ಮೃತರನ್ನು ನೀಲಂ ಗೋಯಲ್ (55), ಅವರ ಪುತ್ರ ಅಶುತೋಷ್ ಗೋಯಲ್ (35), ಮಂಜು ಬಿಂದಾಲ್ (58), ಅವರ ಪುತ್ರ ಹಾರ್ದಿಕ್ ಬಿಂದಾಲ್ (37), ಅವರ ಪತ್ನಿ ಸ್ವಾತಿ ಬಿಂದಾಲ್ (32) ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.
Awas Vikas Flat Scheme in UP: ಯುಪಿ ವಸತಿ ಅಭಿವೃದ್ಧಿ ಮಂಡಳಿಯು ರಾಜ್ಯದ 7 ನಗರಗಳಲ್ಲಿ ಅಗ್ಗದ ಫ್ಲಾಟ್ಗಳ ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿ ಆಶ್ರಯದ ಬೆಲೆಯಲ್ಲಿ ಶೇ.42ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಯೋಜನೆಯಡಿ ಹಂಚಿಕೆಯನ್ನು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ನೀಡಲಾಗುತ್ತದೆ.
Missing green parrot : ಮೀರತ್ನ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಗಿಳಿ ನಾಪತ್ತೆಯಾದಾಗ ತುಂಬಾ ನೊಂದಿದ್ದರು. ಗಿಳಿಯನ್ನು ಹುಡುಕಿ ತಂದು ಕೊಡುವವರಿಗೆ ಐದು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು.
32 ವರ್ಷದ ಅಜೀಂ ಮನ್ಸೂರಿ ನವೆಂಬರ್ 2ರಂದು ವಿವಾಹವಾದರು. ಹಾಪುರ ನಿವಾಸಿ ಬುಶ್ರಾರನ್ನು ಅಜೀಂ ಮದುವೆಯಾಗಿದ್ದಾರೆ. ತನಗೆ ಹೆಣ್ಣು ಸಿಗದ ಕಾರಣ ಮದುವೆಯ ಬಗ್ಗೆ ಅಜೀಂ ತುಂಬಾ ನೊಂದುಕೊಂಡಿದ್ದರು.
ಮೀರತ್ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿ ನಿವಾಸಿ ನಜ್ಮಾ ಎಂಬುವವರಿಗೆ ಪತಿ ವಿಚ್ಛೇದನ ನೀಡಿದ್ದಾರೆ. ಪತ್ನಿ ದಪ್ಪಗಾದ ಕಾರಣ ಪತಿ ಸಲ್ಮಾನ್ ತನಗೆ ವಿಚ್ಛೇದನ ಬೇಕೆಂದು ನೋಟಿಸ್ ನೀಡಿದ್ದಾನೆ.
ಉತ್ತರ ಪ್ರದೇಶದ ಸೌಮಿತ್ರಾ ಗರ್ಗ್ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (ಜೆಇಇ) ಶೇ 100 ರಷ್ಟು ಅಂಕ ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.ಅಷ್ಟೇ ಅಲ್ಲದೆ ಈಗ ಅವರು ದೇಶಾದ್ಯಂತ 100 ರ ಗಡಿ ತಲುಪಿದ 14 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅದಾಗ್ಯೂ ಅವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಗುರಿಯನ್ನು ಹೊಂದಿದ್ದಾರೆ.
The Burning Train: ಸಹಾರನ್ಪುರ್ ನಿಂದ ದೆಹಲಿಗೆ (Saharanpur To Delhi) ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ರೈಲಿನ ಮೂರು ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿವೆ.
Major Dhyan Chand Sports University: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೀರತ್ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಭಾನುವಾರ ಶಂಕುಸ್ಥಾಪನೆ ಮಾಡಿದರು.
ಈ ಸಮಯದಲ್ಲಿ, ದೇಶದ ರಾಜಧಾನಿಯಾದ ದೆಹಲಿಯಲ್ಲಿ ಭುಗಿಲೆದ್ದಿರುವ ಗಲಭೆಯಿಂದಾಗಿ ಈವರೆಗೂ 39 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಏತನ್ಮಧ್ಯೆ, ಉತ್ತರ ಪ್ರದೇಶದ ಮೀರತ್ನಲ್ಲಿ ಕೋಮು ಸೌಹಾರ್ದತೆಯ ಉದಾಹರಣೆ ಮುನ್ನೆಲೆಗೆ ಬಂದಿದೆ. ಮೀರತ್ನಲ್ಲಿ ವಿವಾಹದ ಕಾರ್ಡ್ ಚರ್ಚೆಯ ವಿಷಯವಾಗಿ ಉಳಿದಿದೆ.
ಮನೆಯಲ್ಲಿ ಹೆಂಡತಿ ಪ್ರತಿನಿತ್ಯ ತಿನ್ನಲು ಲಡ್ಡು ಹೊರತುಪಡಿಸಿ ಬೇರೇನನ್ನೂ ಕೊಡುವುದಿಲ್ಲ. ಇದನ್ನು ತಿಂದು ಸಾಕಾಗಿದೆ. ದಯವಿಟ್ಟು ನನಗೆ ಈಕೆಯಿಂದ ವಿಚ್ಚೇದನ ಕೊಡಿಸಿ ಎಂದು ಪತಿಯೋರ್ವ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಉತ್ತರಪ್ರದೇಶದ ಬಹುತೇಕ ಭಾಗಗಳಲ್ಲಿ ಬುಧವಾರ ಶೀತ ಗಾಳಿ ಹೆಚ್ಚಾದ ಪರಿಣಾಮ ಕೇವಲ 24 ಗಂಟೆಗಳಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಮೃತಪಟ್ಟವರ ಸಂಖ್ಯೆ 143 ಕ್ಕೆ ಏರಿದೆ.
ಮೀರತ್ನಲ್ಲಿ, ಒಬ್ಬ ಮಗ ತನ್ನ 90 ವರ್ಷದ ತಾಯಿಯನ್ನು ಮನೆಯ ಹೊರಗೆ ನಿಂತಿರುವ ಆಟೋದಲ್ಲಿ ಸರಪಣಿಗಳೊಂದಿಗೆ ಬಂಧಿಸಿದ್ದಾನೆ. ಈ ಶೀತದಲ್ಲಿ ಈ ತಾಯಿ ಆಟೋ ಹಿಂಭಾಗದ ಸೀಟಿನಲ್ಲಿ ಬಂಧಿತಳಾಗಿ ಮಲಗಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.