Leopard Attack: ಮೇಘನಾ ಎಂಬ ಯುವತಿ ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಮಂಡ್ಯ ಜಿಲ್ಲೆಯ ವಿಶ್ವ ಪ್ರಸಿದ್ದ ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಜನರು ಮತ್ತು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಕೆಆರ್ಎಸ್ನಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆಗಾಗಿ ನಾಲ್ಕು ಕಡೆಗಳಲ್ಲಿ ಬೋನ್ ಇಟ್ಟಿದ್ದರೂ ಕೂಡ ಸೆರೆಯಾಗದ ಚಿರತೆಯಿಂದಾಗಿ ಜನರು ಭಯ, ಆತಂಕದಲ್ಲಿಯೇ ಓಡಾಡುವಂತಾಗಿದೆ.
ಮಂಡ್ಯದ ಪ್ರಸಿದ್ಧ KRS ಡ್ಯಾಂ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಹಾಗೂ KRS ಡ್ಯಾಂ ಸಿಬ್ಬಂದಿ ಆತಂಕಗೊಂಡಿದ್ದಾರೆ. ಚಿರತೆ ಓಡಾಟದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ..
ಬೆಳಗಾವಿಯಲ್ಲಿ 20ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ. ಕುಂದಾನಗರಿಗೆ ಆಗಮಿಸಿದ ಶಿವಮೊಗ್ಗದ ಡಾಟ್ ಸ್ಪೆಷಲಿಷ್ಟ್ ಡಾ. ವಿನಯ್ ಎಸ್. ನೇತೃತ್ವದ ತಂಡ. ಈಗಾಗಲೇ 8 ಡಾಟ್ ಸ್ಪೆಷಲಿಷ್ಟ್, 60 ಜನ ಸಿಬ್ಬಂದಿಯಿಂದ ಕೂಂಬಿಂಗ್. 260 ಎಕರೆ ವಿಸ್ತೀರ್ಣದಲ್ಲಿ ಇರೋ ಗಾಲ್ಫ್ ಕ್ಲಬ್ನಲ್ಲಿ ಚಿರತೆಗಾಗಿ ಶೋಧ.
ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆಯಲ್ಲಿ ಚಿರತೆ ಪತ್ತೆಯಾಗಿದ್ದು, ಬಸ್ ಚಾಲಕ ನೊಬ್ಬ ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Rakshabandhan In Rajasthan: ಮಹಿಳೆಯೊಬ್ಬರು ಚಿರತೆಯ ಕೈಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾಳೆ. ಇಲ್ಲಿ ಅತ್ಯಂತ ಸುಂದರ ಸಂಗತಿ ಎಂದರೆ, ಚಿರತೆ ಮಹಿಳೆಗೆ ಯಾವುದೇ ಹಾನಿಯನ್ನು ತಲುಪಿಸುವುದಿಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಹೊರಹೊಮ್ಮಿದೆ.
ನೀರಮಾನ್ವಿ ಗುಡ್ಡದಲ್ಲಿ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದ ಚಿರತೆ 3-4 ತಿಂಗಳಿಂದ ಸ್ಥಳೀಯರ ಕಣ್ಣಿಗೆ ಕಾಣಿಸಿಕೊಳ್ತಿದ್ದ ಚಿರತೆ ಪದೇ ಪದೇ ಚಿರತೆ ಕಾಣಿಸಿಕೊಳ್ತಿದ್ರಿಂದ ಆತಂಕಗೊಂಡಿದ್ದ ಜನ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.. ಚಿರತೆ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ನೀರಮಾನ್ವಿ ಗುಡ್ಡದಲ್ಲಿ ಚಿರತೆ ಇರೋದು ಖಚಿತವಾಗಿದೆ. ಚಿರತೆ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಳೀಯರ ಕಣ್ಣಿಗೆ ಬೀಳುತ್ತಿದ್ದು, ವಾರದ ಹಿಂದೆ ಮೇಕೆಯೊಂದನ್ನು ಕೊಂದು ಹಾಕಿತ್ತು. ಪದೇ ಪದೆ ಚಿರತೆ ಕಾಣಿಸಿಕೊಳ್ತಿದ್ರಿಂದ ಜನ ಆತಂಕಗೊಂಡಿದ್ದಾರೆ.
ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಜನ ಆತಂಕಗೊಂಡಿದ್ದಾರೆ. ಜಮೀನಿಗೆ ಹೊರಟಿದ್ದ ರೈತರು ಚಿರತೆ ನೋಡಿದ್ದು ಆತಂಕಗೊಂಡಿದ್ದಾರೆ. ಚಿರತೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.