Fans Fight during IND vs AFG match : ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸಿತು. ಆದರೆ ಮೈದಾನದ ಹೊರಗೆ ಸಾಕಷ್ಟು ಆಕ್ಷನ್ ಇತ್ತು. ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಅಭಿಮಾನಿಗಳ ನಡುವೆ ಹೊಡೆದಾಟ ನಡೆಯಿತು.
ವೈರಲ್ ವಿಡಿಯೋದಲ್ಲಿ, ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ಸಮಯದಲ್ಲಿ ಅಭಿಮಾನಿಗಳು ಭಾರಿ ಗದ್ದಲವನ್ನು ಸೃಷ್ಟಿಸುವುದನ್ನು ಕಾಣಬಹುದು. ದೆಹಲಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ನಡುವಿನ ಕಾದಾಟದಲ್ಲಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುವುದನ್ನು ಸಹ ನೋಡಬಹುದು.
Lafda bhi ho gya pic.twitter.com/qFSm6dufCr
— KUNAL DABAS (@kunaldabas_) October 11, 2023
ಕ್ರಿಕೆಟ್ ಪಂದ್ಯದ ವೇಳೆ ಅರುಣ್ ಜೇಟ್ಲಿ ಸ್ಟೇಡಿಯಂ ಸ್ಟ್ಯಾಂಡ್‌ನಲ್ಲಿ ಕಾದಾಟ ನಡೆದಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ವೈರಲ್ ವಿಡಿಯೋದಲ್ಲಿ, ದೆಹಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಪಂದ್ಯದಲ್ಲಿ ಅಭಿಮಾನಿಗಳ ನಡುವೆ ಫೈಟ್ ನಡೆದಿತ್ತು.
ಇದನ್ನೂ ಓದಿ : Cricket News : ಸೋದರ ಸಂಬಂಧಿಯನ್ನೇ ಮದುವೆಯಾದ ಕ್ರಿಕೆಟಿಗರು..!
ಕಳೆದ ತಿಂಗಳು ಕೊಲಂಬೊದಲ್ಲಿ ಉಭಯ ತಂಡಗಳ ನಡುವಿನ ಏಕದಿನ ಪಂದ್ಯದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಜಗಳವಾಡಿದ್ದರು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಅಭಿಮಾನಿಗಳ ಗುಂಪು ಪರಸ್ಪರ ಹೊಡೆದಾಡಿಕೊಂಡಿದೆ. ಹತ್ತು ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಕಳೆದ ವರ್ಷ, ಏಷ್ಯಾ ಕಪ್ 2022 ರ ಸಂದರ್ಭದಲ್ಲಿಯೂ, ಎರಡು ತಂಡಗಳ ಅಭಿಮಾನಿಗಳು ಶಾರ್ಜಾ ಕ್ರೀಡಾಂಗಣದಲ್ಲಿ ಕಾದಾಡಿದ್ದರು. ಕ್ರೀಡಾಂಗಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.
ಇದನ್ನೂ ಓದಿ : ಪಂದ್ಯದ ಮಧ್ಯೆ ನಿಯಮ ಉಲ್ಲಂಘಿಸಿದ ಈ ತಂಡ ವಿಶ್ವಕಪ್ 2023ರಿಂದ ಬ್ಯಾನ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.