E-Commerce: Amazonನಿಂದ ಕನ್ನಡಿಗರನ್ನು ಅವಮಾನಿಸುವ ಸರಕು, ಕಾನೂನು ಕ್ರಮ ಎಂದ ಸರ್ಕಾರ

E-Commerce Site Amazon - ಈ ಕುರಿತು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ, "ಬಹುರಾಷ್ಟ್ರೀಯ ಕಂಪನಿಗಳಿಂದ #Kannada ವನ್ನು ಈ ರೀತಿ ಪದೇ ಪದೇ ಅವಮಾನಿಸುವುದನ್ನು ತಡೆಯಬೇಕು. ಇದು ಕನ್ನಡಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಹಾಗೂ ಹೆಚ್ಚಾಗುತ್ತಿರುವ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ  @amazonca ಕನ್ನಡಿಗರ ಕ್ಷಮೆ ಕೋರಬೇಕು" ಎಂದಿದ್ದಾರೆ.

Written by - Nitin Tabib | Last Updated : Jun 6, 2021, 10:06 PM IST
  • ಗೂಗಲ್ ಬಳಿಕ ಕನ್ನಡಿಗರನ್ನು ಅವಮಾನಿಸಿದ ಮತ್ತೊಂದು ಬಹುರಾಷ್ಟ್ರೀಯ ಕಂಪನಿ.
  • ಕನ್ನಡದ ಧ್ವಜ ಬಣ್ಣ ಹಾಗೂ ಲಾಂಛನ್ ಹೊಂದಿದ ಮಹಿಳೆಯರ ಒಳಉಡುಪು ಮಾರತಕ್ಕಿತ್ತ ಅಮೆಜಾನ್ ಕನ್ನಡ.
  • ವಿವಾದದ ಭುಗಿಲೆದ್ದ ಬಳಿಕ ಸೈಟ್ ನಿಂದ ಸರಕನ್ನೇ ತೆಗೆದುಹಾಕಿದ ಅಮೆಜಾನ್.
E-Commerce: Amazonನಿಂದ ಕನ್ನಡಿಗರನ್ನು ಅವಮಾನಿಸುವ ಸರಕು, ಕಾನೂನು ಕ್ರಮ ಎಂದ ಸರ್ಕಾರ title=
E-Commerce Site Amazon (File Photo)

ಬೆಂಗಳೂರು : E-Commerce ನ ದೈತ್ಯ ಕಂಪನಿ Amazon ಕನ್ನಡ ವೆಬ್ ಸೈಟ್ ನಲ್ಲಿ ಕರ್ನಾಟಕ ಧ್ವಜ ಬಣ್ಣ ಮತ್ತು ರಾಜ್ಯದ ಲಾಂಛನವನ್ನು ಹೊಂದಿರುವ ಬಿಕಿನಿ (Bikini)ಮಾರಾಟಕ್ಕಿದೆ ಎಂದು ಬಳಕೆದಾರರು ದೂರಿದ ಬಳಿಕ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ, ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದಾರೆ. ಇದು ಕನ್ನಡಿಗರ ಸ್ವಾಭಿಮಾನದ ವಿಷಯ ಎಂದು ಹೇಳಿರುವ ಸಚಿವರು, ಸರ್ಕಾರ ಇಂತಹ ವಿಷಯಗಳನ್ನು ಸಹಿಸುವುದಿಲ್ಲ ಎಂದು ಹೇಳಿ ಅಮಜಾನ್ ಕನ್ನಡ ಇದಕ್ಕಾಗಿ ಕ್ಷಮೆ ಕೋರಬೇಕು ಏನಿದ್ದಾರೆ. 

ಗೂಗಲ್ ವಿರುದ್ಧವೂ ವ್ಯಕ್ತವಾಗಿತ್ತು ಆಕ್ರೋಶ
ಕೆಲ ದಿನಗಳ ಹಿಂದೆ ವಿಶ್ವದ ಸರ್ಚ್ ಇಂಜಿನ್ ದೈತ್ಯ ಕಂಪನಿ ಗೂಗಲ್ ವಿರುದ್ಧವೂ ಕೂಡ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಗೂಗಲ್ ತನ್ನ ಸರ್ಚ್ ನಲ್ಲಿ ಕನ್ನಡ ಭಾಷೆಯನ್ನು ಭಾರತದ 'ಎಲ್ಲಕ್ಕಿಂತ ಕೆಟ್ಟ ಭಾಷೆ' ಎಂದು ಹೇಳಲಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಲಿಂಬಾವಳಿ, "ಇತ್ತೀಚೆಗಷ್ಟೇ ನಾವು ಗೂಗಲ್ ಮೂಲಕ ಕನ್ನಡದ ಅವಮಾನವನ್ನು ಎದುರಿಸಿದ್ದೇವೆ. ಆ ಗಾಯ ಮಾಸುವ ಮುನ್ನವೇ, ಅಮೆಜಾನ್ ಕನ್ನಡ, ಕನ್ನಡ ಧ್ವಜಗಳ (Karnataka Flag) ಬಣ್ಣ ಹಾಗು ರಾಜ್ಯದ ಲಾಂಛನವನ್ನು ಮಹಿಳೆಯರ ಒಳಉಡುಪಿನ (Bikini On Amazon) ಬಳಕೆ ಮಾಡಿರುವ ಪ್ರಕರಣ ಎದುರಿಸುತ್ತಿದ್ದೇವೆ' ಎಂದಿದ್ದಾರೆ.

ಇದನ್ನೂ ಓದಿ-S.R. Bommai Birthday: ಐತಿಹಾಸಿಕ ಎಸ್.ಆರ್.ಬೊಮ್ಮಾಯಿ ಪ್ರಕರಣ ಸ್ಮರಿಸುತ್ತಾ...

ಕ್ಷಮೆ ಕೋರಿದ್ದ Google
ಈ ಕುರಿತು ಟ್ವೀಟ್ ಮಾಡಿರುವ ಸಚಿವರು ' ಇತ್ತೀಚೆಗಷ್ಟೇ ಗೂಗಲ್‍ ಕನ್ನಡವನ್ನು ಅವಮಾನಿಸಿದ್ದು ಮಾಸುವ ಮುನ್ನವೇ @amazonca ಕಂಪನಿ  ಕನ್ನಡದ ಲಾಂಛನ ಹಾಗೂ ಕನ್ನಡ ಭಾವುಟದ ಬಣ್ಣವನ್ನು ಮಹಿಳೆಯರ ಉಡುಪುಗಳಿಗೆ ಬಳಸಿರುವುದು ಖಂಡನೀಯ. ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಸಾಹಸಕ್ಕೆ ವಿದೇಶಿ ಕಂಪನಿಗಳು ಕೈ ಹಾಕಬಾರದು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಇಂತಹ ಕೃತ್ಯಗಳು ಹೆಚ್ಚುತ್ತಿರುವುದನ್ನು ಸಹಿಸಲಾಗುವುದಿಲ್ಲ, ಕೆನಡಾ ದೇಶದ  ಅಮೇಜಾನ್ ಕಂಪನಿ ಕನ್ನಡಿಗರ ಕ್ಷಮೆ ಕೇಳಬೇಕು. @amazonca  ವಿರುದ್ಧ ತತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಹೇಳಿದ್ದಾರೆ.

ಇದನ್ನೂ ಓದಿ-KSRTC-BMTC : ರಾಜ್ಯದಲ್ಲಿ ಅನ್​​ಲಾಕ್​ ಗೆ ಸಿದ್ಧತೆ : ಸರ್ಕಾರದಿಂದ ಸಾರಿಗೆ ನೌಕರರಿಗೆ ಬುಲಾವ್!

ಕನ್ನಡ ವೆಬ್ ಸೈಟ್ ನಿಂದ ಸರಕನ್ನು ತೆಗೆದುಹಾಕಿದ Amazon
ಇದು ಸರ್ಕಾರಕ್ಕೆ ಮಾಡಿದ ಅವಮಾನ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸರ್ಕಾರವನ್ನು ಕೋರಿದ್ದಾರೆ. ಇದರೊಂದಿಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಗಟ್ಟುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ, ಇದಕ್ಕಾಗಿ ಅಮೆಜಾನ್ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮೆಹಿಳೆಯರ ಒಳುದುಪಿನ ಮೇಲೆ ಕರ್ನಾಟಕ ಧ್ವಜಕ್ಕೆ ಬಳಸಲಾಗಿರುವ ಕೆಂಪು ಮತ್ತು ಹಳದಿ ಬಣ್ಣ ಇದ್ದು, ರಾಜ್ಯದ ಲಾಂಛನ 'ಗಂಡಭೇರುಂಡ' ಕೂಡ ಇದೆ. ಆದರೆ, ಈ ಕುರಿತು ಕೋಲಾಹಲ ಸೃಷ್ಟಿಯಾದ ಬಳಿಕ ಅಮೆಜಾನ್ (Amazon Site) ತನ್ನ ಕನ್ನಡದ ವೆಬ್ಸೈಟ್ ನಿಂದ ಈ ಸರಕನ್ನು ತೆಗೆದುಹಾಕಿದೆ. ಆದರೆ, ಪ್ರಸ್ತುತ ಅಮೆಜಾನ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಇದನ್ನೂ ಓದಿ-KSRTC-BMTC : ರಾಜ್ಯದಲ್ಲಿ ಅನ್​​ಲಾಕ್​ ಗೆ ಸಿದ್ಧತೆ : ಸರ್ಕಾರದಿಂದ ಸಾರಿಗೆ ನೌಕರರಿಗೆ ಬುಲಾವ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News