Indian Railways: ಭಾರತೀಯ ರೈಲು ಇಲಾಖೆ ಹಿರಿಯ ನಾಗರಿಕರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿರುವಾಗ ಇದೀಗ ಟಿಕೆಟ್ ಬುಕಿಂಗ್ ಮಾಡುವಾಗ ನಿಮಗೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Indian Railways Update: ರೈಲುಗಳಲ್ಲಿ ಕಾಯ್ದಿರಿಸದ ಕೋಚ್ಗಳನ್ನು ಮರುಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದ ನಂತರ, ಇದೀಗ ರೈಲುಗಳಲ್ಲಿ ಹಾಸಿಗೆ-ಹೊದಿಕೆಗಳ ಸೌಲಭ್ಯವನ್ನು ಮತ್ತೆ ಆರಂಭಿಸಲಾಗುವುದು ಎಂದು ಇಲಾಖೆ ಘೋಷಿಸಿದೆ. ಈ ಸಂಬಂಧ ರೈಲ್ವೆ ಮಂಡಳಿಯಿಂದ ಎಲ್ಲ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಲಾಗಿದೆ.
Indian Railways Rule: ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೇಯು ಬರ್ತ್ಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಮಾಡಿದೆ. ಪ್ರಯಾಣಿಸುವ ಮೊದಲು, ಈ ನಿಯಮಗಳ ಬಗ್ಗೆ ತಿಳಿದಿರುವುದು ಮತ್ತು ಅವುಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.
Indian Railway Confirm Ticket App: ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಭಾರತೀಯ ರೈಲ್ವೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ಬಳಸಿಕೊಂಡು, ಪ್ರಯಾಣಿಕರು ಎಲ್ಲಿ ಬೇಕಾದರೂ ತಕ್ಷಣವೇ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಈ ಸೇವೆಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.
IRCTC BoB RuPay ಕಾಂಟಾಕ್ಟ್ ಲೆಸ್ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಭಾರತೀಯ ರೈಲ್ವೆಯಲ್ಲಿ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು IRCTC ಅಧಿಕಾರಿಗಳು ತಿಳಿಸಿದ್ದಾರೆ.
Indian Railways: ನೀವೂ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ಖಂಡಿತವಾಗಿಯೂ ನಿಮಗೆ ಸಮಾಧಾನ ನೀಡಲಿದೆ. ಭಾರತೀಯ ರೈಲ್ವೆಯ ನಿರ್ಧಾರದ ಪ್ರಕಾರ, IRCTC ಇಂದಿನಿಂದ ಪ್ರಯಾಣದ ಸಮಯದಲ್ಲಿ ಎಲ್ಲಾ ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಆಹಾರವನ್ನು ನೀಡಲು ಪ್ರಾರಂಭಿಸಿದೆ.
ಪ್ರಯಾಣಿಕರು ಆಹಾರ ಸೇವಿಸಿದ ಮೇಲೆ ಅದರ ಪ್ಯಾಕೆಟ್ ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಮಾಡಿದರೆ ರೈಲ್ವೆ ಕ್ರಮ ಕೈಗೊಳ್ಳಲಿದೆ.
Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಷ 2022-23ರ ಸಾಮಾನ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ತಮ್ಮ ಬಜೆಟ್ ಭಾಷಣದಲ್ಲಿ ರೈಲ್ವೆ ಇಲಾಖೆಗೆ (Indian Railways) ಬಹುದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ಕುರಿತು ಘೋಷಣೆ ಮಾಡಿರುವ ಅವರು ಮುಂದಿನ 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳನ್ನು (Vande Bharat Trains) ಓಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ, ಅಂತಹ ಸಮಯಕ್ಕೆ, ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳ ಆಯ್ಕೆ ಮಾತ್ರ ಇತ್ತು. ಆದರೆ ಅದರಲ್ಲಿಯೂ ಟಿಕೆಟ್ ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೈಲ್ವೆಯು ನಿಮಗೆ ಅಂತಹ ಸೌಲಭ್ಯವನ್ನು ನೀಡುತ್ತಿದೆ, ಅದರ ಅಡಿಯಲ್ಲಿ ನೀವು ಈಗ ರಿಸರ್ವೇಶನ್ ಇಲ್ಲದೆ ಪ್ರಯಾಣಿಸಬಹುದು.
Train Night Travel Rules Changed - ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಗಾಗ ಪಕ್ಕದ ಪ್ರಯಾಣಿಕರಿಂದ ಆಗುವ ತೊಂದರೆಗಳ ಕುರಿತು ದೂರು ನೀಡುತ್ತಾರೆ. ಪಕ್ಕದ ಸೀಟ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೊಬೈಲ್ ನಲ್ಲಿ ಜೋರು ಧ್ವನಿಯಲ್ಲಿ ಮಾತನಾಡುವುದು ಹಾಗೂ ಎತ್ತರದ ದ್ವನಿಯಲ್ಲಿ ಹಾಡು ಕೇಳುವುದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಅವರು ದೂರು ನೀಡುತ್ತಾರೆ. ಈ ರೀತಿಯ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲು ಇಲಾಖೆ ಹೊಸ ನಿಯಮ ಜಾರಿಗೊಳಿಸಿದೆ.
Indian Railways: ರೈಲ್ವೆ ಪ್ರಯಾಣಿಕರಿಗೆ ಬಹಳ ಮುಖ್ಯವಾದ ಸುದ್ದಿ. ಈಗ ನಿಮ್ಮ ಪ್ರಯಾಣವು ಇನ್ನಷ್ಟು ಸುಲಭವಾಗಲಿದೆ. ಏಕೆಂದರೆ ಈಗ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಭಾರವಾದ ಹೊದಿಕೆಗಳು ಮತ್ತು ಬೆಡ್ ಶೀಟ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ.
Indian Railways : ರೈಲ್ವೆ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ರೈಲ್ವೆ ಮಂಡಳಿ ಈಡೇರಿಸಿದೆ. ರೈಲಿನಲ್ಲಿ ನಿಯೋಜಿಸಲಾಗುವ ಟ್ರೇನ್ ಗಾರ್ಡ್ (Train Guard) ಗಳನ್ನು ಇನ್ಮುಂದೆ ರೈಲು ನಿರ್ವಾಹಕ (Train Manager) ಎಂದು ಕರೆಯಲಾಗುವುದು.
ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ರೈಲ್ವೇಯು ಶುಕ್ರವಾರದಂದು 'ಗಾರ್ಡ್' ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಟ್ರೇನ್ ಮ್ಯಾನೇಜರ್ ಎಂದು ಮರು ಗೊತ್ತುಪಡಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.
ಸಾವಿರಾರು ಪ್ರಯಾಣಿಕರು ಪ್ರತಿದಿನ ಪ್ರಯಾಣಿಸಲು ರೈಲ್ವೇಯನ್ನು ತಮ್ಮ ಸಾರಿಗೆ ಸಾಧನವಾಗಿ ಬಳಸುತ್ತಾರೆ.ಕೆಲವೊಮ್ಮೆ ಪ್ರಯಾಣಿಕರು ಅವಸರದ ಪ್ರಯಾಣದಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಳ್ಳುವುದುಂಟು.ಆ ಕಳೆದುಕೊಂಡಿರುವ ವಸ್ತುಗಳನ್ನು ವಾಪಸ್ ಪಡೆಯುವುದು ಇದೆಯಲ್ಲ, ಅದೊಂದು ರೀತಿ ಅದೃಷ್ಟದ ಆಟ ಇದ್ದ ಹಾಗೆ.ಆದರೆ ಶೀಘ್ರದಲ್ಲೇ ಈ ಸಮಸ್ಯೆಗೆ ರೈಲ್ವೆ ಇಲಾಖೆ ಪೂರ್ಣ ವಿರಾಮ ಹಾಕಲಿದೆ.
Southern Railway News: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊವಿಡ್ (Covid-19) ಪ್ರಕರಣಗಳ ಸಂಖ್ಯೆ ಹಿನ್ನೆಲೆ ದಕ್ಷಿಣ ರೇಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಲೋಕಲ್ ಟ್ರೇನ್ (Local Train) ಗಳಲ್ಲಿ 'ನೋ ವ್ಯಾಕ್ಸಿನ್, ನೋ ಎಂಟ್ರಿ' (No Vaccine, No Entry) ನೀತಿಯನ್ನು ಜಾರಿಗೊಳಿಸಲಾಗಿದೆ. ಅಂದರೆ, ಯಾತ್ರೆಗಾಗಿ ಕೊರೊನಾ ವ್ಯಾಕ್ಸಿನ್ ನ ಎರಡೂ ಪ್ರಮಾಣಗಳನ್ನು ಕಡ್ಡಾಯಗೊಳಿಸಲಾಗಿದೆ.
Indian Railways Latest News: ಪ್ರಯಾಣಿಕರ ಅನುಕೂಲತೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಇದೀಗ ಅಂಚೆ ಕಚೇರಿಯಿಂದಲೂ ಟಿಕೆಟ್ ಬುಕ್ ಮಾಡುವ ಸೌಲಭ್ಯ ಆರಂಭಿಸಿದೆ. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ನಿರ್ವಹಿಸುವ ಸಂಸ್ಥೆಯಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಹೊಸ ಸೌಲಭ್ಯವನ್ನು ಆರಂಭಿಸಿದೆ.
Interesting Facts - ರೈಲು ಪ್ರಯಾಣದ ಸಮಯದಲ್ಲಿ ರೈಲಿನ ಕೊನೆಯ ಕಂಪಾರ್ಟ್ಮೆಂಟ್ನಲ್ಲಿ (Last Compartment) ಮಾಡಲಾದ ಎಕ್ಸ್ (X) ಅನ್ನು ನಾವೆಲ್ಲರೂ ಆಗಾಗ ನೋಡಿರಬಹುದು. ಆದರೆ ಆ ಚಿಹ್ನೆಯ ಅರ್ಥ ಏನು ಎಂಬುದು ಬಹುತೇಕರಿಗೆ ತಿಳಿದಿರದ ವಿಷಯ. ಹಾಗಾದರೆ ರೈಲಿನ ಹಿಂಬದಿಯಲ್ಲಿರುವ ಆ ಚಿಹ್ನೆಯ ಅರ್ಥ ಏನು ತಿಳಿದುಕೊಳ್ಳೋಣ ಬನ್ನಿ.
Indian Railway News: ದೂರದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ನಲ್ಲಿ ಆರು ಬರ್ತ್ಗಳ ಮೀಸಲಾತಿ ಕೋಟಾ ಮತ್ತು ಗರೀಬ್ ರಥ, ರಾಜಧಾನಿ, ಡುರೊಂಟೊ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್ಗಳಲ್ಲಿ (3ಎಸಿ ಕ್ಲಾಸ್) ಮಹಿಳಾ ಪ್ರಯಾಣಿಕರಿಗೆ ಆರು ಬರ್ತ್ಗಳ ಮೀಸಲಾತಿ ಕೋಟಾವನ್ನು ನಿಗದಿಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.