ಪೌರತ್ವ ತಿದ್ದುಪಡಿ ಕಾಯ್ದೆ(CAA) ಬಗ್ಗೆ ಸಂಪೂರ್ಣವಾಗಿ ತಿಳಿಯದಿದ್ದರೂ ಸಹ ಜನರು ಇಂದು ಈ ವಿಷಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿದ್ದಾರೆ ಎಂದು ರಾಮದೇವ್ ಹೇಳಿದರು. ಈ ಕಾನೂನು ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವುದಲ್ಲ, ಆದರೆ ಪೌರತ್ವವನ್ನು ನೀಡುವುದು ಎಂದು ಪ್ರಧಾನಿ ಮತ್ತು ಗೃಹ ಸಚಿವರು ಸ್ವತಃ ಹೇಳಿದರೂ ಏಕೆ ಜನರು ಬೆಂಕಿ ಹಚ್ಚುತ್ತಿದ್ದಾರೆ ಎಂದು ರಾಮ್ದೇವ್ ಪ್ರಶ್ನಿಸಿದ್ದಾರೆ.
ಜನವರಿ 5 ರಂದು ಜೆಎನ್ಯುನಲ್ಲಿ ನಡೆದ ಜನಸಮೂಹದ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯು ಉಪಕುಲಪತಿ ಜಗದೀಶ್ ಎಂ ಕುಮಾರ್ ಅವರನ್ನು ದಾಳಿಯ ಹಿಂದಿನ ಸೂತ್ರಧಾರಿ ಎಂದು ಗುರುತಿಸಿದೆ ಮತ್ತು ಅವರನ್ನು ತಕ್ಷಣ ವಜಾಗೊಳಿಸಲು ಕರೆ ನೀಡಿದೆ.
ಕಳೆದ ವಾರ ಜೆಎನ್ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ನಡೆದ ಜನಸಮೂಹದ ದಾಳಿಗೆ ಸಂಬಂಧಿಸಿದಂತೆ 'Unity against Left' ಎಂಬ ವಾಟ್ಸಾಪ್ ಗುಂಪಿನ 60 ಸದಸ್ಯರಲ್ಲಿ 37 ಜನರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಧ್ವಂಸ ಮಾಡಿದ ಕೆಲವು ಮುಖವಾಡ ಧರಿಸಿದ್ದ ದುಷ್ಕರ್ಮಿಗಳನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ.
ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಪಾಲಡಿ ಪ್ರದೇಶದಲ್ಲಿ ABVP ವಿದ್ಯಾರ್ಥಿಸಂಘಟನೆಯ ಕಾರ್ಯಾಲಯದ ಎದುರು NSUI ವಿದ್ಯಾರ್ಥಿ ಸಂಘಟನೆಯ ಸದಸ್ಯರು ವಿರೋಧ ಪ್ರದರ್ಶನ ನಡೆಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಆವರಣದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಮಾಜಿ ಪ್ರೊ ಉಪಕುಲಪತಿ ಡಾ.ಕಪಿಲ್ ಕಪೂರ್ ಝೀ ನ್ಯೂಸ್ ಜೊತೆ ಮಾತನಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.