ಈ ಶ್ರೇಷ್ಠ ಆಟಗಾರನೇ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡೋದು: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ

Harbhajan Singh Statement on Virat Kohli: ಮೆನ್ ಇನ್ ಬ್ಲೂ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಂಡಿಲ್ಲ. ನಾಲ್ಕು ವಿಜಯಗಳೊಂದಿಗೆ, ನಿರ್ಣಾಯಕ ಎಂಟು ಅಂಕಗಳನ್ನು ಪಡೆದುಕೊಂಡಿದೆ ಭಾರತ.

Written by - Bhavishya Shetty | Last Updated : Oct 22, 2023, 04:36 PM IST
    • ಮೆನ್ ಇನ್ ಬ್ಲೂ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಂಡಿಲ್ಲ.
    • ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್
    • ಈ ಆಟಗಾರ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಬಹುದು ಎಂದು ಭವಿಷ್ಯ ನುಡಿದಿದ್ದಾರೆ
ಈ ಶ್ರೇಷ್ಠ ಆಟಗಾರನೇ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡೋದು: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ title=
Harbhajan Singh

Harbhajan Singh: ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಐಸಿಸಿ ವಿಶ್ವಕಪ್ 2023 ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಪ್ರಮುಖ ಆಟಗಾರನನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: “ನನಗೆ ನಾಚಿಕೆಯಾಗುತ್ತಿದೆ...!” ಪಾಕಿಸ್ತಾನ ತಂಡದ ಕಳಪೆ ಆಟದ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದೇನು?

ಮೆನ್ ಇನ್ ಬ್ಲೂ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಂಡಿಲ್ಲ. ನಾಲ್ಕು ವಿಜಯಗಳೊಂದಿಗೆ, ನಿರ್ಣಾಯಕ ಎಂಟು ಅಂಕಗಳನ್ನು ಪಡೆದುಕೊಂಡಿದೆ ಭಾರತ.

ಇನ್ನು ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ  2011 ರಲ್ಲಿ ಟೂರ್ನಮೆಂಟ್ ಆಟಗಾರನಾಗಿ ಆಯ್ಕೆಯಾದ ಯುವರಾಜ್ ಸಿಂಗ್ ಅವರ ಪಾತ್ರವನ್ನು 2023 ರ ವಿಶ್ವಕಪ್‌ನಲ್ಲಿ ತುಂಬಬಹುದು. ಜೊತೆಗೆ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

“ಈ ವಿಶ್ವಕಪ್‌’ನಲ್ಲಿ ಭಾರತದ ಬ್ಯಾಟಿಂಗ್ ಲೈನ್‌ ಅಪ್ ಅಥವಾ ಬೌಲಿಂಗ್ ಲೈನ್‌ ಅಪ್‌ನಲ್ಲಿ ಕೆಲವು ಗುಣಮಟ್ಟದ ಆಟಗಾರರು ಇದ್ದಾರೆ.. ನಮ್ಮಲ್ಲಿ ಬುಮ್ರಾ, ಸಿರಾಜ್, ಕುಲದೀಪ್ ಕೂಡ ಉತ್ತಮ ಫಾರ್ಮ್’ನಲ್ಲಿದ್ದಾರೆ. .ಅವರಲ್ಲಿ ಯಾರು ಮುಂದಿನ ಯುವರಾಜ್ ಸಿಂಗ್ ಆಗಬಹುದು ಎಂಬುದನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ ನಾನು ಆ ಜವಾಬ್ದಾರಿಯನ್ನು ಯಾರಿಗಾದರೂ ನೀಡಬೇಕಾದರೆ, ನಾನು ವಿರಾಟ್ ಕೊಹ್ಲಿಯನ್ನು 2023ರ ಯುವರಾಜ್ ಸಿಂಗ್ ಆಗಿ ಆಯ್ಕೆ ಮಾಡುತ್ತೇನೆ ಮತ್ತು ಭಾರತಕ್ಕೆ ಕಪ್ ಗೆಲ್ಲಿಸಿಕೊಡುವ ಸಾಮಾರ್ಥ್ಯ ಹೊಂದಿದ್ದಾನೆ” ಎಂದು ಹರ್ಭಜನ್ ಹೇಳಿದ್ದಾರೆ.

ಇದನ್ನೂ ಓದಿ: ಈ ಭಾಗಕ್ಕೆ ಅಪ್ಪಳಿಸಲಿದೆ ತೇಜ್ ಚಂಡಮಾರುತ! ಗುಡುಗು-ಮಿಂಚಿನ ಆರ್ಭಟದ ಜೊತೆ ಜಲಪ್ರಳಯದ ಎಚ್ಚರಿಕೆ

2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ನಿರ್ಣಾಯಕ ಪಾತ್ರ ವಹಿಸಿದ್ದರು. 8 ಇನ್ನಿಂಗ್ಸ್‌ಗಳಲ್ಲಿ 90.50 ಸರಾಸರಿಯೊಂದಿಗೆ ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 362 ರನ್ ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News