“ಕೊಹ್ಲಿ ಫ್ರಾಡ್, ಧೋನಿ...!”- ಬಾಂಗ್ಲಾ ವಿರುದ್ಧ ಗೆದ್ದ ಭಾರತದ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದೇನು?

Shoaib Akhtar comment on bowling action of Virat Kohli: 97 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌’ಗಳ ನೆರವಿನಿಂದ 103 ರನ್ ಗಳಿಸಿದರು. ಅಷ್ಟೇ ಅಲ್ಲದೆ ಸುಮಾರು 6 ವರ್ಷಗಳ ಬಳಿಕ ಬೌಲಿಂಗ್ ಕೂಡ ಮಾಡಿದ್ದರು. ಅವರ ಅದ್ಭುತ ಪ್ರದರ್ಶನದ ಬಗ್ಗೆ ವಿವಿಧ ಕ್ರಿಕೆಟ್ ದಿಗ್ಗಜರ ಪ್ರತಿಕ್ರಿಯೆಗಳು ಬೆಳಕಿಗೆ ಬರುತ್ತಿವೆ.

Written by - Bhavishya Shetty | Last Updated : Oct 20, 2023, 11:04 PM IST
    • ವಿಶ್ವದ ವೇಗದ ಬೌಲರ್ ಆಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
    • ಅದ್ಭುತ ಪ್ರದರ್ಶನದ ಬಗ್ಗೆ ವಿವಿಧ ಕ್ರಿಕೆಟ್ ದಿಗ್ಗಜರ ಪ್ರತಿಕ್ರಿಯೆಗಳು ಬೆಳಕಿಗೆ ಬರುತ್ತಿವೆ.
    • ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ವೃತ್ತಿಜೀವನದ 78ನೇ ಶತಕ ಪೂರೈಸಿದರು
“ಕೊಹ್ಲಿ ಫ್ರಾಡ್, ಧೋನಿ...!”- ಬಾಂಗ್ಲಾ ವಿರುದ್ಧ ಗೆದ್ದ ಭಾರತದ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದೇನು?  title=
Shoaib Akhtar Comment About Virat Kohli

Shoaib Akhtar comment on bowling action of Virat Kohli: ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ 7 ವಿಕೆಟ್‌’ಗಳಿಂದ ಅದ್ಭುತ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ವೃತ್ತಿಜೀವನದ 78ನೇ ಶತಕ ಪೂರೈಸಿದರು.

ಇದನ್ನೂ ಓದಿ: ಮಜ್ಜಿಗೆ ಜೊತೆ ಈ ಪುಡಿಯನ್ನು ಬೆರೆಸಿ ಕುಡಿದರೆ ಸೊಂಟದ ಸುತ್ತಲಿನ ಬೊಜ್ಜು ಸಲೀಸಾಗಿ ಕರಗುತ್ತೆ

97 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌’ಗಳ ನೆರವಿನಿಂದ 103 ರನ್ ಗಳಿಸಿದರು. ಅಷ್ಟೇ ಅಲ್ಲದೆ ಸುಮಾರು 6 ವರ್ಷಗಳ ಬಳಿಕ ಬೌಲಿಂಗ್ ಕೂಡ ಮಾಡಿದ್ದರು. ಅವರ ಅದ್ಭುತ ಪ್ರದರ್ಶನದ ಬಗ್ಗೆ ವಿವಿಧ ಕ್ರಿಕೆಟ್ ದಿಗ್ಗಜರ ಪ್ರತಿಕ್ರಿಯೆಗಳು ಬೆಳಕಿಗೆ ಬರುತ್ತಿವೆ.

ಇದೀಗ ವಿಶ್ವದ ವೇಗದ ಬೌಲರ್ ಆಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿಯನ್ನು ‘ಫ್ರಾಡ್’ ಎಂದು ಹೇಳಿದ್ದಾರೆ.

“ಕೊಹ್ಲಿ ಆಕ್ಷನ್ ಫ್ರಾಡ್”

ಝೀ ನ್ಯೂಸ್‌’ನ ವಿಶ್ವಕಪ್ ಶೋ 'ದಿ ಕ್ರಿಕೆಟ್ ಶೋ'ಗೆ ಅತಿಥಿಯಾಗಿ ಭಾಗವಹಿಸಿದ್ದ ಶೋಯೆಬ್ ಅಖ್ತರ್’ಗೆ ಆಂಕರ್ ಹೀಗೆ ಪ್ರಶ್ನೆಯನ್ನು ಕೇಳಿದ್ದರು- ”ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ 3 ಎಸೆತಗಳನ್ನು ಬೌಲ್ ಮಾಡಿದರು. ಒಂದಲ್ಲ ಒಂದು ದಿನ ಅವರು ಅತಿ ವೇಗದ ಬೌಲಿಂಗ್‌’ನಲ್ಲಿ ನಿಮ್ಮ ದಾಖಲೆಯನ್ನು ಮುರಿಯಬಹುದು ಎಂದು ನೀವು ಭಾವಿಸುತ್ತೀರಾ?”

ಉತ್ತರ- “ಅವರು (ವಿರಾಟ್ ಕೊಹ್ಲಿ) ಬೌಲಿಂಗ್ ಮಾಡುವ ಆಕ್ಷನ್, ಬೌಲರ್‌’ಗಳ ಆಕ್ಷನ್ ಅಲ್ಲ. ಅದೊಂದು ವಂಚನೆಯ ಕ್ರಮ. ಆದ್ದರಿಂದ, ಅವರು ಈ ಕ್ರಮದೊಂದಿಗೆ ಬೌಲ್ ಮಾಡಲು ಪ್ರಯತ್ನಿಸಬಾರದು”.

ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ-ಜಲಪ್ರಳಯದ ಭೀತಿ: ಗುಡುಗು ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ

ಅಖ್ತರ್ (ಶೋಯಬ್ ಅಖ್ತರ್) ಮತ್ತಷ್ಟು ಪ್ರತಿಕ್ರಿಯಿಸಿ, “ಅವರು (ವಿರಾಟ್ ಕೊಹ್ಲಿ) ಉತ್ತಮ ಬ್ಯಾಟ್ಸ್‌ಮನ್. ಅವರ ಬ್ಯಾಟಿಂಗ್ ತುಂಬಾ ಚೆನ್ನಾಗಿದೆ. ಆದರೆ ಅವರು ಬೌಲಿಂಗ್‌’ನಲ್ಲಿ ನನ್ನನ್ನು ಎಂದಿಗೂ ಪ್ರಭಾವಿಸಲಿಲ್ಲ. ಧೋನಿಯೂ ಕೂಡ ಒಂದೆರಡು ಬಾರಿ ಬೌಲಿಂಗ್ ಮಾಡಿದ್ದರು. ಅಂದಹಾಗೆ, ಈ ಎಲ್ಲಾ ಬ್ಯಾಟ್ಸ್‌’ಮನ್‌’ಗಳು ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ. ನನಗೆ ನೆನಪಿದೆ, ಇಂಜಿನಿಯರ್ ಭಾಯ್ (ಇಂಜಮಾಮ್ ಉಲ್ ಹಕ್) ಕೂಡ ಬಂದು ಬೌಲ್ ಮಾಡುತ್ತಿದ್ದರು.ಧೋನಿ ಕೂಡ ಒಬ್ಬರನ್ನು ಔಟ್ ಮಾಡಿದ್ದರು” ಎಂದಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News