ಈ ಶೀರ್ಷಿಕೆ ಯಾವುದೋ ಚಂದನವನದ ಸಿನಿಮಾದ ಹೆಸರು ಅಲ್ಲ! ಬದಲಾಗಿ ಮೀಟೂ ಅಭಿಯಾನದ ಮೂಲಕ ಭಾರಿ ಸಂಚಲನವನ್ನೇ ಸೃಷ್ಟಿಸಿರುವ ಶ್ರುತಿ ಹರಿಹರನ್ ಅವರು ತಮ್ಮ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದು ಹೀಗೆ.
ಅರ್ಜುನ್ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪ ಈಗ ಭಾರಿ ವಿವಾದವನ್ನು ಸೃಷ್ಟಿಸಿದೆ.ಈಗ ಈ ಆರೋಪದ ಹಿನ್ನಲೆಯಲ್ಲಿ ಸರ್ಜಾ ಅವರು ಈಗಾಗಲೇ ನಟಿ ಶ್ರುತಿ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಸಹ ದಾಖಲಿಸಿದ್ದಾರೆ.
ಮೀಟೂ ಅಭಿಯಾನ ಈಗ ಚಂದನವನದಲ್ಲಿ ಭಾರಿ ಬಿರುಗಾಳಿ ಅಲೆಯನ್ನೇ ಸೃಷ್ಟಿಸಿದೆ.ಅದರಲ್ಲೂ ನಟಿ ಶ್ರುತಿ ಹರಿಹರನ್ ತಾವು ವಿಸ್ಮಯ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯ ವರ್ತನೆ ತೋರಿದರು ಎಂದು ಹೇಳಿ ಆರೋಪ ಮಾಡಿದ್ದಾರೆ.ಈಗ ಅರ್ಜುನ್ ಸರ್ಜಾ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.