ವಿರಾಟ್ ಕೊಹ್ಲಿ ಯಶಸ್ವಿ ನಾಯಕ, ರೂಟ್ ಕಳಪೆ ನಾಯಕ...!

 ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ವಿರಾಟ್ ಕೊಹ್ಲಿ ಅಸಾಧಾರಣ ನಾಯಕ ಎಂದು ಆಸ್ಟ್ರೇಲಿಯಾದ ಶ್ರೇಷ್ಠ ಇಯಾನ್ ಚಾಪೆಲ್ ಹೇಳಿದ್ದಾರೆ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಉತ್ತಮ ಬ್ಯಾಟ್ಸ್ಮನ್ ಆದರೆ ಕಳಪೆ ನಾಯಕ ಎಂದು ಬಣ್ಣಿಸಿದ್ದಾರೆ.

Written by - Zee Kannada News Desk | Last Updated : Jan 30, 2022, 05:47 PM IST
  • ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ವಿರಾಟ್ ಕೊಹ್ಲಿ ಅಸಾಧಾರಣ ನಾಯಕ ಎಂದು ಆಸ್ಟ್ರೇಲಿಯಾದ ಶ್ರೇಷ್ಠ ಇಯಾನ್ ಚಾಪೆಲ್ ಹೇಳಿದ್ದಾರೆ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಉತ್ತಮ ಬ್ಯಾಟ್ಸ್ಮನ್ ಆದರೆ ಕಳಪೆ ನಾಯಕ ಎಂದು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿ ಯಶಸ್ವಿ ನಾಯಕ, ರೂಟ್ ಕಳಪೆ ನಾಯಕ...! title=

ಸಿಡ್ನಿ:  ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ವಿರಾಟ್ ಕೊಹ್ಲಿ ಅಸಾಧಾರಣ ನಾಯಕ ಎಂದು ಆಸ್ಟ್ರೇಲಿಯಾದ ಶ್ರೇಷ್ಠ ಇಯಾನ್ ಚಾಪೆಲ್ ಹೇಳಿದ್ದಾರೆ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಉತ್ತಮ ಬ್ಯಾಟ್ಸ್ಮನ್ ಆದರೆ ಕಳಪೆ ನಾಯಕ ಎಂದು ಬಣ್ಣಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ  ಹೀನಾಯವಾಗಿ ಟೆಸ್ಟ್ ಸರಣಿಯಲ್ಲಿ ಸೋಲನ್ನು ಅನುಭವಿಸಿದ ನಂತರ ನಾಯಕತ್ವವನ್ನು ತ್ಯಜಿಸಿದ ಕೊಹ್ಲಿ, ಅದಕ್ಕೂ ಮೊದಲು ಏಕದಿನ ನಾಯಕತ್ವದಿಂದ ಅವರನ್ನು ವಜಾಗೊಳಿಸಲಾಯಿತು.

ಇದನ್ನೂ ಓದಿ : Ind Vs WI : ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಫೈಟ್ ಸುಲಭವಲ್ಲ! ಯಾಕೆ

ಚಾಪೆಲ್ ಕೊಹ್ಲಿ ಮತ್ತು ರೂಟ್ ಅವರ ನಾಯಕತ್ವದ ಶೈಲಿಗಳು ಮತ್ತು ಅದರ ಪರಿಣಾಮಕಾರಿತ್ವದ ವೈರುಧ್ಯಗಳ ಕುರಿತಾಗಿ ಮಾತನಾಡುತ್ತಾ.“ಇದು ಇಬ್ಬರು ಕ್ರಿಕೆಟ್ ನಾಯಕರ ಕಥೆ; ಒಬ್ಬರು ತಮ್ಮ ಕೆಲಸದಲ್ಲಿ ಉತ್ತಮರು ಮತ್ತು ಇನ್ನೊಬ್ಬರು ವಿಫಲರಾಗಿದ್ದಾರೆ " ಎಂದು ಚಾಪೆಲ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ಬರೆದ ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

“ನಾಯಕನಾಗಿ ಕೊಹ್ಲಿ ಅಪವಾದವಾಗುವುದರಲ್ಲಿ ಸಂದೇಹವಿಲ್ಲ; ಅವರು ತಮ್ಮ ಉತ್ಸಾಹವನ್ನು ನಿಗ್ರಹಿಸಲಿಲ್ಲ ಆದರೆ ಅವರು ಇನ್ನೂ ಭಾರತೀಯ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಮರ್ಥರಾಗಿದ್ದರು.ಉಪನಾಯಕ ಅಜಿಂಕ್ಯ ರಹಾನೆ ಅವರ ನೆರವಿನಿಂದ ಅವರು ಯಾವುದೇ ನಾಯಕ ಮಾಡದಂತಹ ಸಾಗರೋತ್ತರ ಯಶಸ್ಸಿಗೆ ಭಾರತವನ್ನು ಕೊಂಡೊಯ್ದರು ”ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : WATCH: U-19 World Cup match: ಐರ್ಲೆಂಡ್-ಜಿಂಬಾಬ್ವೆ ಪಂದ್ಯದ ವೇಳೆ ಭೂಕಂಪ..!

ಇನ್ನೂ ರೂಟ್ ವಿಚಾರ ಪ್ರಸ್ತಾಪಿಸುತ್ತಾ "ಯಾವುದೇ ನಾಯಕನಿಗಿಂತ ಹೆಚ್ಚು ಬಾರಿ ತನ್ನ ದೇಶವನ್ನು ಮುನ್ನಡೆಸಿದರೂ ಅವರದ್ದು ವೈಫಲ್ಯದ ನಾಯಕತ್ವವಾಗಿದೆ.ರೂಟ್ ಅಥವಾ ಇತರ ಯಾವುದೇ ಇಂಗ್ಲಿಷ್ ಭಕ್ತರು ನಿಮಗೆ ಏನೇ ಹೇಳಲಿ, ಆದರೆ ರೂಟ್ ಉತ್ತಮ ಬ್ಯಾಟ್ಸ್ಮನ್, ಆದರೆ ಕಳಪೆ ನಾಯಕ, ಎಂದು ಅವರು ಹೇಳಿದರು.

ಇಬ್ಬರು ಯಶಸ್ವಿ ಭಾರತೀಯ ನಾಯಕರಾದ ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಪರಂಪರೆಯನ್ನು ಕೊಹ್ಲಿ ಹೇಗೆ ಮುನ್ನಡೆಸಿದರು ಎಂಬುದರ ಕುರಿತು ಚಾಪೆಲ್ ಮಾತನಾಡುತ್ತಾ“ಕೊಹ್ಲಿ ಅವರು ಸೌರವ್ ಗಂಗೂಲಿ ಮತ್ತು ಧೋನಿಯ ಪರಂಪರೆಯನ್ನು ಹೆಚ್ಚಿಸಿದರು ಮತ್ತು ಏಳು ವರ್ಷಗಳಲ್ಲಿ ಅದರ ಮೇಲೆ ಗಣನೀಯವಾಗಿ ನಿಯಂತ್ರಣವನ್ನು ಸಾಧಿಸಿದರು' ಎಂದು ಹೇಳಿದರು.

ಇದನ್ನೂ ಓದಿ : Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News