ಕಸ್ಟಮ್ ಡ್ಯೂಟಿ ಬಜೆಟ್ 2023: ಡೆಲಾಯ್ಟ್ ತನ್ನ ವರದಿಯೊಂದರಲ್ಲಿ ಚಾಲ್ತಿ ಖಾತೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಆಮದು ಬಿಲ್ ಅಪಾಯದ ಹೊರತಾಗಿ 2023-24ರಲ್ಲಿ ರಫ್ತಿನ ಮೇಲೆ ಹಣದುಬ್ಬರದ ಪರಿಣಾಮ ಸಾಧ್ಯತೆಯಿದೆ.
Budget 2023: ಬರುವ ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾತಾಮನ್ ವರ್ಷ 2023-24ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಿಂದ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ. ಇವೆಲ್ಲವುಗಳ ನಡುವೆ ಸರ್ಕಾರ ಈ ಬಾರಿ ಪಿಎಲ್ಐ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.
Kisan Credit Card: ಕೇಂದ್ರ ಬಜೆಟ್ಗೂ ಮೊದಲು ಕೇಂದ್ರ ಸರ್ಕಾರದಿಂದ ರೈತಾಪಿ ವರ್ಗಕ್ಕೆ ಭರ್ಜರಿ ಉಡುಗೊರೆ ಲಭಿಸಿದೆ. ರಾಷ್ಟ್ರದ ಬೆನ್ನೆಲುಬಾಗಿರುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ.
New Parliament Inside Photos: ನೂತನ ಸಂಸತ್ ಭವನದ ಸಭಾಂಗಣ ಸಿದ್ಧವಾಗಿದೆ. ಲೋಕಸಭೆಯ ಸಭಾಂಗಣದೊಳಗಿನ ಚಿತ್ರಗಳು ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಲೋಕಸಭೆಯು ಅತ್ಯಂತ ಭವ್ಯವಾಗಿ ಮತ್ತು ವಿಶಾಲವಾಗಿ ಕಾಣುತ್ತದೆ. ಮೂಲಗಳ ಪ್ರಕಾರ ಈ ವರ್ಷ ರಾಷ್ಟ್ರಪತಿಗಳ ಜಂಟಿ ಭಾಷಣವನ್ನು ಸಂಸತ್ತಿನ ಹೊಸ ಕಟ್ಟಡದಲ್ಲಿ ನಡೆಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸಂಸತ್ತಿನ ಹೊಸ ಸಭಾಂಗಣದಲ್ಲಿ ಈ ವರ್ಷದ ಬಜೆಟ್ ಅಧಿವೇಶನವನ್ನು ಸಹ ಮಂಡಿಸುವ ನಿರೀಕ್ಷೆಯಿದೆ.
NRI Budget Demand: ಪ್ರತಿ ವರ್ಷದಂತೆ ಯುಎಇಯಲ್ಲಿರುವ ಭಾರತೀಯ ವಲಸಿಗರು ಈ ಬಜೆಟ್ನಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ. ತೆರಿಗೆಗಳನ್ನು ಉಳಿತಾಯ ಮತ್ತು ಹಣ ಸಂಗ್ರಹಣೆಗೆ ಸಹಾಯವಾಗುವಂತಹ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
Budget 2023: ಎರಡು ಹಂತಗಳಲ್ಲಿ ನಡೆಯಲಿರುವ ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದೆ. ಅನುದಾನಕ್ಕೆ ಸಂಬಂಧಿಸಿದ ಅಂತಿಮ ಪೂರಕ ಬೇಡಿಕೆಗಳನ್ನು ಎರಡನೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಬೇಡಿಕೆಗಳ ಅಡಿಯಲ್ಲಿ ಒಳಗೊಂಡಿರುವ ಪ್ರಕರಣಗಳು ಮಂಜೂರು ಮಾಡಲಾದ ಭಾರತದ ಆಕಸ್ಮಿಕ ನಿಧಿಯಿಂದ ಮುಂಗಡಗಳನ್ನು ಒಳಗೊಂಡಿವೆ. ಇದಲ್ಲದೇ ನ್ಯಾಯಾಲಯದ ಆದೇಶದಡಿ ಬರುವ ಮೊತ್ತವೂ ಇದರ ಅಡಿಯಲ್ಲಿ ಬರಲಿದೆ.
7th Pay Commission DA Hike:ಕೇಂದ್ರ ನೌಕರರ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಮಾರ್ಚ್ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಘೋಷಿಸುವುದು ಕೂಡಾ ಬಹುತೇಕ ಖಚಿತ.
Budget 2023 Expectations : ಕೇಂದ್ರ ಬಜೆಟ್ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಒತ್ತಡದ ಬಗ್ಗೆ ತಿಳಿದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರು ಪ್ರಸ್ತುತ ಸರ್ಕಾರವು ಯಾವುದೇ ಹೊಸ ತೆರಿಗೆ ವಿಧಿಸಿಲ್ಲ ಎಂದು ಹೇಳಿದರು.
ಭಾರತದಲ್ಲಿ ಎರಡು ರೀತಿಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಲಾಗುತ್ತದೆ. ಒಂದು ಹಳೆಯ ತೆರಿಗೆ ಪದ್ಧತಿ ಮತ್ತೊಂದು ಹೊಸ ತೆರಿಗೆ ಪದ್ಧತಿ. ಈ ಎರಡೂ ವ್ಯವಸ್ಥೆಗಳಲ್ಲಿ, ವಿವಿಧ ಸ್ಲ್ಯಾಬ್ಗಳ ಪ್ರಕಾರ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ.
Income Tax Slab: ಈ ಬಾರಿ ಸರ್ಕಾರವು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.
GST Rate: ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹಕ ಯೋಜನೆಯ ಅಡಿ ಸರ್ಕಾರ ಬ್ಯಾಂಕುಗಳಿಗೆ ರುಪೇ ಡೆಬಿಟ್ ಕಾರ್ಡ್ ವ್ಯವಹಾರ ಶುಲ್ಕ ಹಾಗೂ 2000 ರೂ.ಗಳವರೆಗಿನ ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ ಪ್ರತಿಶತ ರೂಪದಲ್ಲಿ ಉತ್ತೇಜನ ಮೊತ್ತವನ್ನು ನೀಡುತ್ತದೆ.
FM Nirmala Sitharaman on Income Tax: ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷದ ಆಯವ್ಯಯ ಪತ್ರ ಮಂಡನೆಯಾಗಲಿದೆ. ಹೀಗಿರುವಾಗ 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ಜನರು ಆದಾಯ ತೆರಿಗೆ ಹೇಗೆ ಉಳಿತಾಯ ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಧಾನವನ್ನು ಅನುಸರಿಸಿ ನೀವು 8 ಲಕ್ಷ ರೂ.ಗಳವರೆಗಿನ ಆದಾಯದ ಮೇಲೂ ಕೂಡ ತೆರಿಗೆ ಉಳಿತಾಯ ಮಾಡಬಹುದು.
Income tax exemption: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳು ಈಗಾಗಲೇ ತಮ್ಮ ಸಲಹೆಗಳು ಮತ್ತು ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿವೆ. ಟಿಪಿಎಫ್ನಿಂದ ಅಂತಹ ಒಂದು ಬೇಡಿಕೆ ಬಂದಿದೆ.
FM Nirmala Sitharaman on Income Tax Deduction: ಆದಾಯ ತೆರಿಗೆ ಪಾವತಿಸುವವರ ಪಾಲಿಗೆ ಭರ್ಜರಿ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ತೆರಿಗೆ ಪಾವತಿದಾರರಾಗಿದ್ದರೆ, ಇದೀಗ ನೀವು ಭಾರಿ ಲಾಭವನ್ನು ಪಡೆಯಲಿರುವಿರಿ. ನಿಮ್ಮ ಸಂಬಳ ರೂ 10.5 ಲಕ್ಷವಾಗಿದ್ದರೂ ಕೂಡ ಈ ಸಂಬಳದ ಮೇಲೆ ನೀವು ಶೇ.100 ರಷ್ಟು ತೆರಿಗೆ ಉಳಿತಾಯವನ್ನು ಮಾಡಬಹುದು.
Expectations From Union Budget 2023: ಬಜೆಟ್ ಮಂಡನೆಗೆ ಕೆಲವೇ ದಿನಗಳು ಉಳಿದಿವೆ. ಕೇಂದ್ರ ಸರ್ಕಾರದಿಂದ ಈ ಬಾರಿಯ ಬಜೆಟ್ಗೆ ಸಿದ್ಧತೆಗಳು ನಡೆಯುತ್ತಿವೆ. ಈ ಬಜೆಟ್ ನಲ್ಲಿ ಅನೇಕ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಇದೆ.
Good news for Income Tax payers : ನೀವು ಆದಾಯ ತೆರಿಗೆ ಪಾವತಿಸುವವರಾಗಿದ್ದರೆ, ಈ ಬಜೆಟ್ನಲ್ಲಿ ನಿಮಗೆ ಉತ್ತಮ ಸುದ್ದಿ ಸಿಗಲಿದೆ. ವಿಶೇಷವೆಂದರೆ ಈ ಬಜೆಟ್ನಲ್ಲಿ ನಿಮಗೆ ಒಂದಲ್ಲ ಮೂರು ಒಳ್ಳೆಯ ಸುದ್ದಿಗಳು ಬರಲಿವೆ. ಮೂಲ ತೆರಿಗೆ ಮಿತಿಯನ್ನು ಹೆಚ್ಚಿಸುವುದರ ಹೊರತಾಗಿ, ಹಣಕಾಸು ಸಚಿವರು ಅನೇಕ ದೊಡ್ಡ ಘೋಷಣೆಗಳನ್ನು ಮಾಡಬಹುದು.
PM Kisan Samman Nidhi:ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ರೈತರ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಬಜೆಟ್ ನಲ್ಲಿ ಘೋಷಿಸಬಹುದು ಎನ್ನಲಾಗಿದೆ.
Standard Deduction Relief:ಕರೋನಾ ನಂತರ ಹೆಚ್ಚುತ್ತಿರುವ ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವರು ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದೇ ನಿರೀಕ್ಷಿಸಲಾಗಿದೆ.
Bengaluru Chennai Express way : ಬಜೆಟ್ಗೂ ಮುನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಮೂಲಕ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.