ನವದೆಹಲಿ: ಇಂದು ಭಾರತದ 11ನೇ ರಾಷ್ಟ್ರಪತಿ, ಪ್ರಸಿದ್ಧ ವಿಜ್ಞಾನಿ, ಭಾರತದ ಕ್ಷಿಪಣಿ ಮನುಷ್ಯ ಮತ್ತು ಶಿಕ್ಷಕ ಡಾ.ಎಪಿಜೆ ಅಬ್ದುಲ್ ಕಲಾಂ ಅವರ 91ನೇ ಜನ್ಮದಿನ. ಪ್ರತಿ ವರ್ಷ ಅಕ್ಟೋಬರ್ 15ರಂದು ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರಾಗಿ ಸದಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದ ಕಲಾಂ ಅವರು ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡುತ್ತಿದ್ದರು.
ಅಬ್ದುಲ್ ಕಲಾಂರವರ ಜನ್ಮದಿನದ ಪ್ರಯುಕ್ತ ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸುವ ಪರಿಪಾಠ 2010ರಿಂದಲೇ ಶುರುವಾಯಿತು. ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲಿನ ಕಲಾಂರವರ ಪ್ರೀತಿಯನ್ನು ಮನಗಂಡು ಸ್ವತಃ ವಿಶ್ವ ಸಂಸ್ಥೆಯ ಸಂಸ್ಥೆ (UNO)ಯೇ ಅ.15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು.
ಕಲೆಕ್ಟರ್ ಆಗಬೇಕೆಂದು ಕನಸು ಕಂಡಿದ್ದ ತಂದೆ
ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದು ಲ್ ಕಲಾಂ(APJ Abdul Kalam) ಅವರು ಅಕ್ಟೋಬರ್ 15, 1931ರಂದು ತಮಿಳುನಾಡಿನ ರಾಮೇಶ್ವರಂನ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮೀನುಗಾರರಿಗೆ ಬಾಡಿಗೆಗೆ ದೋಣಿಗಳನ್ನು ನೀಡುತ್ತಿದ್ದರು. ಕಲಾಂ ಅವರು ಬಾಲ್ಯದಲ್ಲಿ ಸಾಕಷ್ಟು ಕಷ್ಟಪಟ್ಟಿ ದ್ದಾರೆ. 1939ರ 2ನೇ ಮಹಾಯುದ್ಧದ ಸಮಯದಲ್ಲಿ ರಾಮೇಶ್ವರಂ ರೈಲು ನಿಲ್ದಾಣದಲ್ಲಿ ಹುಣಸೆ ಬೀಜ ಮಾರಾಟ ಮಾಡುವುದರಿಂದ ಹಿಡಿದು ಮನೆಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಅವರು ಕೇವಲ 8 ವರ್ಷ ವಯಸ್ಸಿನವರಾಗಿದ್ದರು. ಬಾಲ್ಯ ದಿಂದಲೂ ವಿದ್ಯಾಭ್ಯಾಸದಲ್ಲಿ ನಿಷ್ಣಾತನಾಗಿದ್ದ ಕಲಾಂಗೆ ಓದಲು ಅವರ ತಂದೆ ಪ್ರೋತ್ಸಾಹ ನೀಡುತ್ತಿದ್ದರು. ತನ್ನ ಮಗ ಬೆಳೆದು ಮುಂದೆ ದೊಡ್ಡ ಕಲೆಕ್ಟರ್ ಆಗಬೇಕೆಂದು ಕಲಾಂ ತಂದೆಯವರ ಆಸೆಯಾಗಿತ್ತು.
ಇದನ್ನೂ ಓದಿ: ಬಂಗಾಳಿ ನಾಡಿನಲ್ಲಿ ಕುವೆಂಪು...! ಹಿಂದಿ ಹೇರಿಕೆ ವಿರುದ್ಧ ಬಂಗಾಳಿಗಳ ಆಕ್ರೋಶ
ದೇಶದ ಕ್ಷಿಪಣಿಗಾರ
ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ISRO)ದಲ್ಲಿ ವಿಜ್ಞಾನಿ ಮತ್ತು ನಿರ್ವಾಹಕರಾಗಿ ಕೆಲಸ ಮಾಡಿದ್ದರು. ಭಾರತದ 11ನೇ ರಾಷ್ಟ್ರ ಪತಿಯಾಗುವ ಮೊದಲು ಭಾರತದ ನಾಗರಿಕ ಬಾಹ್ಯಾಕಾಶ ಮತ್ತು ಮಿಲಿಟರಿ ಕ್ಷಿಪಣಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಕಲಾಂ ಅಮೂಲ್ಯ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ತಂತ್ರಜ್ಞಾನವನ್ನುಸ್ವತಂತ್ರಗೊಳಿಸಿದ ನಂತರ ಅಬ್ದುಲ್ ಕಲಾಂ ಅವರನ್ನು ಮಿಸೈಲ್ಮ್ಯಾ ನ್ ಎಂದು ಕರೆಯಲಾಯಿತು.
ವಿದ್ಯಾರ್ಥಿಗಳಿಗೆ ಕಲಾಂರ ಜೀವನ ಸಂದೇಶಗಳು
- ಕನಸು ಎಂದರೆ ರಾತ್ರಿ ಗಾಢ ನಿದ್ರೆಯಲ್ಲಿ ಬೀಳುತ್ತಲ್ಲ ಅದಲ್ಲ. ಯಾವ ಕನಸು ನಮ್ಮನ್ನು ನಿದ್ದೆಯೇ ಮಾಡಲಾಗದಂತೆ ಕಾಡುತ್ತದಲ್ಲ, ಅಂತಹ ಕನಸುಗಳನ್ನು ಕಾಣಬೇಕು.
- ಪ್ರಯತ್ನಿಸುವವರು ಬಿಟ್ಟು ಕೊಡುವುದನ್ನು ಕಾಯುವವರು ಮಾತ್ರ ಪಡೆಯುತ್ತಾರೆ.
- ನೀವು ಸೂರ್ಯನಂತೆ ಬೆಳಗಬೇಕಾದರೆ, ಮೊದಲು ಸೂರ್ಯನಂತೆ ಉರಿಯಬೇಕು
- ವಿದ್ಯಾರ್ಥಿಯ ಪ್ರಮುಖ ಲಕ್ಷಣವೆಂದರೆ ಪ್ರಶ್ನೆಗಳನ್ನು ಕೇಳುವುದು, ವಿದ್ಯಾ ರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡುವುದು.
- ನಮ್ಮ ಸಹಿ ಆಟೋಗ್ರಾಫ್ ಆಗಿ ಬದಲಾಗುವ ದಿನ, ನೀವು ಯಶಸ್ವಿಯಾಗಿದ್ದೀರಿ ಎಂದು ಭಾವಿಸಿರಿ.
- ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ.
- ಮನುಷ್ಯನಿಗೆ ಕಷ್ಟಗಳು ಬಹಳ ಮುಖ್ಯ ಏಕೆಂದರೆ ಕಷ್ಟವಿಲ್ಲದೆ ಯಶಸ್ಸನ್ನು ಆನಂದಿಸಲಾಗುವುದಿಲ್ಲ
- ಯಶಸ್ಸಿನ ಬಗೆಗಿನ ನನ್ನ ವ್ಯಾಖ್ಯಾನವು ಸಾಕಷ್ಟು ಪ್ರಬಲವಾಗಿದ್ದರೆ ಸೋಲು ನನ್ನನ್ನು ಎಂದಿಗೂ ಹಿಂದಿಕ್ಕುವುದಿಲ್ಲ.
- ಆಕಾಶವನ್ನು ನೋಡಿ, ನಾವು ಒಬ್ಬಂಟಿಯಾಗಿಲ್ಲ.. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಮತ್ತು ಕಷ್ಟಪಟ್ಟು ಕೆಲಸ ಮಾಡುವವರಿಗೆ ಪ್ರತಿಫಲ ನೀಡಲು ಅದು ನಮಗೆ ಅವಕಾಶ ನೀಡುತ್ತಿದೆ
- ವಿನಾಶವನ್ನು ತಪ್ಪಿಸಲು ಬುದ್ಧಿವಂತಿಕೆಯೇ ಅಸ್ತ್ರವಾಗಿದೆ, ಅದು ಶತ್ರುಗಳಿಂದ ನಾಶವಾಗದ ಆಂತರಿಕ ಕೋಟೆಯಾಗಿದೆ.
- ಒಂದು ಒಳ್ಳೆಯ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ. ಆದರೆ, ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
- ನಿಮ್ಮ ಮೊದಲ ಗೆಲುವಿನ ಬಳಿಕ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ಒಂದೊಮ್ಮೆ ನೀವು 2ನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೇಳಲು ಹೆಚ್ಚಿನ ತುಟಿಗಳು ಕಾಯುತ್ತಿರುತ್ತವೆ.
- ನಿಮ್ಮ ಕೊನೆಯ ತಪ್ಪೇ ನಿಮ್ಮ ಅತ್ಯುತ್ತಮ ಶಿಕ್ಷಕ ಎಂಬುದನ್ನು ಸದಾ ನೆನಪಿನಲ್ಲಿಡಿ
- ಮತ್ತೊಬ್ಬರನ್ನು ಸೋಲಿಸುವುದು ಬಲು ಸುಲಭ. ಆದರೆ, ಮತ್ತೊಬ್ಬರನ್ನು ಗೆಲ್ಲುವುದು ಬಲು ಕಷ್ಟ.
- ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಲು, ನೀವು ನಿಮ್ಮ ಗುರಿಯ ಬಗ್ಗೆ ಏಕ ಮನಸ್ಸಿನ ಭಕ್ತಿ ಹೊಂದಿರಬೇಕು
- ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಮತ್ತು ದೃಢ ಹಾಗೂ ಸತತ ಪ್ರಯತ್ನ ಎಂಬ 4 ವಿಷಯಗಳನ್ನು ಪಾಲಿಸಿದರೆ ಏನು ಬೇಕಾದರೂ ಸಾಧಿಸಬಹುದು.
ಇದನ್ನೂ ಓದಿ: ಬ್ಲ್ಯಾಕ್‌ಮೇಲ್ ಮಾಡಿಯೇ ಕೋಟಿ ಕೋಟಿ ಸಂಪಾದಿಸಿದ ಚಾಲಾಕಿ; ಸಿನಿಮಾ ಮಾಡಲು ಹೊರಟ ನಿರ್ದೇಶಕ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.