ಪತ್ನಿಗೆ ಮಂಜುನಾಥ್ ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದ ಜೊತೆಗೆ ದೌರ್ಜನ್ಯ ಪ್ರಕರಣದ ಆರೋಪಿಯೂ ಆಗಿದ್ದು ಹಿಂಸೆ ತಾಳಲಾರದೇ ಮಹಿಳೆ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.
ದಾಸನಪುರ, ಅಣಗಳ್ಳಿ, ಹಂಪಾಪುರ, ಮುಳ್ಳೂರು ಹರಳೆ ಗ್ರಾಮ. ಕಾವೇರಿ ನದಿಯ ರಭಸಕ್ಕೆ ವೆಸ್ಲಿ ಸೇತುವೆಯ ಭಾಗ ನೀರು ಪಾಲು.ಕೊಳ್ಳೇಗಾಲದ ಶಿವನ ಸಮುದ್ರದಲ್ಲಿರುವ ಐತಿಹಾಸಿಕ ವೆಸ್ಲಿ ಸೇತುವೆ.ಕಾಳಜಿ ಕೇಂದ್ರಗಳಲ್ಲಿ 600ಕ್ಕೂ ಅಧಿಕ ಪ್ರವಾಹ ಪೀಡಿತರಿಗೆ ಆಶ್ರಯ.
ಕೆಆರ್ಎಸ್ ಡ್ಯಾಂ (KRS Dam) ನಿಂದ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ಕಾವೇರಿ ನೀರಾವರಿ ನಿಗಮದಿಂದ, ಕಾವೇರಿ ನದಿಯಲ್ಲಿ ಭಾರೀ ಪ್ರವಾಹದ ಬಗ್ಗೆ ತುರ್ತು ಸಂದೇಶ ರವಾನಿಸಿದೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಇಂದು ಸರ್ವಪಕ್ಷ ನಾಯಕರ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ
ಕಾಂಗ್ರೆಸ್ಸಿಗರಿಗೆ ಮಾನ ಮಾರ್ಯಾದೆ ಇದ್ರೆ ಕಾವೇರಿ ನೀರು ನಿಲ್ಲಿಸಲಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಡಾ. ಇಂದ್ರೇಶ್ ವಾಗ್ದಾಳಿ
ಬೆಂಗಳೂರಿಗೆ ಕುಡಿಯುವ ಸಲುವಾಗಿ ನೀರು ಅಂತ ಸುಳ್ಳು ಹೇಳ್ತಿದ್ದಾರೆ
ಸ್ಟಾಲಿನ್ ಓಲೈಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗ್ತಿದೆ
ಕನ್ನಡಿಗರೂ ಮನುಷ್ಯರು, ಅವರಿಗೂ ಅನ್ನ ನೀರು ಬೇಕು. ಅವರೂ ಈ ಒಕ್ಕೂಟ ವ್ಯವಸ್ಥೆಯ ಭಾಗ ಎನ್ನುವುದನ್ನು ಸಮಿತಿ ಮರೆತಿರುವಂತಿದೆ. ಸರಕಾರದಿಂದ ಕಾವೇರಿ ಹಿತರಕ್ಷಣೆ ಸಾಧ್ಯವಿಲ್ಲ. ಈ ಆದೇಶವನ್ನು ದಿಕ್ಕರಿಸುವ ಎದೆಗಾರಿಕೆ ಸರಕಾರಕ್ಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ವಿಚಾರ. ಬೆಂಗಳೂರಿನ ಕೆಲವು ಏರಿಯಾದಲ್ಲಿ ಪೊಲೀಸರು ಅಲರ್ಟ್. ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಸೂಚನೆ. ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ್ ಸೂಚನೆ. ಪಶ್ಚಿಮ, ಪೂರ್ವ, ಉತ್ತರ ದಕ್ಷಿಣ, ವೈಟ್ ಫೀಲ್ಡ್ ಸೇರಿ ಎಲ್ಲಾ ಡಿಸಿಪಿಗಳಿಗೆ ಭದ್ರತೆ ನೀಡುವಂತೆ ಕಮಿಷನರ್ ಸೂಚನೆ.
ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜೇಶ್ವರ ದೇಗುಲ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ಸರಕಾರ ತೀರ್ಮಾನಿಸಿದೆ. ಇಲ್ಲಿ ನಾವೆಲ್ಲ್ರರೂ ಒಂದು ಎಂದು ಸಚಿವ ಎಂ ಬಿ ಪಾಟೀಲ ಅವರು ತಿಳಿಸಿದ್ದಾರೆ.
"ಪ್ರತಿನಿತ್ಯ 10,000 ಕಿಸೆಕ್ಸ್ ನಂತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕಾವೇರಿ ನದಿಯಲ್ಲಿ ಪ್ರವಾಸಿಗರು ಅಪಾಯ ಲೆಕ್ಕಿಸದೇ ಮೋಜು ಮಸ್ತಿ ಮಾಡ್ತಿದ್ದಾರೆ. ಕೊಳ್ಳೇಗಾಲ ತಾ. ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ನಿರ್ಬಂಧವಿದ್ದರೂ ಲೆಕ್ಕಿಸದ ಪ್ರವಾಸಿಗರು ನೀರಿಗಿಳಿಯುತ್ತಿದ್ದಾರೆ. ಯುವಕರು ಮದ್ಯಪಾನ ಮಾಡಿ ನೀರಿನಲ್ಲಿ ಈಜುತ್ತಿದ್ದಾರೆ.
ಮಳೆಯ ಆರ್ಭಟಕ್ಕೆ ಎರಡು ವರ್ಷಗಳ ಹಿಂದೆಯೇ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಉಳಿದ ಭಾಗದ ಮೇಲಿನ ಓಡಾಟಕ್ಕೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದ ನೂರಾರು ಪ್ರವಾಸಿಗರು ನಿತ್ಯ ಇಲ್ಲಿ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಕಾವೇರಿ ನದಿ ಪ್ರವಾಹ ಹಿನ್ನಲೆಯಲ್ಲಿ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ದೇಗುಲದ ಬಳಿ ಸ್ನಾನಘಟ್ಟ ಸೇರಿ ಸ್ನಾನ ಗೃಹ ಜಲಾವೃತವಾಗಿದೆ. ಈ ಹಿನ್ನಲೆಯಲ್ಲಿ ಕಾವೇರಿ ನದಿ ದಂಡೆಯ ಬಳಿ ದೇಗುಲದ ಬಳಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.
ಇದಲ್ಲದೆ, ಕಳೆದ ಮೂರ ದಿನಗಳಿಂದ ಬೆಳಗಾವಿಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ನಿರಂತರ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀರಂಗಪಟ್ಟಣದ ಮಹದೇಪುರ ಗ್ರಾಮದ ಸ್ಮಶಾನದ ರಸ್ತೆ ಕಾವೇರಿ ಪ್ರವಾಹದಿಂದ ಬಂದ್ ಆಗಿದೆ.
ಹಾಲಿನ ನೊರೆಯಂತೆ ಧುಮ್ಮುಕ್ಕುತ್ತಿರುವ ಭರಚುಕ್ಕಿ ವೈಭವ ರುದ್ರ ರಮಣೀಯವಾಗಿದ್ದು ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮಳೆಯ ನಡುವೆಯೂ ಬರುತ್ತಿದ್ದಾರೆ. ಇನ್ನು, ಕರ್ನಾಟಕದ ಗಡಿಯಲ್ಲಿರುವ ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತ ಭೋರ್ಗರೆದು ಧುಮ್ಮಿಕುತ್ತಿದ್ದು ಅಪರೂಪದ ದೃಶ್ಯ ಕಾವ್ಯವೇ ರೂಪುಗೊಂಡಿದೆ. ಸದ್ಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು ಕಳೆದ ಬಾರಿಯಂತೆ ಹೆಚ್ಚು ನೀಡು ಉಕ್ಕಿ ಬಂದರೆ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.
ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.