ಸಚಿನ್ ದಾಖಲೆ ಬ್ರೇಕ್‌ ಮಾಡಿದ ಪತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ..! ಕ್ಯೂಟ್‌ ವಿಡಿಯೋ ವೈರಲ್‌

Virat and Anushka flying kiss : ಸೆಮಿಫೈನಲ್‌ನಲ್ಲಿ ವಿರಾಟ್ ಮತ್ತು ಟೀಂ ಇಂಡಿಯಾ ಆಡುತ್ತಿರುವುದನ್ನು ಅನುಷ್ಕಾ ವೀಕ್ಷಿಸುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ವೇಳೆ ಶತಕ ಸಿಡಿಸಿದ ಬೆನ್ನಲ್ಲೆ ವಿರುಷ್ಕಾ ಪರಸ್ಪರ ಫ್ಲೈಯಿಂಗ್ ಕಿಸ್ಸ್ ನೀಡಿದ ಮುದ್ದಾದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

Written by - Krishna N K | Last Updated : Nov 15, 2023, 07:29 PM IST
  • ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಆಟ
  • 50ನೇ ಶತಕ ಪೂರ್ಣಗೊಳಿಸಿದ ಕಿಂಗ್‌ ಕೊಹ್ಲಿ
  • ಪತಿ ಸಾಧನೆಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ಅನುಷ್ಕಾ
ಸಚಿನ್ ದಾಖಲೆ ಬ್ರೇಕ್‌ ಮಾಡಿದ ಪತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ..! ಕ್ಯೂಟ್‌ ವಿಡಿಯೋ ವೈರಲ್‌ title=

Virat kohli 50 century : ಭಾರತ ವರ್ಸಸ್ ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ಪಂದ್ಯ ವಿರಾಟ್ ಕೊಹ್ಲಿ ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದ ವೇಳೆ ಪತಿಯನ್ನು ಹುರಿದುಂಬಿಸಲು ನಟಿ ಅನುಷ್ಕಾ ಶರ್ಮಾ ವಾಂಖೆಡೆ ಸ್ಟೇಡಿಯಂನಲ್ಲಿದ್ದರು. ಸೆಮಿಫೈನಲ್‌ನಲ್ಲಿ ವಿರಾಟ್ ಮತ್ತು ಟೀಂ ಇಂಡಿಯಾ ಆಡುತ್ತಿರುವುದನ್ನು ಅನುಷ್ಕಾ ವೀಕ್ಷಿಸುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ವೇಳೆ ಶತಕ ಸಿಡಿಸಿದ ಬೆನ್ನಲ್ಲೆ ವಿರುಷ್ಕಾ ಪರಸ್ಪರ ಫ್ಲೈಯಿಂಗ್ ಕಿಸ್ಸ್ ನೀಡಿದ ಮುದ್ದಾದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ಹೌದು.. ಪಂದ್ಯಕ್ಕಾಗಿ, ಅನುಷ್ಕಾ ಹಳದಿ, ಬಿಳಿ ಮತ್ತು ಕಪ್ಪು ಬಣ್ಣದ ಉಡುಪನ್ನು ಧರಿಸಿದ ಸ್ಟೆಡಿಯಂನಲ್ಲಿ ಕುಳಿತಿದ್ದರು. ಈ ವೇಳೆ ವಿರಾಟ್‌ ತಮ್ಮ 50ನೇ ಶತಕವನ್ನು ಯಶಸ್ವಿಗೊಳಿಸಿದ ಬೆನ್ನಲ್ಲೆ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ... ಕೊಹ್ಲಿ... ಅಂತ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇದೇ ವೇಳೆ ಅನುಷ್ಕಾ ಮತ್ತು ಕೊಹ್ಲಿ ಪರಸ್ಪರ ಫ್ಲೈಯಿಂಗ್‌ ಕಿಸ್‌ ನೀಡಿದರು. 

ಇದನ್ನೂ ಓದಿ: ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ʼ800ʼ OTT ಬಿಡುಗಡೆ ದಿನಾಂಕ ಅನೌನ್ಸ್‌..!

ಸಧ್ಯ ಅನುಷ್ಕಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ಬಗ್ಗೆ ವಿಡಿಯೋ ಮತ್ತು ಫೋಟೋಗಳು ಸಹ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫ್ಯಾನ್ಸ್‌ ಸಹ ಶುಭ ಹಾರೈಸುತ್ತಿದ್ದಾರೆ. ಅಂದಹಾಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ಮದುವೆಯಾದರು. ಜನವರಿ 2021 ರಲ್ಲಿ ಈ ಕ್ಯೂಟ್‌ ಜೋಡಿ ವಾಮಿಕಾಗೆ ಜನ್ಮ ನೀಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News