ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮತ್ತೆ ಭೂಕಂಪ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನಲ್ಲಿ ಇಂದು ಬೆಳಿಗ್ಗೆ 5.57ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 215 ಕಿಮೀ ಇಎಸ್‌ಇ ದೂರದಲ್ಲಿ ಮುಂಜಾನೆ 5.57 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಕೊಲ್ಲಿಯಿಂದ 44 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS), ಭೂಕಂಪನದ ತೀವ್ರತೆ: 5.0,
ಕಾಲಮಾನ 05-07-2022 ರಂದು ಬೆಳಿಗ್ಗೆ 05:57:04 IST,
ಲ್ಯಾಟ್: 10.54 ಮತ್ತು ಉದ್ದ: 94.36, ಆಳ: 44 ಕಿಮೀ , ಸ್ಥಳ: 215 ಕಿಮೀ, ಪೋರ್ಟ್‌ಬ್ಲೇರ್ ಮತ್ತು ಇಎಸ್‌ಇ ಮತ್ತು ನಿಕೋಬಾರ್ ದ್ವೀಪ, ಭಾರತ." ಎಂದು ಮಾಹಿತಿ ನೀಡಿದೆ.
Earthquake of Magnitude:5.0, Occurred on 05-07-2022, 05:57:04 IST, Lat: 10.54 & Long: 94.36, Depth: 44 Km ,Location: 215km ESE of Portblair, Andaman and Nicobar island, India for more information download the BhooKamp App https://t.co/P8HHJnMyoV pic.twitter.com/BmVXOsYtb3
— National Center for Seismology (@NCS_Earthquake) July 5, 2022
ಇದನ್ನೂ ಓದಿ- Earthquake In Kodagu: ಕೊಡಗು ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ
ಗಮನಾರ್ಹವಾಗಿ ಇದಕ್ಕೂ ಮುನ್ನ ಸೋಮವಾರ (ಜುಲೈ 4) ಮಧ್ಯಾಹ್ನ 3.02 ನಿಮಿಷಗಳ ಸುಮಾರಿಗೆ ಪೋರ್ಟ್ ಬ್ಲೇರ್‌ನ ಆಗ್ನೇಯಕ್ಕೆ 256 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ರಷ್ಟು ದಾಖಲಾಗಿದೆ.
ಇದನ್ನೂ ಓದಿ- Earthquake in Afghanistan: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: 200ಕ್ಕೂ ಹೆಚ್ಚು ಸಾವು
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲೂ ಕಂಪಿಸಿದ ಭೂಮಿ:
ಸೋಮವಾರ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲೂ 3.2 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದ ದೋಡಾ ಜಿಲ್ಲೆಯಲ್ಲಿ ಮಧ್ಯಾಹ್ನ 12:12 ಕ್ಕೆ ಕಡಿಮೆ ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಭೂಕಂಪದ ಕೇಂದ್ರಬಿಂದು ಐದು ಕಿಲೋಮೀಟರ್ ಆಳದಲ್ಲಿದೆ. ಅದಾಗ್ಯೂ, ಪ್ರದೇಶದಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.