Prabhas Health : ಪ್ರಭಾಸ್‌ ಆರೋಗ್ಯದಲ್ಲಿ ಏರುಪೇರು.. ಎಲ್ಲಾ ಸಿನಿಮಾ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ ಡಾರ್ಲಿಂಗ್‌..!

ಟಾಲಿವುಡ್‌ ಹಿರಿಯ ನಟ, ರೆಬಲ್‌ ಸ್ಟಾರ್ ಕ್ರಿಷ್ಣಂ ರಾಜು ಅವರ ನಿಧನದ ನಂತರ ನಟ ಪ್ರಭಾಸ್‌ ಕುಗ್ಗಿದ್ದರು. ಅಲ್ಲದೆ, ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದರು. ಇನ್ನು ಡಾರ್ಲಿಂಗ್‌ ಲಿಸ್ಟ್‌ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ. ಆದ್ರೆ ಇದೀಗ ಬಿಗ್ ಅಪ್‌ಡೇಟ್‌ ಒಂದು ಹೊರ ಬಿದ್ದಿದ್ದು, ವರದಿಗಳ ಪ್ರಕಾರ ಪ್ರಭಾಸ್‌ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ತಮ್ಮ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

Written by - Krishna N K | Last Updated : Feb 9, 2023, 04:19 PM IST
  • ಡಾರ್ಲಿಂಗ್‌ ಲಿಸ್ಟ್‌ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ.
  • ಆದ್ರೆ ಇದೀಗ ಪ್ರಭಾಸ್‌ ಕುರಿತು ಬಿಗ್ ಅಪ್‌ಡೇಟ್‌ ಒಂದು ಹೊರ ಬಿದ್ದಿದೆ.
  • ಆರೋಗ್ಯ ಸಮಸ್ಯೆ ಹಿನ್ನಲೆ ಪ್ರಭಾಸ್‌ ತಮ್ಮ ಎಲ್ಲಾ ಸಿನಿಮಾಗಳ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ.
Prabhas Health : ಪ್ರಭಾಸ್‌ ಆರೋಗ್ಯದಲ್ಲಿ ಏರುಪೇರು.. ಎಲ್ಲಾ ಸಿನಿಮಾ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ ಡಾರ್ಲಿಂಗ್‌..! title=

Prabhas Health updates : ಟಾಲಿವುಡ್‌ ಹಿರಿಯ ನಟ, ರೆಬಲ್‌ ಸ್ಟಾರ್ ಕ್ರಿಷ್ಣಂ ರಾಜು ಅವರ ನಿಧನದ ನಂತರ ನಟ ಪ್ರಭಾಸ್‌ ಕುಗ್ಗಿದ್ದರು. ಅಲ್ಲದೆ, ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದರು. ಇನ್ನು ಡಾರ್ಲಿಂಗ್‌ ಲಿಸ್ಟ್‌ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ. ಆದ್ರೆ ಇದೀಗ ಬಿಗ್ ಅಪ್‌ಡೇಟ್‌ ಒಂದು ಹೊರ ಬಿದ್ದಿದ್ದು, ವರದಿಗಳ ಪ್ರಕಾರ ಪ್ರಭಾಸ್‌ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ತಮ್ಮ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಪ್ರಭಾಸ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವೈದ್ಯರ ಸಲಹೆಯನ್ನು ಅನುಸರಿಸಿ, ಪ್ರಭಾಸ್‌ ತಮ್ಮ ಮುಂಬರುವ ಎಲ್ಲಾ ಚಿತ್ರಗಳ ಶೂಟಿಂಗ್‌ಗಳನ್ನು ಸ್ವಲ್ಪ ಸಮಯದವರೆಗೆ ಮುಂದೂಡಿದ್ದಾರೆ. ಚೇತರಿಕೆ ನಂತರ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಚ್ಚುಗೆ ಡೇಟ್‌ ಮಾಡೋಕೆ ಬಾಯ್‌ ಬೇಕಂತೆ..! ಯಾರಾದ್ರೂ ಪ್ರೀ ಇದೀರಾ

ಇನ್ನು ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಮುಂಬರುವ ಪೌರಾಣಿಕ ಚಲನಚಿತ್ರ ಆದಿಪುರುಷದಲ್ಲಿ ಪ್ರಭಾಸ್ ಕೃತಿ ಸನನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. 7,000 ವರ್ಷಗಳ ಹಿಂದೆ, ಲಂಕಾಧಿಪತಿ ರಾವಣನಿಂದ ಅಪಹರಣಕ್ಕೊಳಗಾದ ಪತ್ನಿ ಜಾನಕಿಯನ್ನು ರಕ್ಷಿಸಲು ಅಯೋಧ್ಯೆಯ ರಾಜ ರಾಘವ ಲಂಕೆಗೆ ಪ್ರಯಾಣಿಸುವ ಕಥೆಯೇ ಈ ಆದಿಪುರಷ. ಈ ಚಿತ್ರವನ್ನು ಓಂ ರೌತ್ ಬರೆದು ನಿರ್ದೇಶಿಸಿದ್ದಾರೆ. ಟಿ-ಸೀರೀಸ್ ಮತ್ತು ರೆಟ್ರೋಫಿಲ್ಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸಲಿದ್ದಾರೆ. 550 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ಆದಿಪುರುಷವನ್ನು ನಿರ್ಮಿಸಲಾಗಿದ್ದು, ಇದುವರೆಗಿನ ಅತ್ಯಂತ ದುಬಾರಿ ಭಾರತೀಯ ಚಿತ್ರಗಳಲ್ಲಿ ಇದು ಒಂದಾಗಿದೆ. ಚಿತ್ರವನ್ನು ಜೂನ್ 16 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಪ್ರಶಾಂತ್ ನೀಲ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ ʼಸಲಾರ್ʼ ನಲ್ಲಿಯೂ ಸಹ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News