Karnataka Assembly Election 2023: ಪ್ರಧಾನಿ ಮೋದಿಯವರು ವರ್ಚುವಲ್ ಸಭೆ ಮಾಡಿ 50 ಲಕ್ಷ ಜನರ ಜೊತೆ ಸಭೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಚುನಾವಣಾ ಆಯೋಗದ ನೀತಿ ಸಂಹಿತೆ ಏನು ಹೇಳುತ್ತದೆ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
Karnataka Assembly Election 2023: ಮುಸಲ್ಮಾನರಿಗೆ ನಮ್ಮ ಬಿಜೆಪಿ ಸರ್ಕಾರ ಮಿಸಲಾತಿ ರದ್ದುಪಡಿಸಲಾಯಿತು, ಆದರೆ ಕಾಂಗ್ರೆಸ್ ನವಋ ಮುಸ್ಲಿಂ ರ ಮಿಸಲಾತಿ ಮತ್ತೆ ಮರಳಿ ಕೊಡ್ತೆವೆ ಅಂತಿದ್ದಾರೆ. ಕಾಂಗ್ರೆಸ್ ನವರು ದಲಿತರಿಗಾಗಿ , ಬಡವರಿಗಾಗಿ ಏನು ಮಾಡಿದ್ದಾರೆ. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದಾರೆ ಅನ್ನೊದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ನಾವು ದುಡಿಯುತ್ತಿದ್ದೇವೆ ಎಂದರು.
ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್ ಶಾ ಎಂಟ್ರಿ. ರಾಹುಲ್ ಮತಬೇಟೆ ಬೆನ್ನಲ್ಲೇ ಅಮಿತ್ ಶಾ ಹಾನಗಲ್ ಪ್ರವಾಸ. ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ʻಶಾʼ ಕ್ಯಾಂಪೇನ್. ಬಿಜೆಪಿ ಭದ್ರಕೋಟೆ ಹಾನಗಲ್ ತಾಲೂಕಿನಲ್ಲಿ 'ಶಾ' ಮತಬೇಟೆ.
ಇಂದು ಧಾರವಾಡ ಜಿಲ್ಲೆಗೂ ಆಗಮಿಸಲಿರುವ ಬಿಜೆಪಿ ಚಾಣಕ್ಯ. ಧಾರವಾಡಕ್ಕೆ ಭೇಟಿ ನೀಡಲಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ. ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಿಗೆ ಅಮಿತ್ ಶಾ ಭೇಟಿ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಭರ್ಜರಿ ಪ್ರಚಾರ. ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಪರ ಮತಯಾಚನೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಪರ ರೋಡ್ ಶೋ ನಡೆಸುತ್ತಿರುವ ವೇಳೆ ಯುವಕನೊಬ್ಬ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೋಟೋ ಪ್ರದರ್ಶನ ಮಾಡುತ್ತಿದ್ದ. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಯುವಕನಿಂದ ಫೋಟೋಕಿತ್ತುಕೊಂಡ ಘಟನೆ ನಡೆಯಿತು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ನಗರದ ಟೆಂಡರ್ ಶೋರ್ ರಸ್ತೆಯಲ್ಲಿ ಸ್ಮೃತಿ ಇರಾನಿ ರೋಡ್ ಶೋ ನಡೆಸುದ್ದ ವೇಳೆ ಈ ಘಟನೆ ನಡೆದಿದೆ.
ಇದೊಂದು ದೊಡ್ಡ ಪಿತೂರಿಯಾಗಿದ್ದು, ಚುನಾವಣಾ ಆಯೋಗ ರಾಜ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಅಮಿತ್ ಶಾ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಚಾರವಾಗಿ ಎಐಸಿಸಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು,ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ರಾಜ್ಯದ ಉದ್ದಗಲಕ್ಕೆ ಸಂಚರಿಸಿ BJP ಸಂಘಟನೆ ಮಾಡಿದ್ದೆ. ಹುಡುಗನಿಗೆ ಹೇಳುವ ಹಾಗೆ ನನಗೆ ಪಕ್ಷ ಬಿಡುವಂತೆ ಹೇಳಿದ್ರು. ಕೆಲವೇ ಕೆಲವು ಜನರ ಹಿಡಿತದಲ್ಲಿ ಬಿಜೆಪಿ ಇದೆ ಎಂದು ಧಾರವಾಡದ ಕಾಂಗ್ರೆಸ್ ಸಮಾವೇಶದಲ್ಲಿ ಶೆಟ್ಟರ್ ಕಿಡಿಕಾರಿದ್ರು.
ತೇರದಾಳ ಕ್ಷೇತ್ರದಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.. ರಬಕವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಪ್ರಚಾರ ನಡೆಸಿದ್ದು ಈ ವೇಳೆ ʻಲಿಂಗಾಯತʼ ಅಸ್ತ್ರ ಪ್ರಯೋಗಿಸಿದ್ದಾರೆ..
ಜಗದೀಶ್ ಶೆಟ್ಟರ್ ಸೋಲಿಸಲು BSYಗೆ ಅಮಿತ್ ಶಾ ಟಾಸ್ಕ್. ಇಂದು ಶೆಟ್ಟರ್, ಸವದಿ ಕೋಟೆಯಲ್ಲಿ ರಾಜಾಹುಲಿ ಮತ ಶಿಕಾರಿ. ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಚಾರ. ಮಾಜಿ ಸಿಎಂ, ಮಾಜಿ ಡಿಸಿಎಂ ಸೋಲಿಸಲು ಪಣ ತೊಟ್ಟಿರುವ ಬಿಜೆಪಿ. ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿಎಸ್ವೈ ಮತಬೇಟೆ.
ಕರುನಾಡ ಕುರುಕ್ಷೇತ್ರದಲ್ಲಿ ಚುನಾವಣಾ ಚಾಣಕ್ಯನ ಪವರ್ ಶೋ. ಗುಂಡ್ಲುಪೇಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ. BJP ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಪರ ಅಮಿತ್ ಶಾ ಪ್ರಚಾರ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ. ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ ಚುನಾವಣಾ ಚಾಣಕ್ಯ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಶಾ ವಾಗ್ದಾಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.