ಗುಜರಾತ್ನಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು. ಇತಿಹಾಸದದಲ್ಲಿ ಮೊದಲ ಬಾರಿಗೆ ಭಾರೀ ಸ್ಥಾನಗಳಿಂದ ಗೆಲುವು. ಈ ಬಾರಿ 155 ಸ್ಥಾನಗಳಲ್ಲಿ ಭಾರೀ ಮುನ್ನಡೆ ಸಾಧಿಸಿದ ಬಿಜೆಪಿ. 2002ರ ತನ್ನದೇ ದಾಖಲೆ ಪುಡಿ ಮಾಡಲಿರುವ ಬಿಜೆಪಿ.
ಹಿಮಾಚಲದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್. ಮ್ಯಾಜಿಕ್ ನಂಬರ್ 35 ದಾಟಿದ ಕಾಂಗ್ರೆಸ್ ಭರ್ಜರಿ ಗೆಲುವು. ಕಾಂಗ್ರೆಸ್ -37, ಬಿಜೆಪಿ -28, ಪಕ್ಷೇತರರು -3ರಲ್ಲಿ ಮುನ್ನಡೆ . ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿಗೆ ಸೋಲಿನ ಕಹಿ.
Election Result 2022 : ಗುಜರಾತ್ ನಲ್ಲಿ ಬಿಜೆಪಿಗೆ ಸತತ ಏಳನೇ ಬಾರಿಗೆ ಭರ್ಜರಿ ಬಹುಮತದ ಮೂಲಕ ಅಧಿಕಾರಕ್ಕೆ ಏರಲು ಮುಂದಾಗಿದೆ. ಆದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ವಿಜಯ ರಥವನ್ನು ನಿಲ್ಲಿಸುವ ಮೂಲಕ ಗುಜರಾತ್ನ ಹೀನಾಯ ಸೋಲಿನ ಅನುಭವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. 33 ಜಿಲ್ಲೆಗಳ 182 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಇಂದು ಬಹು ನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ಪ್ರತಿನಿಧಿಗಳ ಭವಿಷ್ಯ ಬಯಲಾಗಲಿದೆ. ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಬಿಜೆಪಿ 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಭೇರಿ ಬಾರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.