Norovirus: ನೊರೊವೈರಸ್ ವೇಗವಾಗಿ ಬದಲಾಗುತ್ತಿರುತ್ತದೆ, ಇದು ಲಸಿಕೆ ಮಾಡಲು ಕಷ್ಟವಾಗುತ್ತದೆ. ಅದೇನೇ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಮಾನವ ಕರುಳಿನ ಜೀವಕೋಶಗಳಲ್ಲಿ ವೈರಸ್ ಅನ್ನು ಬೆಳೆಸುವ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ.
ಕೇರಳದ ತಿರುವನಂತಪುರಂ ನಗರದ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ವೈರಸ್ ಪತ್ತೆಯಾಗಿದ್ದು, ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಗಳಲ್ಲಿ ನೀಡಿದ ಮಧ್ಯಾಹ್ನದ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗಿದ್ದಾರೆ.
Norovirus In Kerala: ಕರೋನವೈರಸ್ ಭೀತಿಯ ನಡುವೆ, ಕೇರಳದ ರಾಜಧಾನಿ ತಿರುವನಂತಪುರಂನ ವಿಝಿಂಜಂ ಪ್ರದೇಶದಲ್ಲಿ 2 ಮಕ್ಕಳಿಗೆ ನೊರೊವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಕೇರಳದ ವಯನಾಡಿನಲ್ಲಿ ನೊರೊವೈರಸ್ ಸೋಂಕಿನ ಕೆಲವು ಪ್ರಕರಣಗಳು ದೃಢಪಟ್ಟಿವೆ.ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕರಿಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.