ಟರ್ಕಿ ಭೂಕಂಪ: ಫೆಬ್ರವರಿ 6ರಂದು ಸಂಭವಿಸಿದ ಭೂಕಂಪದ ನಂತರ ಟರ್ಕಿಯಲ್ಲಿ ಅನೇಕ ಪವಾಡಗಳು ನಡೆಯತ್ತಿವೆ. ಭೂಕಂಪ ಸಂಭವಿಸಿ 13 ದಿನಗಳ ಬಳಿಕ ಅವಶೇಷಗಳಡಿ ಹೂತುಹೋಗಿದ್ದ ಪತಿ-ಪತ್ನಿಯನ್ನು ಜೀವಂತವಾಗಿ ಹೊರತೆಗೆಯಲಾಗಿದೆ.
Turkey Earthquake 2023 Latest News: ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ, ಟರ್ಕಿಯ ಜನರಲ್ಲಿ ಮತ್ತೆ ಭಯ ಆವರಿಸಿದೆ. ಜನರು ತಮ್ಮ ಮನೆಗಳನ್ನು ತೊರೆದು ಬಯಲಿನತ್ತ ಓಡಲಾರಂಭಿಸಿದ್ದಾರೆ. ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಮತ್ತೆ ನಡುಗಲಾರಂಭಿಸಿವೆ.
Turkey-Syria Earthquake: ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಆ ಬಳಿಕ ನಡೆದ ಆಘಾತಗಳಿಂದ ಸಿರಿಯಾ ಮತ್ತು ಟರ್ಕಿ ನಲುಗಿ ಹೋಗಿವೆ. ಈಗಾಗಲೇ ಸಾವಿನ ಸಂಖ್ಯೆ 17,500 ದಾಟಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವಲ್ಲಿ ಶ್ರಮವಹಿಸುತ್ತಿದೆ. ಈ ಕ್ರೂರ ದಿನಗಳನ್ನು “ಸಮಯದ ವಿರುದ್ಧ ಓಟ” ಎಂದು ಹೇಳಿದೆ.
Turkey-Syria Earthquake: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಇದುವರೆಗೆ 17,500 ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಸಾವಿನ ಸಂಖ್ಯೆ 18000ಕ್ಕೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Turkey earth quake : ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕೆ 16,000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸತತ ರಕ್ಷಣಾ ಕಾರ್ಯದ ನಂತರ ಇದೀಗ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಿವೆ ಎನ್ನಲಾಗಿದೆ.
ಟರ್ಕಿ, ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ. ಭೂಕಂಪದಲ್ಲಿ ಇಲ್ಲಿಯವರೆಗೆ 7800 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆದರೆ ಭಾರೀ ಹಿಮ ಮತ್ತು ಮಳೆಯು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ನಿಂತಿದೆ. ಕಟ್ಟಡಗಳ ನಡುವೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಭೂಕಂಪ ಟರ್ಕಿ ದೇಶ ಕಂಡ ಅತಿ ದೊಡ್ಡ ಭೂಕಂಪವಾಗಿದೆ.
ಮತ್ತೊಂದು ಪ್ರಬಲ ಭೂಕಂಪ ಸೋಮವಾರ (ಫೆಬ್ರವರಿ 6, 2023) ಟರ್ಕಿಯಲ್ಲಿ ಸಂಭವಿಸಿದೆ, ಇದು ಕಳೆದ ಒಂಬತ್ತು ಗಂಟೆಗಳಲ್ಲಿ ಮೂರನೇ ಬಾರಿ ವರದಿಯಾಗಿದೆ.ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, 7.5 ತೀವ್ರತೆಯ ಭೂಕಂಪವು ಟರ್ಕಿಯ ಕಹ್ರಮನ್ಮಾರಾಸ್ ಪ್ರಾಂತ್ಯದ ಎಕಿನೋಝು ಬಳಿ ಸಂಭವಿಸಿದೆ.
Earthquake In Turkey: ಟರ್ಕಿಯಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 04:17ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
Earthquake: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪೂರ್ವ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಳ್ಳಿಯ ಕಟ್ಟಡಗಳು ಹಾನಿಗೊಳಗಾಗಿವೆ. ಇದಲ್ಲದೆ, ಉತ್ತರ ಆಸ್ಟ್ರೇಲಿಯಾದಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ ಎಂದು ವರದಿಯಾಗಿದೆ.
Delhi-NCR Earthquake: ದೆಹಲಿ NCRನಲ್ಲಿ ಭೂಕಂಪದ ಕಂಪನದೊಂದಿಗೆ ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ವರ್ಷ ಬರುತ್ತಿದ್ದಂತೆಯೇ ಭೂಮಿ ಕಂಪಿಸಿದ್ದು, ಸಂಭ್ರಮದಲ್ಲಿ ಮೈಮರೆತಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಇದರ ತೀವ್ರತೆ ಕಡಿಮೆಯಿದ್ದ ಕಾರಣ ಅನೇಕರಿಗೆ ಭೂಕಂಪನದ ಅನುಭವವಾಗಿಲ್ಲವಂತೆ.
Earthquake in Delhi: ಕಳೆದ ಕೆಲವು ದಿನಗಳಲ್ಲಿ ದೆಹಲಿ ಎನ್ಸಿಆರ್ನಲ್ಲಿ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ದೆಹಲಿಯ ಜನವಸತಿ ಮತ್ತು ಅದರ ಭೌಗೋಳಿಕ ಸ್ಥಳವು ಇಲ್ಲಿ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಿದ್ದರೂ ದೊಡ್ಡ ವಿನಾಶದ ಅನುಭವವನ್ನು ನೀಡಬಹುದು.
Earthquake in Solomon Islands: ಮಂಗಳವಾರ (ನವೆಂಬರ್ 22) ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Earthquake In Indonesia: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. 5.4 ತೀವ್ರತೆಯ ಭೂಕಂಪವು ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 10 ಕಿಲೋಮೀಟರ್ (6.2 ಮೈಲುಗಳು) ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.