಕಾ ಈ ವರ್ಷ ಏಷ್ಯಾ ಕಪ್ T20 ಸ್ವರೂಪದ ಟೂರ್ನಿಯನ್ನು ಆಯೋಜಿಸಲಿದೆ ಮತ್ತು ಪಂದ್ಯಾವಳಿಯ ಅಂತಿಮ ದಿನಾಂಕಗಳನ್ನು ದುಬೈನಲ್ಲಿ ಅಂತಿಮಗೊಳಿಸಲಾಗುವುದು ಮತ್ತು ಇದು ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ T20 ವಿಶ್ವಕಪ್ ಮೊದಲು ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News