Virat Kohli Birthday Special: ಅಪ್ಪನ ಕನಸು-ಅಣ್ಣನಿಗೆ ಕೊಟ್ಟ ಮಾತು…ವಿರಾಟ್ ಕೊಹ್ಲಿ ಜೀವನದ ಈ ಕಣ್ಣೀರ ಕಥೆ ಕೇಳಿ

Virat Kohli Birthday Special: ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ನಾವೆಲ್ಲರೂ ಅವರನ್ನು ದಾಖಲೆಗಳ ವೀರ ಎಂದು ಪ್ರೀತಿಯಿಂದ ಕರೆಯುವುದುಂಟು. ಇನ್ನು ರನ್ ಮಷಿನ್ ಈ ಸಾಧನೆ ಮಾಡಬೇಕಾದರೆ, ಸುಖದ ಹಾದಿಯಲ್ಲಿ ಬಂದವರಲ್ಲ. ಪ್ರತಿಯೊಂದು ಹೆಜ್ಜೆಯಲ್ಲೂ ಕಲ್ಲು-ಮುಳ್ಳುಗಳನ್ನು ದಾಟಿ ಬಂದಿದ್ದಾರೆ.

Written by - Bhavishya Shetty | Last Updated : Nov 5, 2022, 10:25 AM IST
    • ಭಾರತದ ಕ್ರೀಡಾ ಕ್ಷೇತ್ರದ ಸಾಧಕ ವಿರಾಟ್ ಕೊಹ್ಲಿಗೆ ಇಂದು ಜನುಮದಿನದ ಸಂಭ್ರಮ
    • ವಿರಾಟ್ ಯಶಸ್ಸಿನ ಹಿಂದೆ ಎಂದೂ ಮರೆಯಲಾಗದ ಕಣ್ಣೀರಿನ ಸಾಗರವಿದೆ
    • ಕೊಹ್ಲಿ ಜೀವನದ ಮಹತ್ವದ ಕ್ಷಣದ ಬಗ್ಗೆ ತಿಳಿದುಕೊಳ್ಳೋಣ
Virat Kohli Birthday Special: ಅಪ್ಪನ ಕನಸು-ಅಣ್ಣನಿಗೆ ಕೊಟ್ಟ ಮಾತು…ವಿರಾಟ್ ಕೊಹ್ಲಿ ಜೀವನದ ಈ ಕಣ್ಣೀರ ಕಥೆ ಕೇಳಿ  title=
Virat Kohli

Virat Kohli Birthday Special : ಬರೋವರೆಗೂ ಇಷ್ಟು ಸುಲಭವಾಗಿ ಶತಕ ಸಿಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ಕ್ರೀಸ್ ಗೆ ಕಾಲಿಡುವವರೆಗೂ ಕ್ರಿಕೆಟ್ ನಲ್ಲಿ ಇಂಥಾ ಹೊಡೆತಗಳು ಬರುತ್ತೆ ಅಂತ ಊಹಿಸಲೂ ಇರಲಿಲ್ಲ. ದಾಖಲೆಗಳನ್ನೇ ತನ್ನ ಬತ್ತಳಿಕೆ ಸೇರಿಸಿಕೊಳ್ಳುತ್ತಿರುವ ಭಾರತದ ಕ್ರೀಡಾ ಕ್ಷೇತ್ರದ ಸಾಧಕ, ವಿರಾಟ್ ಕೊಹ್ಲಿಗೆ ಇಂದು ಜನುಮದಿನದ ಸಂಭ್ರಮ.

34ನೇ ವರ್ಷಕ್ಕೆ ಕಾಲಿಡುತ್ತಿರುವ ಟೀಂ ಇಂಡಿಯಾದ ದಿಗ್ಗಜ ಆಟಗಾರ ಮೈದಾನಕ್ಕೆ ಪ್ರವೇಶಿಸಿದರೆ ಸಾಕು ಆಕಾಶವೇ ಮಿತಿ ಎಂದು ರನ್ ಸುರಿಮಳೆಗೈಯುತ್ತಾರೆ ಕೊಹ್ಲಿ. ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ನಾವೆಲ್ಲರೂ ಅವರನ್ನು ದಾಖಲೆಗಳ ವೀರ ಎಂದು ಪ್ರೀತಿಯಿಂದ ಕರೆಯುವುದುಂಟು. ಇನ್ನು ರನ್ ಮಷಿನ್ ಈ ಸಾಧನೆ ಮಾಡಬೇಕಾದರೆ, ಸುಖದ ಹಾದಿಯಲ್ಲಿ ಬಂದವರಲ್ಲ. ಪ್ರತಿಯೊಂದು ಹೆಜ್ಜೆಯಲ್ಲೂ ಕಲ್ಲು-ಮುಳ್ಳುಗಳನ್ನು ದಾಟಿ ಬಂದಿದ್ದಾರೆ. ಈ ಯಶಸ್ಸಿನ ಹಿಂದೆ ಎಂದೂ ಮರೆಯಲಾಗದ ಕಣ್ಣೀರಿನ ಸಾಗರವಿದೆ. ಇಂದು ಕೊಹ್ಲಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಕೊಹ್ಲಿ ಜೀವನದ ಮಹತ್ವದ ಕ್ಷಣದ ಬಗ್ಗೆ ತಿಳಿದುಕೊಳ್ಳೋಣ.

ಇದನ್ನೂ ಓದಿ: Virat Kohli : ಬೆಸ್ಟ್ ಫಾರ್ಮ್‌ಗೆ ಮರಳಿದ 'ಕಿಂಗ್ ಕೊಹ್ಲಿ' : ಈ ಪವಾಡವಾಗಿದ್ದು ಹೀಗೆ!

ಅದು ಡಿಸೆಂಬರ್ 2006. ಆಗ ವಿರಾಟ್ ದೆಹಲಿ ರಣಜಿ ತಂಡದ ಸದಸ್ಯರಾಗಿದ್ದರು. ಅವರು ನಾಲ್ಕು ದಿನಗಳ ಪಂದ್ಯಕ್ಕೆ ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಒಂದು ಕಹಿ ಸುದ್ದಿ ಬಂದಿತು. ಮನೆಯವರೆಲ್ಲ ಸೇರಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಕೊಹ್ಲಿ ತಂದೆಯನ್ನು ಉಳಿಸಲಾಗಲಿಲ್ಲ. ಕೊನೆಯುಸಿರೆಳೆದ ತಂದೆಯನ್ನು ನೋಡಿದ ಕೊಹ್ಲಿ ಕಣ್ಣೀರು ಮಾತ್ರ ತಡೆಯಾಗಿ ನಿಂತಿತ್ತು. ಮನೆಯವರೆಲ್ಲ ಅಳುತ್ತಿದ್ದರೂ ಅವರ ಎದೆಗುಂದಲಿಲ್ಲ. ಮರುದಿನ ಬ್ಯಾಟಿಂಗ್ ಮಾಡಬೇಕಿತ್ತು.

ತಕ್ಷಣ ಕೋಚ್ ಗೆ ಕರೆ ಮಾಡಿ ತಾನು ರಣಜಿ ಆಡುತ್ತಿರುವುದಾಗಿ ತಿಳಿಸಿದರು. ಒಂದೆಡೆ ಅಪ್ಪನ ಸಾವಿನ ನೋವಿದ್ದರೂ ಪಂದ್ಯವನ್ನು ಆಡಿದರು. ಈ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರು ಕೊಹ್ಲಿಗೆ ಸಾಂತ್ವನ ಹೇಳುತ್ತಿದ್ದಾಗ ಕಣ್ಣೀರು ತಡೆಯಲಾಗದೆ ಜೋರಾಗಿ ಅತ್ತಿದ್ದರು. ಇನ್ನು ಪಂದ್ಯದ ನಂತರ ಅವರು ಹೋಗಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ತನ್ನ ತಂದೆಯ ಮರಣವು ತನ್ನ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು ಎಂದು ವಿರಾಟ್ ಆಗಾಗ ಹೇಳುತ್ತಾರೆ.

'ನಾನು ಭಾರತಕ್ಕಾಗಿ ಆಡಬೇಕೆಂಬುದು ನನ್ನ ತಂದೆಯ ಕನಸು. ನನ್ನ ತಂದೆಯ ಸಾವು ನನಗೆ ಆಘಾತವನ್ನುಂಟು ಮಾಡಿದೆ. ಆ ಕಷ್ಟದ ಸಮಯ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅಂದು ನಾನು ಭಾರತಕ್ಕಾಗಿ ಆಡುತ್ತೇನೆ ಎಂದು ನನ್ನ ಸಹೋದರನಿಗೆ ಭರವಸೆ ನೀಡಿದ್ದೆ. ಅಂದಿನಿಂದ ನನ್ನ ಜೀವನದಲ್ಲಿ ಕ್ರಿಕೆಟ್ ಸರ್ವಸ್ವವಾಗಿದೆ. ಯಾವುದೇ ಕಾರಣಕ್ಕೂ ನಾನು  ಕ್ರಿಕೆಟ್ ತ್ಯಜಿಸಲು ಬಯಸುವುದಿಲ್ಲ. ನನ್ನ ತಂದೆಯ ಸಾವು ನನಗೆ ಕಷ್ಟದ ಸಮಯದಲ್ಲಿ ಹೋರಾಡುವುದನ್ನು ಕಲಿಸಿತು” ಎಂದು ಕೊಹ್ಲಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: Team India : ಸೂರ್ಯಕುಮಾರ್ ಯಾದವ್'ನನ್ನು ಹಾಡಿಹೊಗಳಿದ ಗೌತಮ್ ಗಂಭೀರ್!

ಕೊಹ್ಲಿ ‘ಕ್ರಿಕೆಟ್’ ಜೀವನ:

ವಿರಾಟ್ ಕೊಹ್ಲಿ ನವೆಂಬರ್ 5, 1988 ರಂದು ದೆಹಲಿಯಲ್ಲಿ ಜನಿಸಿದರು. ಅವರು 2008 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅವರು, ಇಲ್ಲಿವರೆಗೆ 102 ಟೆಸ್ಟ್, 262 ಏಕದಿನ ಮತ್ತು 113 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 27 ಟೆಸ್ಟ್ ಗಳಲ್ಲಿ 28 ಅರ್ಧಶತಕಗಳೊಂದಿಗೆ 8074 ರನ್‌, ODIಗಳಲ್ಲಿ 43 ಶತಕಗಳು ಮತ್ತು 64 ಅರ್ಧ ಶತಕಗಳೊಂದಿಗೆ 12,344 ರನ್‌ಗಳನ್ನು ಗಳಿಸಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಮತ್ತು 36 ಅರ್ಧಶತಕಗಳೊಂದಿಗೆ 3,932 ರನ್ ಗಳಿಸಿದ್ದಾರೆ. ಸದ್ಯ ಟಿ20 ವಿಶ್ವಕಪ್‌ನಲ್ಲಿ ಮೂರು ಅರ್ಧ ಶತಕ ಸಿಡಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News