Puneeth Rajkumar Birthday: ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 50 ನೇ ಹುಟ್ಟುಹಬ್ಬಕ್ಕೆ ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್ ಜಂಟಿಯಾಗಿ ಈ ವರ್ಷದಂತೆ ಮುಂದಿನ ವರ್ಷ ʻಅಪ್ಪುʼ ಚಿತ್ರವನ್ನು ಮರುಬಿಡುಗಡೆ ಮಾಡಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ 15, 2024 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಸತ್ತೂರಿನ ಡಾ.ಡಿ. ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಭವನದಲ್ಲಿ ಆಯೋಜಿಸಲಾಗಿದೆ.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನಿಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಅಪಾರವಾದದ್ದನ್ನು ಸಾಧಿಸಿದ್ದಾರೆ. ಕಲಿಯುಗಕ್ಕೆ ಪುನೀತ್ ದೇವರ ಮಗು. ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು ಎಂದ್ರು. 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು.
Karnataka Ratna Puneeth Rajkumar : ನವೆಂಬರ್ 1 (ಇಂದು) ನಟ ಪುನೀತ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತಿಯ ಪರವಾಗಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
Puneeth Rajkumar : ಇಂದು ನಟ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಲಿದ್ದಾರೆ.
ಖ್ಯಾತ ಸಿನಿಮಾ ನಟ ಡಾ. ಪುನೀತ್ ರಾಜ್ಕುಮಾರ್ರವರನ್ನು ರಾಜ್ಯ ಪ್ರವಾಸೋದ್ಯಮದ ಶಾಶ್ವತ ರಾಯಭಾರಿ ಎಂದು ಘೋಷಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಪುನೀತ್ ರಾಜ್ ಕುಮಾರ್ , ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ( ಮಾರ್ಚ್ ೧೭ ) ಸ್ಪೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಚಿತ್ರನಟ ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ನಮ್ಮೊಂದಿಗಿಲ್ಲ ಎಂಬುದನ್ನು ಇಂದಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿರುವುದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಿಗರ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಈಗ ಅವರ ಖಾತೆಗೆ ಇದ್ದಂತಹ ಬ್ಲೂ ಟಿಕ್ ನ್ನು ತೆಗೆದುಹಾಕುವುದರ ಮೂಲಕ ಕನ್ನಡಿಗರ ಕಣ್ಮಣಿ ನಮ್ಮ ಪ್ರೀತಿಯ ಅಪ್ಪುಗೆ ಅವಮಾನ ಮಾಡಿದೆ.
ಕನ್ನಡಿಗರ ಕಣ್ಮಣಿ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಈಗ ಅವರ ನೆನಪನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜಗತ್ಪ್ರಸಿದ್ದ ಲಾಲ್ ಬಾಗ್ ನಲ್ಲಿ ಅಗಸ್ಟ್ 5 ರಿಂದ 15 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.