ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
Singer Shaan Trolled: ಬಾಲಿವುಡ್ನ ಖ್ಯಾತ ಗಾಯಕ ಶಾನ್ ಈದ್ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಶಾನ್ ಅವರ ಈ ಪೋಸ್ಟ್ಗೆ, ಅವರ ಹಲವಾರು ಅಭಿಮಾನಿಗಳು ಆಕ್ರೋಶಗೊಂಡಿದ್ದು, ನಿನೆಂಥಾ ಹಿಂದೂ? ಎಂದು ಪ್ರಶ್ನಿಸಲು ಆರಂಭಿಸಿದ್ದಾರೆ. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುವ ವಿಡಿಯೋವನ್ನು ಗಾಯಕ ಪೋಸ್ಟ್ ಮಾಡಿದ್ದಾರೆ.
ಸುಮಾರು 150 ವರ್ಷಗಳಿಂದ ಈ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿದಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ರಾಮದುರ್ಗ ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದಾರೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿರುವ ಬಸವೇಶ್ವರ ಮೂರ್ತಿಗೆ ಯುವಕನೊಬ್ಬ ಅಪಮಾನ ಮಾಡಿದ್ದಾನೆ. ಅನ್ಯ ಧರ್ಮದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಬಸವೇಶ್ವರ ಪ್ರತಿಮೆಯ ಮುಖಕ್ಕೆ ಬಟ್ಟೆ ಮುಚ್ಚಿದ್ದಾನೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ತಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್ಆರ್ಪಿ ಎಂಬ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ವಿಜಯಪುರದ ಗೋಲಗುಮ್ಮಟಕ್ಕೆ ಭೇಟಿ ನೀಡಿದ್ದ ವೇಳೆ ʼಕಟ್ಟಿದೆವು ಕಟ್ಟಿದೆವು, ರಾಮ ಮಂದಿರ ಕಟ್ಟಿದೆವು. ಜೈ ಶ್ರೀರಾಮ ಜೈ ಶ್ರೀರಾಮ" ಎಂದು ಘೋಷಣೆ ಕೂಗಿದ್ದಾರೆ.
ಪ್ರತಿ ವರ್ಷ ರಾಖಿ ಕಟ್ಟುವ ಮೂಲಕ ಸಹೋದರನಾಗಿ ಪ್ರೀತಿ ಬಾಂಧವ್ಯದಿಂದ ಇದ್ದ ಸಂದೀಪ್ ಗಿರಿ ಗೋಸ್ವಾಮಿ ಅವರ ಮಗಳ ಮದುವೆಗೆ ಮುಸ್ಲಿಂ ವ್ಯಕ್ತಿ ಡಿ.ಎನ್. ಮಲಿಕ್ ಬಟ್ಟೆ, ಆಭರಣ ಮತ್ತು ಹಣವನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.