ಟೀಂ ಇಂಡಿಯಾದ 20 ವರ್ಷ ಹಳೆಯ ದಾಖಲೆ ಮುರಿದ ಅಫ್ಘಾನಿಸ್ತಾನ !

Afghanistan team records: ಭಾರತ ತಂಡ 20 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಕೂಡಾ ಮುರಿದಿದೆ. ಇದಕ್ಕೂ ಮುನ್ನ ಭಾರತದ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ.

Written by - Ranjitha R K | Last Updated : Oct 24, 2023, 03:12 PM IST
  • ಅಫ್ಘಾನಿಸ್ತಾನ ವಿರುದ್ದ ಪಾಕಿಸ್ತಾನ ಹೀನಾಯ ಸೋಲು
  • ಅನೇಕ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಂಡ ಅಫ್ಘಾನಿಸ್ತಾನ
  • ವಿಶ್ವಕಪ್‌ನಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ ಕೀರ್ತಿ
ಟೀಂ ಇಂಡಿಯಾದ 20 ವರ್ಷ ಹಳೆಯ ದಾಖಲೆ ಮುರಿದ ಅಫ್ಘಾನಿಸ್ತಾನ ! title=

Afghanistan team records : ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ದ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಪಾಕ್ ಈ ರೀತಿಯ ಸೋಲು ಕಾಣುತ್ತದೆ ಎನ್ನುವುದನ್ನು ಯಾರೂ ಊಹಿಸಿರಲೇ ಇಲ್ಲ. ಅಫ್ಘಾನಿಸ್ತಾನ ತಂಡವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಹಲವು ದೊಡ್ಡ ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಇದೇ ವೇಳೆ ಭಾರತ ತಂಡ 20 ವರ್ಷಗಳ ಹಿಂದೆ ಮಾಡಿದ್ದ ದಾಖಲೆಯನ್ನು ಕೂಡಾ ಮುರಿದಿದೆ. ಇದಕ್ಕೂ ಮುನ್ನ ಭಾರತದ ಈ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. 

ವಿಶ್ವಕಪ್‌ನಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದ ಕೀರ್ತಿ : 
283 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು 286 ರನ್ ಗಳಿಸಿ ಜಯಭೇರಿ ಬಾರಿಸಿದರು. ಇದು ಈವರೆಗಿನ ವಿಶ್ವಕಪ್‌ನಲ್ಲಿ ತಂಡ ವೊಂದು ಸೇರಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 288 ರನ್ ಗಳಿಸಿತ್ತು. 

ಇದನ್ನೂ ಓದಿ : 1996ರಲ್ಲಿ ಪಾಕಿಸ್ತಾನದ ಸೊಕ್ಕು ಮುರಿದಿದ್ದ ಟೀಂ ಇಂಡಿಯಾದ ಈ ಕ್ರಿಕೆಟಿಗನೇ ಅಫ್ಘಾನಿಸ್ತಾನದ ಗೆಲುವಿಗೂ ಕಾರಣ !

ಏಕದಿನದಲ್ಲಿ ಅತಿ ದೊಡ್ಡ ಗುರಿ :
ಅಫ್ಘಾನಿಸ್ತಾನ ತಂಡ ತನ್ನ ಏಕದಿನ ಇತಿಹಾಸದಲ್ಲಿ ಇದುವರೆಗಿನ ದೊಡ್ಡ ಗುರಿಯನ್ನು ಬೆನ್ನಟ್ಟಿದೆ. ಇದಕ್ಕೂ ಮುನ್ನ 2014ರಲ್ಲಿ ಯುಎಇ ವಿರುದ್ಧ ತಂಡ 274 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಈ ಪಂದ್ಯದಲ್ಲಿ ತಂಡ 283 ರನ್ ಚೇಸ್ ಮಾಡಿತ್ತು. ಈ ಪಟ್ಟಿಯಲ್ಲಿ ತಂಡದ ಮೂರನೇ ಅತ್ಯಂತ ಯಶಸ್ವಿ ಚೇಸಿಂಗ್ 269 ರನ್ ಆಗಿದೆ.

ಭಾರತದ ಈ ದೊಡ್ಡ ದಾಖಲೆ ಮುರಿದಿದ ಟೀಂ : 
2003ರಲ್ಲಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಭಾರತ ಅತಿ ದೊಡ್ಡ ರನ್ ಚೇಸ್ ಮಾಡಿತ್ತು. ಆದರೆ, ಈಗ ಈ ದಾಖಲೆಯನ್ನು ಅಫ್ಘಾನಿಸ್ತಾನ ಮುರಿದಿದೆ. ಅಫ್ಘಾನಿಸ್ತಾನವು ಪಾಕಿಸ್ತಾನದ 283 ರನ್‌ಗಳ ಸ್ಕೋರ್ ಅನ್ನು ಸುಲಭವಾಗಿ ಬೆನ್ನಟ್ಟಿ ತನ್ನ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿಕೊಂಡಿತು. 

ಇದನ್ನೂ ಓದಿ : WATCH : ಅಫ್ಘಾನಿಸ್ತಾನದ ಗೆಲುವಿನ ನಂತರ ಇರ್ಫಾನ್ ಪಠಾಣ್ ಜೊತೆ ರಶೀದ್ ನೃತ್ಯ ವೈರಲ್‌

ಎಲ್ಲರನ್ನೂ ಹಿಂದಿಕ್ಕಿದ ರಹಮತ್-ಹಶ್ಮತುಲ್ಲಾ : 
ಅಫ್ಘಾನಿಸ್ತಾನದ ರಹಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ ತಂಡಕ್ಕಾಗಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಎಲ್ಲರನ್ನೂ ಹಿಂದೆ ಬಿಟ್ಟಿದ್ದಾರೆ. ಈ ಪಂದ್ಯದಲ್ಲಿ ರಹಮತ್ ಶಾ ಅಜೇಯ 77 ರನ್ ಮತ್ತು ಹಶ್ಮತುಲ್ಲಾ ಅಜೇಯ 48 ರನ್ ಗಳಿಸಿದರು. ರಹಮತ್ 404 ರನ್‌ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ಆಫ್ಘನ್ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ,  365 ರನ್ ಗಳಿಸಿರುವ ಹಶ್ಮತುಲ್ಲಾ ಎರಡನೇ ಸ್ಥಾನದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News