Adipurush Cast remuneration: 'ಆದಿಪುರುಷ' ಚಿತ್ರ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದರೂ ಚಿತ್ರಕ್ಕೆ ಸಂಬಂಧಿಸಿದ ವಿವಾದಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
Adipurush : ಹನುಮ ಜಯಂತಿಯ ಹಿನ್ನೆಲೆಯಲ್ಲಿ ಆದಿಪುರುಷ್ ಇತ್ರದ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಓಂ ರಾವುತ್ ಅವರ ದೊಡ್ಡ ಬಜೆಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಹನುಮಂತನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ಈ ಪೋಸ್ಟರ್ ಹನುಮ ಜಯಂತಿಯಂದು ಬಿಡುಗಡೆಯಾಗಿದ್ದು ವಿಶೇಷವೆನಿಸುತ್ತಿದೆ.
Adipurush : ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಆದಿಪುರುಷ, ಹೆಚ್ಚು ನಿರೀಕ್ಷಿತ ಪೌರಾಣಿಕ ಫ್ಯಾಂಟಸಿ ಚಲನಚಿತ್ರಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಾಸ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸಾನೋನ್ ಸೀತೆಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಾಲಿವುಡ್ ಹಿರಿಯ ನಟ, ರೆಬಲ್ ಸ್ಟಾರ್ ಕ್ರಿಷ್ಣಂ ರಾಜು ಅವರ ನಿಧನದ ನಂತರ ನಟ ಪ್ರಭಾಸ್ ಕುಗ್ಗಿದ್ದರು. ಅಲ್ಲದೆ, ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದರು. ಇನ್ನು ಡಾರ್ಲಿಂಗ್ ಲಿಸ್ಟ್ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ. ಆದ್ರೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದ್ದು, ವರದಿಗಳ ಪ್ರಕಾರ ಪ್ರಭಾಸ್ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ತಮ್ಮ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳಾಗಿವೆ. ಟಾಲಿವುಡ್ ಹಿಟ್ ಸಿನಿಮಾ ʼಈಶ್ವರ್ʼ ಮೂಲಕ ಪ್ರಭಾಸ್ ಅಭಿಮಾನಿಗಳ ನೆಚ್ಚಿನ ನಟನಾಗಿ ಹೊರಹೊಮ್ಮಿದರು. ನಂತರ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾ ಸ್ಟಾರ್ಡಮ್ ತಂದುಕೊಟ್ಟಿತು. ಅಲ್ಲದೆ, ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ʼವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಾಟಿʼ ಮಿಂಚಲು ಕಾರಣವಾಯಿತು.
ನಟ ಪ್ರಭಾಸ್ ಅವರನ್ನು ಚಿತ್ರರಂಗದ ಬಾಹುಬಲಿ ಎಂದು ಕರೆಯಲಾಗುತ್ತದೆ. ಅವರು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಕಾರ್ಯನಿರತ ನಟರಲ್ಲಿ ಒಬ್ಬರು. ಫಿಲ್ಮ್ ಪ್ರಾಜೆಕ್ಟ್ ಗಳ ವಿಷಯ ಬಂದಾಗಲೂ ಪ್ರಭಾಸ್ ಗೆ ಸರಿಸಾಟಿ ಇಲ್ಲ. ಅವರು ಈ ಕಾಲದ ಅತ್ಯಂತ ಕಾರ್ಯನಿರತ ಖ್ಯಾತನಾಮರಲ್ಲಿ ಒಬ್ಬರು. ಪ್ರಭಾಸ್ ಅನೇಕ ದೊಡ್ಡ ಬಜೆಟ್ ಚಲನಚಿತ್ರಗಳನ್ನು ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.