ಯವಕನಿಂದ ಚಾಕು ಇರಿತ ಎಂಟಕ್ಕೂ ಹೆಚ್ಚು ಜನ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾ ನಗರ (ತಡಸ ತಾಂಡಾ)ದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆ ಆವರಣದಲ್ಲಿ ಶಿಗ್ಗಾಂವಿ ವೃತ್ತದ ರೌಡಿಗಳ ಪರೇಡ್ ನಡೆದಿದೆ.. ಈ ವೇಳೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತೆಪ್ಪಗಿದ್ರೆ ಸರಿ, ಬಾಲ ಬಿಚ್ಚಿದ್ರೆ ಹುಷಾರ್ ಎಂದು ರೌಡಿಗಳಿಗೆ ಎಸ್ಪಿ ವಾರ್ನಿಂಗ್ ಕೊಟ್ಟಿದ್ದಾರೆ..
ಸಿಎಂ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಪಂಚರತ್ನ ಯಾತ್ರೆ. ರಾಣೆಬೆನ್ನೂರು ತಾ. ಹಲಗೇರಿಯಿಂದ ಮೆಡ್ಲೇರಿವರೆಗೂ ಯಾತ್ರೆ. ಚುನಾವಣೆ ಬಂದಾಗ ಐಟಿ ರೇಡ್ ನಡೆಸುವುದು ಬಿಜೆಪಿ ಪ್ಲ್ಯಾನ್. ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ರೇಡ್ ಆಗ್ತಾವೆ ಎಂದ ಕುಮಾರಸ್ವಾಮಿ.
ಹಾವೇರಿಯಲ್ಲಿಂದು ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ.. ರಾಣೇಬೆನ್ನೂರು ತಾಲೂಕಿನ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ರಥಯಾತ್ರೆ ನಡೆಯಲಿದೆ.
30ಕ್ಕೆ ಬೆಂಗಳೂರಿನಿಂದ ಹಾವೇರಿಗೆ ಪ್ರಯಾಣ. 12:00ಕ್ಕೆ ಬ್ಯಾಡಗಿ ತಾಲೂಕಿನಲ್ಲಿ ಉದ್ಘಾಟನಾ ಕಾರ್ಯಕ್ರಮ. ಶಿಡೇನೂರ ಶ್ರೀ ಮುಕ್ತೇಶ್ವರ ದೇವಸ್ಥಾನ ಕಾರ್ಯಕ್ರಮದಲ್ಲಿ ಭಾಗಿ. ಬಳಿಕ ಮಧ್ಯಾಹ್ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ. ಮಧ್ಯಾಹ್ನ 3 ಗಂಟೆಗೆ ಶಿಡೇನೂರಯಿಂದ ತಂಗಡಗಿಯತ್ತ ಪ್ರಯಾಣ.
Dr.HD Lamani Passed Away: ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮುಖ್ಯಮಂತ್ರಿ ಬಸವರಾಜ ಇಂದು ಹಾವೇರಿ ಜಿಲ್ಲಾ ಪ್ರವಾಸ. ಚೌಡಯ್ಯ ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಬೊಮ್ಮಾಯಿ ಭಾಗಿ. ಅಂಬಿಗರ ಚೌಡಯ್ಯನವರ ಗುರುಪೀಠ ವತಿಯಿಂದ ಆಯೋಜನೆ. ಮಧ್ಯಾಹ್ನದ ಬಳಿಕ ಹಾವೇರಿಗೆ ಬರಲಿಸರುವ ಬೊಮ್ಮಾಯಿ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ನಿವಾಸದ ಮುಂದೆ ಬೃಹತ್ ಪ್ರತಿಭಟನೆ. ಹಾವೇರಿಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುಂದೆ ಧರಣಿ. ಇಂದು ಸರ್ಕಾರಕ್ಕೆ ನಿರ್ಣಯ ತಿಳಿಸಲಿರುವ ಪಂಚಮಸಾಲಿ ಸಮಾಜ.
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ತಿಳಿದು ಇಡೀ ಗ್ರಾಮದ ಜನತೆಯೇ ಬಿಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದರಿಂದ ಶಾಕ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೋಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪೊಲೀಸ್ ಠಾಣೆ ಸಿಪಿಐ ರವಿ ಉಕ್ಕುಂದ ಅಂತ್ಯಕ್ರಿಯೆ ನಿನ್ನೆ ಅವರ ಹುಟ್ಟೂರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿ ನಡೆಯಿತು. ರವಿ ಸುಮಾರು 6 ವರ್ಷಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸಿ ಪ್ರಸ್ತುತ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯ ಸಿಪಿಐ ಆಗಿ ರವಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೆಲವು ಶಿಕ್ಷಕರೇ ಹಾಗೆ ತಮ್ಮ ಕಲಿಕೆಯಿಂದ ಮಕ್ಕಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ, ಅಂತಹ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ಸ್ವತಃ ವಿದ್ಯಾರ್ಥಿಗಳೇ ಮುಂದೆ ನಿಂತು ಮತ್ತೆ ಆ ಶಿಕ್ಷಕರನ್ನು ತಮ್ಮ ಶಾಲೆಗೇ ಕರೆಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ರಾಜ್ಯದೆಲ್ಲೆಡೆ ಮತ್ತೆ ಮಳೆ ಅಬ್ಬರಿಸಿದೆ. ಹಾವೇರಿ ಗ್ರಾಮೀಣ ಭಾಗದ ಜನರು ಮಳೆಯಿಂದ ನಲುಗಿ ಹೋಗಿದ್ದಾರೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ ಹೊರಬರದೇ ಜನ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಅಧಿಕಾರಿಗಳ ವಿರುದ್ದ ಜನತೆಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ತವರು ಜಿಲ್ಲೆ ಹಾವೇರಿಗೆ ಆಗಮಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಯಾರಾದರೂ ಹೊಗಳಿದರೆ ಹೆದರುತ್ತೇನೆ. ತೆಗಳಿದರೆ, ಟೀಕೆ ಮಾಡಿದರೆ ನನ್ನ ಕೆಲಸದ ಮೂಲಕ ಉತ್ತರ ಕೊಡುತ್ತೇನೆ ಎಂದರು.
6 ತಿಂಗಳು ಅವಕಾಶ ಮಾಡಿಕೊಡಿ, ಆಯೋಗದವರು
ಹಾವೇರಿ ಜಿಲ್ಲೆಯಲ್ಲಿ ಅದ್ಯಯನ ಮಾಡ್ತಿದ್ದಾರೆ ಎಂದು ಸಿಎಂ ಕೇಳಿಕೊಂಡರು. ಆದರೆ 6 ತಿಂಗಳು ಆಗಲ್ಲ, 2 ತಿಂಗಳು ಕಾಲಾವಕಾಶ ಕೊಡ್ತೀವಿ ಎಂದು ಒಪ್ಪಿಕೊಂಡೆವು. ಸಿಎಂ ಮನವಿ ಮೇರೆಗೆ ನಾವು ಸತ್ಯಾಗ್ರಹ 2 ತಿಂಗಳು ಮುಂದೂಡಿದೆವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.