ಕನ್ನಡ ಚಿತ್ರರಂಗದ ರಗಡ್ ಲೇಡಿ.. ಗಂಧದದ ಗುಡಿಯ ಘಾಟಿ.. ಗಾಂಧಿನಗರದ ಗಯ್ಯಾಳಿ.. ಚಂದನವನದ ಚಂದುಳ್ಳಿ.. ಬಣ್ಣದ ಲೋಕದ ಬಜಾರಿ ಎಂದೇ ಖ್ಯಾತಿ ಪಡೆದ ತಾರೆ.. ತಮ್ಮ ನೇರ ನುಡಿ.. ದಿಟ್ಟ ನಟನೆಯಿಂದ 70-80ರ ದಶಕದಲ್ಲಿ ಕನ್ನಡ ಚಿತ್ರದ ರಂಗದ ಟಾಪ್ ನಾಯಕಿಯಾಗಿ ಮೆರೆದವರಲ್ಲಿ ನಟಿ ಮಂಜುಳಾ ಕೂಡ ಒಬ್ಬರು.. ಅದರಲ್ಲಂತೂ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮಂಜುಳಾ ಮಾಡಿದ್ದ ಬಜಾರಿ ಕ್ಯಾರೆಕ್ಟರ್ ಹಾಗೂ ಏಯ ಬೇವರ್ಸಿ ಹಳೇ ಬೇವರ್ಸಿ ಎಂಬ ಡೈಲಾಗ್ ಇಡೀ ಕರ್ನಾಟಕ ಜನತೆಯ ಮನೆ ಮಾತಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಮಿಂಚು ಮಿನುಗಿದ ಮಂಜುಳಾ ಅವರ ಸಂಪೂರ್ಣ ಜೀವನವನ್ನ ಈ ಏಪಿಸೋಡ್ನಲ್ಲಿ ಪರಿಚಯಿಸುತ್ತೇವೆ ನೋಡಿ..
ಮಂಜುಳ ಸಾಲು ಸಾಲು ಸಿನಿಮಾಗಳ ನಟನೆಯಲ್ಲಿ ಬ್ಯೂಸಿಯಾಗಿದ್ರು.. ಬಾಲ್ಯದಿಂದಲೇ ನಟನೆಯಲ್ಲೇ ತಮ್ಮನ್ನ ತೊಡಗಿಸಿಕೊಂಡಿದ್ರು.. 12 ವರ್ಷದಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ತಮ್ಮ ನಟನೆ ಮೂಲಕ ಜನಮನಗೆದ್ದಿದ್ದರು.. ಮಂಜುಳಾ ಒಂದು ದಶಕಕ್ಕೂ ಮೀರಿದ ಸಿನಿಮಾ ಬದುಕಿನಲ್ಲಿ ಸುಮಾರು ನೂರು ಚಿತ್ರಗಳಲ್ಲಿ ನಟಿಸಿದ್ದರೂ.. ಹುಡುಗಾಟದ ಹುಡ್ಗಿ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ಅಮೃತಮ್ ಜೊತೆ ಪ್ರೇಮಾಂಕರವಾಗಿ ಮದುವೆಯಾಗುತ್ತಾರೆ.. ಮದುವೆ ಬಳಿಕ ಕನ್ನಡಚಿತ್ರರಂಗದಿಂದ ಮಂಜುಳಾ ಅವರು ದೂರ ಉಳಿಯುತ್ತಾರೆ.. ಮುಂದು ಅವರ ಬದುಕಿನಲ್ಲಿ ನಡೆದಿದ್ದೆಲ್ಲಾ ವಿಧಿಯಾಟ..
ಮಂಜುಳಾ ʼಗಲಾಟೆ ಸಂಸಾರʼದಲ್ಲಿ ʼಸಂಪತ್ತಿಗೆ ಸವಾಲ್ʼ ಹಾಕಿ ʼಬೆಳ್ಳಿತೆರೆಯ ಬಜಾರಿʼ ಎಂದೇ ಕನ್ನಡಚಿತ್ರರಂಗದಲ್ಲಿ ಸದ್ದು ಮಾಡಿದ್ರು.. ತಮ್ಮ ʼಎರಡು ಕನಸುʼಗಳ ಮೂಲಕ ʼದಾರಿ ತಪ್ಪಿದ ಮಗʼನಿಗೆ ʼಮಯೂರʼ ದರ್ಶನ ಮಾಡಿಸಿದರು.. ಗಾಂಧಿನಗರದಲ್ಲಿ 70-80ರ ದಶಕದಲ್ಲಿ ʼಹುಡುಗಾಟದ ಹುಡುಗಿʼಯಾಗಿ ʼನೀ ನನ್ನ ಗೆಲ್ಲಲಾರೆʼ ಎಂದು ʼಪಾಯಿಂಟ್ ಪರಿಮಳʼಳಾಗಿ ದಿಗ್ಗಜರ ಟಕ್ಕರ್ ಕೊಟ್ಟ ದಿಟ್ಟ ನಟಿಯಾಗಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.