ಡಾ. ಎಪಿಜೆ ಅಬ್ದುಲ್ ಕಲಾಂ. ಈ ಹೆಸರು ಕಿವಿಗೆ ಬಿದ್ದ ತಕ್ಷಣ ಮಹಾಗುರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಆದರ್ಶನೀಯ ವ್ಯಕ್ತಿತ್ವವೊಂದು ಕಣ್ಣ ಮುಂದೆ ಬರುತ್ತದೆ. ಖಂಡಿತಾ ನಿಜ. ಅಬ್ದುಲ್ ಕಲಾಂ ಎಂದರೇನೆ ಹಾಗೆ ಬದುಕಿಗೆ ಸ್ಫೂರ್ತಿಯಾದ, ಆದರ್ಶವಾದ ಗುರು ಅವರು, ಭಾರತದ ಹೆಮ್ಮೆಯ ಪುತ್ರ, ಅಪೂರ್ವ ವಿಜ್ಞಾನಿ ಇಂದಿಗೂ ಜನಮಾನಸದಲ್ಲಿ 'ಮಿಸೈಲ್ ಮ್ಯಾನ್' ಎಂದೇ ರಾರಾಜಿಸುತ್ತಿದ್ದಾರೆ. ರಾಷ್ಟ್ರಪತಿಯಾಗಿಯೂ ಅಬ್ದುಲ್ ಕಲಾಂ ಅವರು ಜನರಿಗೆ ಬಲು ಹತ್ತಿರವಾಗಿದ್ದರು.
mahabharat and abdul kalam: ಬಹಳ ಸರಳವಾಗಿ ಜೀವನ ನಡೆಸುತ್ತಿದ್ದ ಅಬ್ದುಲ್ ಕಲಾಂ ಅವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ ಎಂಬುದು ನಮಗೆಲ್ಲಾ ತಿಳಿದಿದೆ. ಇವೆಲ್ಲದರ ಹೊರತಾಗಿ ಕಲಾಂ ಜಿಗೆ ಮಹಾಭಾರತದ ಒಂದು ವ್ಯಕ್ತಿತ್ವವೆಂದರೆ ತುಂಬಾ ಇಷ್ಟವಂತೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ.ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು.ವಿದ್ಯಾರ್ಥಿಯಾಗಿ ಅವರ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ತುಂಬಿತ್ತು.
ಎಪಿಜೆ ಅಬ್ದುಲ್ ಕಲಾಂ ಅವರು ಬಾಹ್ಯಾಕಾಶ ವಿಜ್ಞಾನಿ ಮತ್ತು ಶಿಕ್ಷಕರಾಗಿದ್ದರು, ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ 'ಜನರ ರಾಷ್ಟ್ರಪತಿ' ಎಂದು ಖ್ಯಾತಿ ಪಡೆದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.