Kranti Traiker Release : ಕ್ರಾಂತಿಯ ಹವಾ ಸದ್ಯ ಎಲ್ಲೆಡೆ ಬಲು ಜೋರಾಗಿದೆ. ಒಂದೊಂದು ಊರಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡುವ ಮೂಲಕ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದೀಗ ಸಿನಿಮಾ ಬಿಡುಗಡೆ ದಿನ ಹತ್ತಿರವಾಗುತ್ತಿದ್ದು, ಚಿತ್ರದ ಟ್ರೇಲರ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಸ್ಯಾಂಡಲ್ವುಡ್ ನಟ ದರ್ಶನ್ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು. ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.
ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ ಡಿ ಬಾಸ್ ದರ್ಶನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ಮೇಲೆ ನಡೆದಿರುವ ಹಲ್ಲೆ ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ’ವೆಂದು ಹೇಳಿದ್ದಾರೆ.
Darshan Interview : ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೆ ಎಲ್ಲರೂ ಕಾದು ಕುಳಿತಿದ್ದಾರೆ. ಈ ಮಧ್ಯೆ ಸಿನಿಮಾದ ಪ್ರಮೋಷನ್ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಚಾರದ ವೇಳೆ ಮೊದಲ ಬಾರಿಗೆ ದರ್ಶನ್ ಬಾಯಿಯಲ್ಲಿ ಸುದೀಪ್ ಹೆಸರು ಕೇಳಿಬಂದಿದೆ.
ʻಕ್ರಾಂತಿʼಯಲ್ಲಿ ರವಿಚಂದ್ರನ್ ಸೇರಿದಂತೆ ಎಲ್ಲರದ್ದೂ ಮುಖ್ಯ ಪಾತ್ರ ಎಂದು ಡಿ ಬಾಸ್ ದರ್ಶನ್ ಹೇಳಿದ್ದಾರೆ.. ಸಿನಿಮಾಗಾಗಿ ನಾನು ಜಗಳ ಮಾಡಿದ್ದೀನಿ ಅಂತಾ ದರ್ಶನ್ ಹೇಳಿಕೊಂಡಿದ್ದಾರೆ.. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ..
ʻಕ್ರಾಂತಿʼ ಶೂಟಿಂಗ್ ಆಗಿದ್ದು ಎಲ್ಲೆಲ್ಲಿ..? ಕ್ರಾಂತಿ ಸಿನಿಮಾದ ಪ್ರಚಾರದ ಬಗ್ಗೆ ದರ್ಶನ್ ಹೇಳಿದ್ದೇನು..? ಜೀ ಕನ್ನಡ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಕ್ರಾಂತಿ ಸಿನಿಮಾದ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ..
ಜಾಲಿ ಮಾಡಲು ನಾನು ಸೆಟ್ಗೆ ಹೋಗಲ್ಲ. ಸಿನಿಮಾ ನನಗೆ ಹೊಟ್ಟೆಪಾಡು ಎಂದು ಡಿ ಬಾಸ್ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನದಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಇಂದು ರಾಜಕೀಯ ಅಂದ್ರೆ ಬ್ಯುಸಿನೆಸ್.. ಹಣ ಕೊಡದೇ ಇದ್ರೆ ಇವತ್ತು ವೋಟು ಹಾಕಲ್ಲ ಎಂದು ದರ್ಶನ್ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ಗೆ ದರ್ಶನ್ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ..
ಈಗಿನ ಶಿಕ್ಷಣ ವ್ಯವಸ್ಥೆ ಬಗ್ಗೆ ʻಡಿ ಬಾಸ್ʼ ಕಳವಳ ವ್ಯಕ್ತಪಡಿಸಿದ್ದಾರೆ. ಕ್ರಾಂತಿ ಸಿನಿಮಾಗೆ ಸಂಬಂಧಿಸಿದಂತೆ ಜೀ ಕನ್ನಡ ನ್ಯೂಸ್ಗೆ ನೀಡಿರೋ EXCLUSIVE ಸಂದರ್ಶನದಲ್ಲಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ʼಕ್ರಾಂತಿʼ ಜನವರಿ 26ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ, ನಾವು ದೊಡ್ಡ ಸಿನಿಮಾ ಮಾಡಿಬಿಟ್ಟಿದ್ದೇವೆ, ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದ್ರೆ, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳೋಕೆ ಇಷ್ಟ ಪಡ್ತೀನಿ ಎಂದು ದರ್ಶನ್ ಹೇಳಿದರು.
ಡಿ ಬಾಸ್ ಮುಂದಿನ ಸಿನಿಮಾ "ಕ್ರಾಂತಿ" ಚಿತ್ರೀಕರಣದ ಇನ್ನೇನು ಆಲ್ಮೋಸ್ಟ್ ಮುಗಿದಿದ್ದು ತೆರೆ ಮೇಲೆ ಬರಲಷ್ಟೇ ಬಾಕಿಯಿದೆ. ಕ್ರಾಂತಿ ಸಿನಿಮಾ ರಿಲೀಸ್ ಆಗೋ ದಿನ ಇಡೀ ಕರುನಾಡಿನಲ್ಲಿ ಮಹಾಕ್ರಾಂತಿಯಾಗೋದು ಕೂಡ ಕನ್ಫರ್ಮ್ ಆಗಿದೆ. ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.