'ರಿತಿಕಾ ಕಡೆ ನೋಡಬೇಡ' ರೋಹಿತ್ ಶರ್ಮಾಗೆ ಬೆದರಿಕೆ ಹಾಕಿದ್ದ ಯುವರಾಜ್!! 'ಹಿಟ್ ಮ್ಯಾನ್' ಲವ್ ಸ್ಟೋರಿ ಸಿನಿಮಾ ಮಾಡಿದ್ರೆ ಸೂಪರ್‌ ಹಿಟ್‌ ಗ್ಯಾರೆಂಟಿ!

Rohit Sharma Love Story: ರೋಹಿತ್ ತನ್ನ ಕ್ರಿಕೆಟ್ ಪಯಣ ಆರಂಭಿಸಿದ ಮುಂಬೈನ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಕುಳಿತು ರಿತಿಕಾಗೆ ಪ್ರಪೋಸ್‌ ಮಾಡಿದ್ದರು. 

Written by - Chetana Devarmani | Last Updated : Mar 28, 2024, 02:00 PM IST
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
  • ಮಂಡಿಯೂರಿ ಕುಳಿತು ರಿತಿಕಾಗೆ ಪ್ರಪೋಸ್‌ ಮಾಡಿದ್ದ ಹಿಟ್‌ ಮ್ಯಾನ್‌
  • ಲವ್ ಸ್ಟೋರಿ ಸಿನಿಮಾ ಮಾಡಿದ್ರೆ ಸೂಪರ್‌ ಹಿಟ್‌ ಗ್ಯಾರೆಂಟಿ!
'ರಿತಿಕಾ ಕಡೆ ನೋಡಬೇಡ' ರೋಹಿತ್ ಶರ್ಮಾಗೆ ಬೆದರಿಕೆ ಹಾಕಿದ್ದ ಯುವರಾಜ್!! 'ಹಿಟ್ ಮ್ಯಾನ್' ಲವ್ ಸ್ಟೋರಿ ಸಿನಿಮಾ ಮಾಡಿದ್ರೆ ಸೂಪರ್‌ ಹಿಟ್‌ ಗ್ಯಾರೆಂಟಿ! title=

Rohit Sharma Wife Ritika Sajdeh: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2015 ರ ಸೆಪ್ಟೆಂಬರ್ ತಿಂಗಳಲ್ಲಿ ರಿತಿಕಾ ಅವರನ್ನು ವಿವಾಹವಾದರು. ರೋಹಿತ್ ತನ್ನ ಕ್ರಿಕೆಟ್ ಪಯಣ ಆರಂಭಿಸಿದ ಮುಂಬೈನ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಕುಳಿತು ರಿತಿಕಾಗೆ ಪ್ರಪೋಸ್‌ ಮಾಡಿದ್ದರು. 

ರೋಹಿತ್ ಶರ್ಮಾ ಮತ್ತು ರಿತಿಕಾ ಅವರ ಪ್ರೇಮಕಥೆ ಬಲು ಇಂಟರೆಸ್ಟಿಂಗ್‌ ಆಗಿದೆ. ಡೇಟಿಂಗ್ ಮತ್ತು ಮದುವೆಗೂ ಮುನ್ನ ಇಬ್ಬರೂ ವೃತ್ತಿಪರ ಸಂಬಂಧ ಹೊಂದಿದ್ದರು. ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ರಾಖಿ ಸಹೋದರಿ ರಿತಿಕಾ. ರಿತಿಕಾ ಕಡೆ ನೋಡಬೇಡಿ ಎಂದು ಯುವಿ ರೋಹಿತ್‌ಗೆ ಆಗಾಗ ತಮಾಷೆಯಾಗಿ ಬೆದರಿಕೆ ಹಾಕುತ್ತಿದ್ದರಂತೆ. ರೋಹಿತ್ ಮತ್ತು ರಿತಿಕಾ ಮೊದಲ ಬಾರಿ ಭೇಟಿಯಾಗಿದ್ದು, ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿ. ಮೊದಲ ಭೇಟಿಯಲ್ಲಿ ಇಬ್ಬರ ನಡುವೆ ಒಳ್ಳೆಯ ಮಾತುಕತೆ ಏನು ನಡೆದಿರಲಿಲ್ಲ.

ಚಾಟ್‌ ಶೋ ಒಂದರಲ್ಲಿ ರೋಹಿತ್‌ ಶರ್ಮಾ ರಿತಿಕಾ ಅವರನ್ನು ಮೊದಲು ಭೇಟಿಯಾದ ಸಂದರ್ಭದ ಬಗ್ಗೆ ಹೇಳಿದ್ದಾರೆ. ಇದಕ್ಕೂ ಒಂದು ತಮಾಷೆಯ ಕಥೆಯಿದೆ. ಇದನ್ನು ಹೇಳಲು ನನಗೂ ಸ್ವಲ್ಪ ಮುಜುಗರವಾಗುತ್ತಿದೆ. ಶೂಟಿಂಗ್ ಮಾಡುತ್ತಿದ್ದೆವು. ಆಗ ನನಗೆ 20 ವರ್ಷ. ಹಾಗಾಗಿ ನನಗೇನೂ ತಿಳಿದಿರಲಿಲ್ಲ. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನಾನು ತಲುಪಿದೆ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ರಿತಿಕಾ ಒಳ್ಳೆಯ ಸಮಯದಲ್ಲಿ ಮಾತ್ರವಲ್ಲ ಕೆಟ್ಟ ಸಮಯದಲ್ಲೂ ತನಗೆ ಬಲವಾದ ಆಧಾರ ಸ್ತಂಭವಾಗಿ ನಿಂತಿದ್ದಾಳೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಮತ್ತೆ ರೋಹಿತ್ ಹೆಗಲಿಗೆ ಮುಂಬಯಿ ಸಾರಥ್ಯ!ಸತತ ಸೋಲಿನಿಂದ ಬೇಸತ್ತು ನಿರ್ಧಾರ ತೆಗೆದುಕೊಂಡರೇ ಆಕಾಶ್ ಅಂಬಾನಿ ! 

ಅಲ್ಲಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಕೂಡ ಇದ್ದರು. ನಾನು ಯುವಿಯನ್ನು ಭೇಟಿಯಾಗಲು ಹೋಗಿದ್ದೆ. ಆಗ ರಿತಿಕಾ ಅಲ್ಲಿ ಕುಳಿತಿದ್ದಳು. ಯುವಿ ನನ್ನನ್ನು ನೋಡಿದ ತಕ್ಷಣ ಅವಳು ನನ್ನ ಸಹೋದರಿ ಎಂದರು. ಅವಳನ್ನು ನೋಡಿ, ನಾನು ಹೇಳಿದೆ - ಯುವಿ ಪಾ, ನಾನು ನಿನ್ನನ್ನು ಭೇಟಿಯಾಗಲು ಬಂದಿದ್ದೇನೆ ಎಂದೆ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ಇದಾದ ನಂತರ ನಮ್ಮ ಸಂಬಂಧ ಎಂದಿಗೂ ಮುಗಿಯಲಿಲ್ಲ. ನಾವು 2015 ರಲ್ಲಿ ಮದುವೆಯಾದೆವು ಎಂದು ರೋಹಿತ್‌ ಹೇಳಿದ್ದಾರೆ.  

ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದರು. ರೋಹಿತ್ ಮತ್ತು ರಿತಿಕಾ ಕ್ರಿಕೆಟ್ ಮೂಲಕ ಪರಸ್ಪರ ಭೇಟಿಯಾದರು. ಅವರ ಭೇಟಿ ಕ್ರಮೇಣ ಪ್ರೀತಿಗೆ ತಿರುಗಿತು. ರೋಹಿತ್ ಶರ್ಮಾ ರಿತಿಕಾ ಜೊತೆ 6 ವರ್ಷಗಳ ಕಾಲ ಡೇಟಿಂಗ್ ಮಾಡಿದರು. ರೋಹಿತ್ ತಮ್ಮ ಪತ್ನಿ ರಿತಿಕಾಗೆ ತುಂಬಾ ಫಿಲ್ಮಿ ರೀತಿಯಲ್ಲಿ ಪ್ರಪೋಸ್ ಮಾಡಿದ್ದರು. ಮುಂಬೈನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಡಿಯೂರಿ ಕುಳಿತು ರೋಹಿತ್ ರಿತಿಕಾಗೆ ಪ್ರಪೋಸ್ ಮಾಡಿದ್ದರು. 

ರೋಹಿತ್ ಶರ್ಮಾ ಮತ್ತು ರಿತಿಕಾ 2015 ರಲ್ಲಿ ಮದುವೆಯಾದರು. ಮದುವೆಯಾದ 3 ವರ್ಷಗಳ ನಂತರ ರೋಹಿತ್ ಮತ್ತು ರಿತಿಕಾ ದಂಪತಿಗೆ ಸಮೈರಾ ಎಂಬ ಮಗಳು ಜನಿಸಿದಳು. ರೋಹಿತ್ ಶರ್ಮಾ ಪ್ರಸ್ತುತ ಭಾರತ ತಂಡದ ನಾಯಕರಾಗಿದ್ದಾರೆ. ಪ್ರತಿ ಪ್ರಮುಖ ಪಂದ್ಯಗಳಲ್ಲಿ ಹಿಟ್‌ಮ್ಯಾನ್ ಅನ್ನು ಹುರಿದುಂಬಿಸಲು ಅವರ ಪತ್ನಿ ರಿತಿಕಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2024: ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣವಾದ್ರಾ ಈ ಆಟಗಾರ? ಒಂದೇ ಒಂದು ವಿಕೆಟ್‌ ಪಡೆಯದೇ ಇದ್ದಿದ್ದೇ ತಂಡಕ್ಕೆ ಮುಳುವಾಯ್ತಾ!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News