ಮತ್ತೆ ರೋಹಿತ್ ಹೆಗಲಿಗೆ ಮುಂಬಯಿ ಸಾರಥ್ಯ!ಸತತ ಸೋಲಿನಿಂದ ಬೇಸತ್ತು ನಿರ್ಧಾರ ತೆಗೆದುಕೊಂಡರೇ ಆಕಾಶ್ ಅಂಬಾನಿ !

Mumbai Indians IPL 2024 :ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.ಜನರು ಕೂಡಾ ಇದೇ ನಿಟ್ಟಿನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Written by - Ranjitha R K | Last Updated : Mar 28, 2024, 12:47 PM IST
  • IPL 2024ರಲ್ಲಿ ಸತತ ಎರಡು ಸೋಲಿನಿಂದ ಮುಂಬೈ ಇಂಡಿಯನ್ಸ್‌ ಕಂಗೆಟ್ಟಿದೆ.
  • ಮುಂಬೈ ಇಂಡಿಯನ್ಸ್ ಮೊದಲ ಎರಡು ಪಂದ್ಯಗಳನ್ನೂ ಕೈ ಚೆಲ್ಲಿದೆ
  • ಮತ್ತೆ ರೋಹಿತ್‌ ಹೆಗಲೇರಲಿದೆಯೇ ಮುಂಬೈ ನಾಯಕತ್ವ
ಮತ್ತೆ ರೋಹಿತ್ ಹೆಗಲಿಗೆ ಮುಂಬಯಿ ಸಾರಥ್ಯ!ಸತತ ಸೋಲಿನಿಂದ ಬೇಸತ್ತು ನಿರ್ಧಾರ ತೆಗೆದುಕೊಂಡರೇ ಆಕಾಶ್ ಅಂಬಾನಿ !  title=

Mumbai Indians IPL 2024 : IPL 2024ರಲ್ಲಿ ಸತತ ಎರಡು ಸೋಲಿನಿಂದ ಮುಂಬೈ ಇಂಡಿಯನ್ಸ್‌ ಕಂಗೆಟ್ಟಿದೆ. ಮುಂಬೈ ಇಂಡಿಯನ್ಸ್ ಮೊದಲ ಎರಡು ಪಂದ್ಯಗಳನ್ನೂ ಕೈ ಚೆಲ್ಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಗುಜರಾತ್ ಟೈಟಾನ್ಸ್ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ತಂಡ ಸನ್ ರೈಸರ್ಸ್ ಹೈದರಾಬಾದ್ (SRH) ಎದುರು ಮಂಡಿಯೂರಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 2024ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿರುವುದು ಹಾರ್ದಿಕ್ ಪಾಂಡ್ಯ. 

ಮತ್ತೆ ರೋಹಿತ್‌ ಹೆಗಲೇರಲಿದೆಯೇ ಮುಂಬೈ ನಾಯಕತ್ವ : 
ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಐಪಿಎಲ್ ಪಂದ್ಯದ ಸೋಲಿನ ನಂತರ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಆಕಾಶ್ ಅಂಬಾನಿ ಗಂಭೀರ ಚರ್ಚೆ ನಡೆಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ಗಳು ಮುಂಬೈ ಇಂಡಿಯನ್ಸ್ ಬೌಲರ್‌ಗಳ ಬೆವರಿಳಿಸಿ ಬಿಟ್ಟಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ (SRH) 3 ವಿಕೆಟ್‌ಗೆ 277 ರನ್ ಗಳಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದೆ. 

ಇದನ್ನೂ ಓದಿ : Hardik Pandya: ಮುಂಬೈ ಇಂಡಿಯನ್ಸ್ ನ್ಯೂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?

ಸಂಚಲನ ಮೂಡಿಸಿದೆ ಈ ಫೋಟೋ : 
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧ 31 ರನ್‌ಗಳ ಸೋಲಿನ ನಂತರ ಮಿಡ್‌ಫೀಲ್ಡ್‌ನಲ್ಲಿಯೇ ಮೀಟಿಂಗ್ ನಡೆಸಲಾಗಿದೆ.ಇಲ್ಲಿ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ನಡುವಿನ  ಮಾತುಕತೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 

 

ರೋಹಿತ್ ಶರ್ಮಾಗೆ ಹೆಚ್ಚಿದ ಬೇಡಿಕೆ : 
ಇದೀಗ ಈ ಫೋಟೋ ಹರಿದಾಡುತ್ತಿರುವ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.ಜನರು ಕೂಡಾ ಇದೇ ನಿಟ್ಟಿನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 523 ರನ್ ಗಳಿಸಿರುವುದು ಐಪಿಎಲ್‌ನಲ್ಲಿ ದಾಖಲೆಯಾಗಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ 38 ಸಿಕ್ಸರ್‌ಗಳು ಹೊರಹೊಮ್ಮಿದ್ದು ಕೂಡಾ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ.  

 

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣವಾದ್ರಾ ಈ ಆಟಗಾರ? ಒಂದೇ ಒಂದು ವಿಕೆಟ್‌ ಪಡೆಯದೇ ಇದ್ದಿದ್ದೇ ತಂಡಕ್ಕೆ ಮುಳುವಾಯ್ತಾ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News