WTC Final 2021: ಭಾರತ ತಂಡ 170 ಕ್ಕೆ ಆಲೌಟ್, ನ್ಯೂಜಿಲೆಂಡ್ ಗೆ 139 ರನ್ ಗಳ ಗುರಿ

ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆರನೇ ದಿನದಿಂದ ಭಾರತ ತಂಡವು 170 ರನ್ ಗಳಿಗೆ ಆಲೌಟ್ ಆಗಿದೆ.

Last Updated : Jun 23, 2021, 08:03 PM IST
  • ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆರನೇ ದಿನದಿಂದ ಭಾರತ ತಂಡವು 170 ರನ್ ಗಳಿಗೆ ಆಲೌಟ್ ಆಗಿದೆ.
  • ಭಾರತ ಅಂತಿಮವಾಗಿ 170 ರನ್ ಗಳಿಗೆ ಸರ್ವಪತನವನ್ನು ಕಂಡಿತು, ಈಗ ನ್ಯೂಜಿಲೆಂಡ್ ತಂಡವು ಪಂದ್ಯವನ್ನು ಗೆಲ್ಲಲು 139 ರನ್ ಗಳನ್ನು ಗಳಿಸಬೇಕಾಗಿದೆ.
WTC Final 2021: ಭಾರತ ತಂಡ 170 ಕ್ಕೆ ಆಲೌಟ್, ನ್ಯೂಜಿಲೆಂಡ್ ಗೆ 139 ರನ್ ಗಳ ಗುರಿ  title=
Photo Courtesy: Twitter

ನವದೆಹಲಿ: ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆರನೇ ದಿನದಿಂದ ಭಾರತ ತಂಡವು 170 ರನ್ ಗಳಿಗೆ ಆಲೌಟ್ ಆಗಿದೆ.

ನ್ಯೂಜಿಲೆಂಡ್ ತಂಡಕ್ಕೆ ಭಾರತ ತಂಡವು 139 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.ನಿನ್ನೆ 64 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಎರಡನೆ ಇನಿಂಗ್ಸ್ ನ್ನು ಮುಂದುವರೆಸಿ 170 ಕ್ಕೆ ಆಲ್ ಔಟ್ ಆಗಿದೆ.

ಇದನ್ನೂ ಓದಿ: WTC Final 2021: ಭಾರತಕ್ಕೆ 32 ರನ್ ಗಳ ಮುನ್ನಡೆ, ಎರಡನೇ ಇನಿಂಗ್ಸ್ 64/2

ಭಾರತದ ಪರವಾಗಿ ರಿಶಬ್ ಪಂತ್ 41 ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 20 ರ ಗಡಿ ದಾಟಲಿಲ್ಲ.ನ್ಯೂಜಿಲೆಂಡ್ ತಂಡದ ಪರವಾಗಿ ಸೌಥಿ 4 ಹಾಗೂ ಬೌಲ್ಟ್ 3 ಜೆಮಿಸನ್ 2 ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಪತನಕ್ಕೆ ಕಾರಣವಾದರು.

ಭಾರತ ಅಂತಿಮವಾಗಿ 170 ರನ್ ಗಳಿಗೆ ಸರ್ವಪತನವನ್ನು ಕಂಡಿತು, ಈಗ ನ್ಯೂಜಿಲೆಂಡ್ ತಂಡವು ಪಂದ್ಯವನ್ನು ಗೆಲ್ಲಲು 139 ರನ್ ಗಳನ್ನು ಗಳಿಸಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News