ಅದೊಂದು ಸಣ್ಣ ತಪ್ಪಿನಿಂದ ‘ಡಾನ್ ಬ್ರಾಡ್ಮನ್’ ಹಿಂದಿಕ್ಕುವ ಅವಕಾಶ ಕಳೆದುಕೊಂಡ ಟೀಂ ಇಂಡಿಯಾದ ಈ ಆಟಗಾರ

Virender Sehwag-Don Bradman Record: ಸೆಹ್ವಾಗ್ ಮೈದಾನಕ್ಕೆ ಬಂದಾಗಲೆಲ್ಲಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಲು ಯತ್ನಿಸುತ್ತಿದ್ದರು. ಅವರು ಆರಂಭಿಕ ಓವರ್‌ಗಳಿಂದಲೇ ರನ್ ಗಳಿಸಿದ್ದು ಒಂದಲ್ಲ ಹಲವು ಬಾರಿ ನಡೆದಿದೆ. ಈ ಕಾರಣಕ್ಕಾಗಿಯೇ ವಿಶ್ವದೆಲ್ಲೆಡೆಯ ಬೌಲರ್‌ಗಳು ಸೆಹ್ವಾಗ್‌ಗೆ ಭಯಪಟ್ಟಿದ್ದರು. ಅವರ ಮುಂದೆ ಬೌಲಿಂಗ್ ಮಾಡುವ ಮೊದಲು ತಂತ್ರವನ್ನು ಬದಲಾಯಿಸಲು ಮುಂದಾಗುತ್ತಿದ್ದರು.

Written by - Bhavishya Shetty | Last Updated : Feb 26, 2023, 04:33 PM IST
    • ಬೌಂಡರಿ-ಸಿಕ್ಸರ್‌ಗಳನ್ನು ಬಾರಿಸುವುದು ಮತ್ತು ಅತ್ಯಂತ ವೇಗವಾಗಿ ಬ್ಯಾಟಿಂಗ್ ಮಾಡುವುದು ಎಂದರೆ ಸೆಹ್ವಾಗ್‌ ಬಲು ಇಷ್ಟ
    • ಸೆಹ್ವಾಗ್ ಮೈದಾನಕ್ಕೆ ಬಂದಾಗಲೆಲ್ಲಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಲು ಯತ್ನಿಸುತ್ತಿದ್ದರು.
    • ಅವರು ಆರಂಭಿಕ ಓವರ್‌ಗಳಿಂದಲೇ ರನ್ ಗಳಿಸಿದ್ದು ಒಂದಲ್ಲ ಹಲವು ಬಾರಿ ನಡೆದಿದೆ
ಅದೊಂದು ಸಣ್ಣ ತಪ್ಪಿನಿಂದ ‘ಡಾನ್ ಬ್ರಾಡ್ಮನ್’ ಹಿಂದಿಕ್ಕುವ ಅವಕಾಶ ಕಳೆದುಕೊಂಡ ಟೀಂ ಇಂಡಿಯಾದ ಈ ಆಟಗಾರ title=
Virender Sehwag

Virender Sehwag-Don Bradman Record: ವೀರೇಂದ್ರ ಸೆಹ್ವಾಗ್, ಕ್ರಿಕೆಟ್ ಮೈದಾನದಲ್ಲಿ ಇನ್ನೂ ತನ್ನ ಹೆಸರನ್ನು ಉಳಿಸಿಕೊಂಡ ಆಟಗಾರ. ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವುದು ಮತ್ತು ಅತ್ಯಂತ ವೇಗವಾಗಿ ಬ್ಯಾಟಿಂಗ್ ಮಾಡುವುದು ಎಂದರೆ ಸೆಹ್ವಾಗ್‌ ಬಲು ಇಷ್ಟ. ಅಷ್ಟೇ ಅಲ್ಲದೆ, ಇವರ ದಾಖಲೆಗಳಿಗೆ ಇವರೇ ಸೈ. ಇನ್ನು ಸೆಹ್ವಾಗ್ ಅವರು ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಅನೇಕ ಪ್ರಮುಖ ಪಾಲುದಾರಿಕೆಗಳನ್ನು ಆಡಿದವರು. ಒಂದು ಸಂದರ್ಭದಲ್ಲಿ ಡಾನ್ ಬ್ರಾಡ್ಮನ್ ಅವರ ದಾಖಲೆ ಮುರಿಯುವ ತನಕ ಬಂದಿದ್ದರು. ಆದರೆ ಸ್ವಲ್ಪದರಲ್ಲೇ ಆ ಅವಕಾಶ ಕಳೆದುಕೊಂಡಿದ್ದರು.

ಇದನ್ನೂ ಓದಿ: IND vs AUS : ಮೂರನೇ ಟೆಸ್ಟ್‌ನಿಂದ ಹೊರಗುಳಿದ ಈ 4 ಆಟಗಾರರು!

ಟೆಸ್ಟ್‌ಗಳಲ್ಲಿ ಸ್ಟ್ರೈಕ್ ರೇಟ್ 82:

ಸೆಹ್ವಾಗ್ ಮೈದಾನಕ್ಕೆ ಬಂದಾಗಲೆಲ್ಲಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಲು ಯತ್ನಿಸುತ್ತಿದ್ದರು. ಅವರು ಆರಂಭಿಕ ಓವರ್‌ಗಳಿಂದಲೇ ರನ್ ಗಳಿಸಿದ್ದು ಒಂದಲ್ಲ ಹಲವು ಬಾರಿ ನಡೆದಿದೆ. ಈ ಕಾರಣಕ್ಕಾಗಿಯೇ ವಿಶ್ವದೆಲ್ಲೆಡೆಯ ಬೌಲರ್‌ಗಳು ಸೆಹ್ವಾಗ್‌ಗೆ ಭಯಪಟ್ಟಿದ್ದರು. ಅವರ ಮುಂದೆ ಬೌಲಿಂಗ್ ಮಾಡುವ ಮೊದಲು ತಂತ್ರವನ್ನು ಬದಲಾಯಿಸಲು ಮುಂದಾಗುತ್ತಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಮತ್ತು ಏಕದಿನ ಪಂದ್ಯಗಳ ರೋಚಕತೆಯನ್ನು ತುಂಬಿದ ಈ ದಿಗ್ಗಜ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದವರು. ಅವರ ಆಕ್ರಮಣಕಾರಿ ಶೈಲಿಯು ಟೆಸ್ಟ್ ಮಾದರಿಯಲ್ಲಿಯೇ ಅವರ ಸ್ಟ್ರೈಕ್ ರೇಟ್ 82.33 ಆಗಿತ್ತು ಎಂಬ ಅಂಶದಿಂದ ತಿಳಿದುಬಂದಿದೆ.

44 ವರ್ಷದ ಸೆಹ್ವಾಗ್ ತಮ್ಮ ವೃತ್ತಿ ಜೀವನದಲ್ಲಿ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರ ಆಕ್ರಮಣಕಾರಿ ಶೈಲಿಯಿಂದಾಗಿ, ಅವರು ಒಂದು ವಿಷಯದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್‌ಮನ್‌ರನ್ನು ಮೀರಿಸುವ ಅವಕಾಶವನ್ನು ಕಳೆದುಕೊಂಡರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಒಂದಲ್ಲ ಎರಡು ಬಾರಿ ತ್ರಿಶತಕ ಬಾರಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೆಸ್ಟ್‌ನಲ್ಲಿ ಟ್ರಿಪಲ್ ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಬಿರುದು ಅವರಿಗಿದೆ. 2004ರಲ್ಲಿ ಮುಲ್ತಾನ್ ಮೈದಾನದಲ್ಲಿ 309 ರನ್ ಗಳಿಸಿದ್ದರು. 4 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧವೂ ತ್ರಿಶತಕ ಬಾರಿಸಿದ್ದರು.

ಒಂದು ಸಣ್ಣ ತಪ್ಪು...

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಸೆಹ್ವಾಗ್‌’ಗೆ 2009 ರಲ್ಲಿ ದೊಡ್ಡ ಅವಕಾಶ ಸಿಕ್ಕಿತು’ ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ಟ್ರಿಪಲ್ ಶತಕಗಳನ್ನು ಗಳಿಸುವ ವಿಷಯದಲ್ಲಿ ಬ್ರಾಡ್‌ಮನ್‌ರನ್ನು ಮೀರಿಸಬಹುದಿತ್ತು. ಬ್ರಾಡ್ಮನ್ ಎರಡು ಬಾರಿ ತ್ರಿಶತಕಗಳನ್ನು ಗಳಿಸಿದ್ದಾರೆ. 2009ರಲ್ಲಿ ಶ್ರೀಲಂಕಾ ವಿರುದ್ಧ ಸೆಹ್ವಾಗ್‌ಗೆ ದೊಡ್ಡ ಅವಕಾಶ ಸಿಕ್ಕಿತ್ತು. ಅವರು ಬ್ರಬೋರ್ನ್ ಮೈದಾನದಲ್ಲಿ 293 ರನ್ ಗಳಿಸಿದರು. ಆದರೆ ಈ ಮಧ್ಯೆ ಅವರು ಸಿಕ್ಸರ್ ಹೊಡೆಯಲು ಪ್ರಯತ್ನಿಸುತ್ತಿರುವಾಗ ತಮ್ಮ ವಿಕೆಟ್ ಕಳೆದುಕೊಂಡರು. ಅಂದು ಸೆಹ್ವಾಗ್ ಸಂಯಮದಿಂದ ಆಡಿದ್ದರೆ ಕೇವಲ 7 ರನ್ ಗಳಿಸಿ ಮೂರನೇ ತ್ರಿಶತಕ ಪೂರೈಸಬಹುದಿತ್ತು. ಬಳಿಕ ಶ್ರೇಷ್ಠ ಬ್ರಾಡ್ಮನ್ ಗಿಂತ ಮುಂದೆ ಹೋಗಬಹುದಿತ್ತು.

ಸೆಹ್ವಾಗ್ ಅವರು ಪಾಕಿಸ್ತಾನದ ವಿರುದ್ಧ ಅತೀ ಹೆಚ್ಚು ಬಾರಿ ಅಬ್ಬರಿಸಿದ್ದಾರೆ. ಈ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಒಮ್ಮೆ ತ್ರಿಶತಕ, ಎರಡು ಬಾರಿ ದ್ವಿಶತಕ ಗಳಿಸಿದ್ದಾರೆ. 2005 ರಲ್ಲಿ ಮೊಹಾಲಿ ಮೈದಾನದಲ್ಲಿ 173 ರನ್ ಗಳಿಸಿ ಔಟಾದರು. ಇನ್ನು ಸ್ವಲ್ಪ ಉಳಿದಿದ್ದರೆ ಪಾಕಿಸ್ತಾನದ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸುತ್ತಿದ್ದರು.

ಇದನ್ನೂ ಓದಿ: Ind vs Aus : ಮೂರನೇ ಟೆಸ್ಟ್‌ನಲ್ಲಿ ಕಾಂಗರೂಗಳಿಗೆ ಶತ್ರುವಾಗಿ ಕಡಲಿದ್ದಾರೆ ಈ ಇಬ್ಬರು ಆಟಗಾರರು!

ಸೆಹ್ವಾಗ್ ತಮ್ಮ ವೃತ್ತಿಜೀವನದಲ್ಲಿ 104 ಟೆಸ್ಟ್, 251 ODI ಮತ್ತು 19 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 23 ಶತಕಗಳು ಸೇರಿವೆ. ಸೆಹ್ವಾಗ್ 49.34 ಸರಾಸರಿಯಲ್ಲಿ ಒಟ್ಟು 8586 ರನ್ ಗಳಿಸಿದ್ದಾರೆ. ಅವರು ಏಕದಿನದಲ್ಲಿ 8273 ರನ್ ಗಳಿಸಿದ್ದಾರೆ. T20 ಅಂತರಾಷ್ಟ್ರೀಯ ವೃತ್ತಿಜೀವನದ 18 ಇನ್ನಿಂಗ್ಸ್‌ಗಳಲ್ಲಿ, ಅವರು 2 ಅರ್ಧಶತಕಗಳನ್ನು ಗಳಿಸುವ ಮೂಲಕ ಒಟ್ಟು 394 ರನ್‌ಗಳನ್ನು ಗಳಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News