“ಟಾಸ್’ನಿಂದಲೇ ಗೊತ್ತಾಯ್ತು.. ಈ ತಂಡ ಇವತ್ತು ಸೋಲುತ್ತೆ”- ಭಾರತ vs ನ್ಯೂಜಿಲೆಂಡ್ ಸೆಮೀಸ್ ಬಗ್ಗೆ ಭವಿಷ್ಯ ನುಡಿದ ಶೋಯೆಬ್ ಅಖ್ತರ್

Shoaib Akhtar Statement on IND vs NZ Semi Final: ಪಾಕಿಸ್ತಾನದ ದಂತಕಥೆ ಶೋಯೆಬ್ ಅಖ್ತರ್ ಅವರು ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಗ್ಗೆ ಕಮೆಂಟ್ ಮಾಡಿದ್ದಾರೆ. “ನ್ಯೂಜಿಲೆಂಡ್ ತಂಡದಿಂದ ಬೌಲಿಂಗ್ ಉತ್ತಮವಾಗಿಲ್ಲ. ಟಾಸ್‌ನಲ್ಲಿಯೇ ನ್ಯೂಜಿಲೆಂಡ್ ಹೊರಬಿದ್ದಿದ್ದು ಸತ್ಯ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Nov 15, 2023, 08:31 PM IST
    • ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ
    • ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಗ್ಗೆ ಕಮೆಂಟ್ ಮಾಡಿದ ಶೋಯೆಬ್ ಅಖ್ತರ್
    • ಜೀ ನ್ಯೂಸ್ ಕಾರ್ಯಕ್ರಮ 'ದಿ ಕ್ರಿಕೆಟ್ ಶೋ'
“ಟಾಸ್’ನಿಂದಲೇ ಗೊತ್ತಾಯ್ತು.. ಈ ತಂಡ ಇವತ್ತು ಸೋಲುತ್ತೆ”- ಭಾರತ vs ನ್ಯೂಜಿಲೆಂಡ್ ಸೆಮೀಸ್ ಬಗ್ಗೆ ಭವಿಷ್ಯ ನುಡಿದ ಶೋಯೆಬ್ ಅಖ್ತರ್  title=
shoaib akhtar

Shoaib Akhtar Statement on IND vs NZ Semi Final: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್‌’ನ ಮೊದಲ ಸೆಮಿಫೈನಲ್ ನಡೆಯುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬೃಹತ್ ಸ್ಕೋರ್ ಕಲೆಹಾಕಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಹಲವು ದಾಖಲೆಗಳನ್ನು ಬ್ರೇಕ್ ಮಾಡಿದ್ದರು.

ವಿರಾಟ್ ಕೊಹ್ಲಿ ಐವತ್ತನೇ ಶತಕ ಸಿಡಿಸಿದರೆ, ರೋಹಿತ್ ಶರ್ಮಾ ಸಿಕ್ಸರ್ ದಾಖಲೆ ಬ್ರೇಕ್ ಮಾಡಿದರು. ಇನ್ನು ಭಾರತ ಮೊದಲ ಇನ್ನಿಂಗ್ಸ್‌’ನಲ್ಲಿ 397 ರನ್ ಗಳಿಸಿತ್ತು.

ಇದನ್ನೂ ಓದಿ: ಕೊಹ್ಲಿಯ ಶ್ರೇಷ್ಠ ದಾಖಲೆಗಳ ಮಧ್ಯೆ ಅಬ್ಬರಿಸಿದ ಶ್ರೇಯಸ್ ಅಯ್ಯರ್!

ಈ ಮಧ್ಯೆ, ಪಾಕಿಸ್ತಾನದ ದಂತಕಥೆ ಶೋಯೆಬ್ ಅಖ್ತರ್ ಅವರು ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಗ್ಗೆ ಕಮೆಂಟ್ ಮಾಡಿದ್ದಾರೆ. “ನ್ಯೂಜಿಲೆಂಡ್ ತಂಡದಿಂದ ಬೌಲಿಂಗ್ ಉತ್ತಮವಾಗಿಲ್ಲ. ಟಾಸ್‌ನಲ್ಲಿಯೇ ನ್ಯೂಜಿಲೆಂಡ್ ಹೊರಬಿದ್ದಿದ್ದು ಸತ್ಯ” ಎಂದು ಹೇಳಿದ್ದಾರೆ.

ಜೀ ನ್ಯೂಸ್ ಕಾರ್ಯಕ್ರಮ 'ದಿ ಕ್ರಿಕೆಟ್ ಶೋ' ನಲ್ಲಿ ಸೆಮಿಫೈನಲ್ ಬಗ್ಗೆ ಮಾತನಾಡಿದ ಶೋಯೆಬ್ ಅಖ್ತರ್ ಈ ಬಗ್ಗೆ ಮಾತನಾಡಿದ್ದಾರೆ. “ನ್ಯೂಜಿಲೆಂಡ್ ಟಾಸ್‌’ನಲ್ಲಿಯೇ ಹೊರಬಿದ್ದಿದೆ. ಜನರು ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಹಾಗಾಗಿ ಯಾವುದೇ ವಿವಾದ ನನಗೆ ಬೇಡ” ಎಂದು ಹೇಳಿದರು. ಅಂದಹಾಗೆ ಶೋಯೆಬ್ ಹೇಳಿಕೆಯ ಅರ್ಥವೇನೆಂದರೆ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಎದುರಾಳಿ ತಂಡವು ಭಯಪಡುವಷ್ಟು ವೇಗದ ಆರಂಭವನ್ನು ಮಾಡಿದೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಶೋಯೆಬ್ ಅಖ್ತರ್ ಟೀಂ ಇಂಡಿಯಾದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸಚಿನ್ ದಾಖಲೆ ಬ್ರೇಕ್‌ ಮಾಡಿದ ಪತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ..! ಕ್ಯೂಟ್‌ ವಿಡಿಯೋ ವೈರಲ್

“ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದಕ್ಕಿಂತ ಹೆಚ್ಚು ಸೂಪರ್‌ಸ್ಟಾರ್‌ಗಳು ಹೊರಹೊಮ್ಮಲು ಇದೇ ಕಾರಣ. ಭಾರತವು ಪ್ರಪಂಚದಾದ್ಯಂತ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ, ತನ್ನ ಎಕಾನಮಿಯನ್ನು ಉಳಿಸಿಕೊಂಡಿದೆ ಮತ್ತು ಅಭಿವೃದ್ಧಿಪಡಿಸಿದೆ. ಭಾರತ ಮುನ್ನಡೆಯುತ್ತಿದೆ, ಭಾರತಕ್ಕೆ ಅಭಿನಂದನೆಗಳು. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯಾಗಿರುವ ನಾನು ಭಾರತ ಅದ್ಭುತ ಆಟ ಪ್ರದರ್ಶಿಸಿದೆ ಎಂದು ನಂಬಿದ್ದೇನೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News