ಉತ್ತರ ಕರ್ನಾಟಕ ಕನ್ನಡ ಗಂಡು ಮೆಟ್ಟಿನ ನಾಡು ಕನ್ನಡ ನಾಡು ನುಡಿ ಭಾಷೆ, ಪ್ರಾದೇಶಿಕತೆಗೆ ಕನ್ನಡಿಗರಿಗೆ ಅನ್ಯಾಯ ಆದಾಗ ಮೊದಲು ಪ್ರಶ್ನೆ ಮಾಡುವವರು ಹುಬ್ಬಳ್ಳಿ ಧಾರವಾಡದವರು. ಗೋಕಾಕ ಚಳುವಳಿ, ಕರ್ನಾಟಕ ಏಕೀಕರಣ ಮೂಲಕ ಕನ್ನಡ ಭಾಷೆಗೆ ನಾಡಿಗೆ ಅಧಮ್ಯ ಚೇತನ ತುಂಬಿದ ನಾಡಿನಲ್ಲೀಗ ಕನ್ನಡ ಧ್ವಜ ಹರಿದಿದೆ.
ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರ ರಾಜ್ಯದ ಗ್ರಾಮವೊಂದರಲ್ಲಿ ಕನ್ನಡ ಧ್ವಜ ರಾರಾಜಿಸಿದೆ. ಸ್ವತಃ ಗ್ರಾಮಸ್ಥರೇ ಊರ ಹೆಬ್ಬಾಗಿಲಿಗೆ ಕನ್ನಡ ಬಾವುಟ ಕಟ್ಟುವ ಮಾರಾಠಿ ಪುಂಡರ ವಿರುದ್ದ ಹರಿಹಾಯ್ದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮಹಾರಾಷ್ಟ್ರ ಸಿಎಂಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ ಪುನೀತ್ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ.
Bharat Jodo Yatra In Mysore: ಕರ್ನಾಟಕದ ಬಾವುಟದ ಮೇಲೆ ರಾಹುಲ್ ಗಾಂಧಿ ಚಿತ್ರವನ್ನು ಬಳಸದಂತೆ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್ ಗೆ ಎಚ್ಚರಿಕೆಯನ್ನು ನೀಡಿದ್ವೆ. ಅನೌಪಚಾರಿಕವಾಗಿ ನಾಡ ಬಾವುಟ ಎಂದು ಹೇಳಲಾಗುವ ಧ್ವಜದಲ್ಲಿ ಒಂದು ಕೆಂಪು ಮತ್ತು ಹಳದಿ ಬಣ್ಣದ ಪಟ್ಟಿಗಳಿವೆ.
E-Commerce Site Amazon - ಈ ಕುರಿತು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ, "ಬಹುರಾಷ್ಟ್ರೀಯ ಕಂಪನಿಗಳಿಂದ #Kannada ವನ್ನು ಈ ರೀತಿ ಪದೇ ಪದೇ ಅವಮಾನಿಸುವುದನ್ನು ತಡೆಯಬೇಕು. ಇದು ಕನ್ನಡಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಹಾಗೂ ಹೆಚ್ಚಾಗುತ್ತಿರುವ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ @amazonca ಕನ್ನಡಿಗರ ಕ್ಷಮೆ ಕೋರಬೇಕು" ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.