Indian Railway Confirm Ticket App: ತತ್ಕಾಲ್ ಟಿಕೆಟ್‌ ಬುಕ್ ಮಾಡಲು ಸುಲಭ ಮಾರ್ಗ

Indian Railway Confirm Ticket App: ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಭಾರತೀಯ ರೈಲ್ವೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ಬಳಸಿಕೊಂಡು, ಪ್ರಯಾಣಿಕರು ಎಲ್ಲಿ ಬೇಕಾದರೂ ತಕ್ಷಣವೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಈ ಸೇವೆಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

Written by - Yashaswini V | Last Updated : Feb 25, 2022, 01:56 PM IST
  • ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗಾಗಿ ವಿಶೇಷ ಉಡುಗೊರೆಯನ್ನು ತಂದಿದೆ.
  • ಹಠಾತ್ ಪ್ರಯಾಣಿಸಬೇಕಾದ ಮತ್ತು ತತ್ಕಾಲ್ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗದಂತಹ ಪ್ರಯಾಣಿಕರಿಗೆ ಇದು ತುಂಬಾ ಅನುಕೂಲಕರವಾಗಿದೆ.

    ಅದಕ್ಕಾಗಿಯೇ ಭಾರತೀಯ ರೈಲ್ವೆಯು ConfirmTkt ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.
Indian Railway Confirm Ticket App: ತತ್ಕಾಲ್ ಟಿಕೆಟ್‌ ಬುಕ್ ಮಾಡಲು ಸುಲಭ ಮಾರ್ಗ title=
Confirm Ticket App

Indian Railway Confirm Ticket App: ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಈ ಬಾರಿಯೂ ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗಾಗಿ ವಿಶೇಷ ಉಡುಗೊರೆಯನ್ನು ತಂದಿದೆ. ಹಠಾತ್ ( ಐಆರ್‌ಸಿಟಿಸಿ ಆಪ್ ) ಪ್ರಯಾಣಿಸಬೇಕಾದ ಮತ್ತು ತತ್ಕಾಲ್ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗದಂತಹ ಪ್ರಯಾಣಿಕರಿಗೆ ಇದು ತುಂಬಾ ಅನುಕೂಲಕರವಾಗಿದೆ. ಅದಕ್ಕಾಗಿಯೇ ಭಾರತೀಯ ರೈಲ್ವೆಯು ConfirmTkt ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ . ಈ ಅಪ್ಲಿಕೇಶನ್ ಬಗ್ಗೆ ವಿವರವಾಗಿ ತಿಳಿಯೋಣ.

ಟಿಕೆಟ್ ರದ್ದುಗೊಳಿಸಿದರೆ ಮರುಪಾವತಿ ನೀಡಲಾಗುವುದಿಲ್ಲ:
ತತ್ಕಾಲ್ ಟಿಕೆಟ್‌ಗಳು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ಲಭ್ಯವಿರುತ್ತವೆ ಎಂದು ಐಆರ್‌ಸಿಟಿಸಿ (IRCTC) ಸ್ಪಷ್ಟಪಡಿಸಿದೆ. ಪ್ರಯಾಣಿಕರು ರೈಲು ಹೊರಡುವ 24 ಗಂಟೆಗಳ ಮೊದಲು ಟಿಕೆಟ್ ಕಾಯ್ದಿರಿಸಬೇಕು. ತತ್ಕಾಲ್ ಬುಕಿಂಗ್‌ನಲ್ಲಿ ಟಿಕೆಟ್ ರದ್ದುಗೊಳಿಸಿದರೆ, ಪ್ರಯಾಣಿಕರು ಯಾವುದೇ ರೀತಿಯ ಮರುಪಾವತಿಯನ್ನು ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ವಿಶೇಷವೆಂದರೆ ConfirmTkt ಆ್ಯಪ್ ಮೂಲಕ ತತ್ಕಾಲ್ ಬುಕಿಂಗ್ ಮಾಡುವಾಗ, ಪ್ರಯಾಣಿಕರು ರೈಲಿನಲ್ಲಿ ಸೀಟುಗಳ ಲಭ್ಯತೆಯನ್ನು ನೋಡಲು ಸಾಧ್ಯವಾಗುತ್ತದೆ. ಅಪ್ಲಿಕೇಶನ್‌ನಲ್ಲಿ, ನೀವು ರೈಲಿನ ಸಂಖ್ಯೆ, ಸೀಟ್ ಮತ್ತು ಬರ್ತ್ ಲಭ್ಯತೆ, ಪಿಎನ್‌ಆರ್ ಸ್ಥಿತಿ, ವೇಳಾಪಟ್ಟಿ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ಮಾಹಿತಿಯನ್ನು ಒಂದೇ ಬಾರಿಗೆ ಪಡೆಯುತ್ತೀರಿ. 

ಇದನ್ನೂ ಓದಿ- Okinawa Okhi 90 Electric Scooter: ಒಂದೇ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಚಲಿಸುತ್ತೆ ಒಕಿನಾವಾದ ಈ ಎಲೆಕ್ಟ್ರಿಕ್ ಸ್ಕೂಟರ್

ConfirmTkt ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:
ಹಂತ 1-
Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಿಗಾಗಿ ConfirmTkt ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಗೂಗಲ್ ಪ್ಲೇ ಸ್ಟೋರ್ (Google Play Store) ಅಥವಾ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬಹುದು ಮತ್ತು ಸ್ಥಾಪಿಸಬಹುದು. 

ಇದನ್ನೂ ಓದಿ- Aadhaar Card ಬಳಕೆದಾರರ ಗಮನಕ್ಕೆ : ಆಧಾರ್ ಅಪ್‌ಡೇಟ್‌ಗೆ ಹೊಸ ಸೇವೆ ಆರಂಭ!

ಹಂತ 2- ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು ಪ್ರಯಾಣಕ್ಕಾಗಿ ನಿಮ್ಮ ಗಮ್ಯಸ್ಥಾನದ ನಿಲ್ದಾಣಗಳನ್ನು ಆಯ್ಕೆಮಾಡಿ.

ಹಂತ 3- ಇದರ ನಂತರ ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ ಮತ್ತು ಕ್ಲಾಸ್ ಅನ್ನು  ಆಯ್ಕೆಮಾಡಿ.

ಹಂತ 4- ನಂತರ ಹುಡುಕಾಟದ ಮೇಲೆ ಕ್ಲಿಕ್ ಮಾಡಿದ ನಂತರ, ರೈಲಿನ ವಿವರಗಳು ಮತ್ತು ಅವುಗಳಲ್ಲಿನ ಸೀಟ್ ಲಭ್ಯತೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಹಂತ 5- ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ರೈಲು ಮತ್ತು ಬರ್ತ್ ಆಯ್ಕೆಮಾಡಿ.

ಹಂತ 6- ಇದರ ನಂತರ, ಆನ್‌ಲೈನ್ ಮಾಧ್ಯಮದ ಮೂಲಕ ಟಿಕೆಟ್ ಬುಕಿಂಗ್‌ನ ಪಾವತಿಯನ್ನು ಮಾಡಿ.

ಹಂತ 7- ಅದರ ನಂತರ ನೀವು IRCTC ನಿಂದ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲಿ ಟಿಕೆಟ್ ಬುಕಿಂಗ್ ದೃಢೀಕರಣವನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News