ಪ್ರಯಾಗ್ರಾಜ್ ಕುಂಭಮೇಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡದ ಸಂಘ ಪರಿವಾರದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೀ ಜೋಶಿ, ಕೇಂದ್ರದ ಮೋದಿ ಸರ್ಕಾರವನ್ನುದ್ದೇಶಿಸಿ 2025 ರಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆಯೇ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಯಾರೂ ಕೂಡ ರಾಮನ ವಿರುದ್ಧ ಇಲ್ಲ. ಅಷ್ಟಕ್ಕೂ ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ, ವಿಶ್ವಕ್ಕೇ ದೇವರು. ಹಾಗಾಗಿ ಅಯೋಧ್ಯೆ ವಿಚಾರ ಶೀಘ್ರವಾಗಿ ಬಗೆಹರಿಯಬೇಕಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿ ಆದೇಶಿಸಿತ್ತು. ಅದರಂತೆ ಇದೀಗ ಜನವರಿ 4ರಿಂದ ಅರ್ಜಿಗಳ ವಿಚಾರಣೆ ಪ್ರಾರಂಭವಾಗಲಿದೆ.
ರಾಮಮಂದಿರ ನಿರ್ಮಿಸಲು ವಿಳಂಭ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ಮಿತ್ರಪಕ್ಷ ಶಿವಸೇನಾ" ಬಿಜೆಪಿ ಇನ್ನೂ ಕುಂಭಕರ್ಣನ ಹಾಗೆ ನಿದ್ರಿಸುತ್ತಿದೆ ನಾವು ಅವರನ್ನು ಈಗ ಎಬ್ಬಿಸಲು ಬಂದಿದ್ದೇವೆ ಎಂದು ತಿಳಿಸಿದೆ.
ರಾಮಮಂದಿರ ವಿವಾದವನ್ನು ಬೇಗನೆ ಇತ್ಯರ್ಥಗೊಳಿಸಬೇಕು, ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯ ವಿಳಂಬವಾದಲ್ಲಿ ಅದು ಅನ್ಯಾಯವೆಸಗಿದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ರಾಮಮಂದಿರ ವಿಚಾರಣೆಯನ್ನು ಮುಂದೂಡಿರುವುದಕ್ಕೆ ಪ್ರತಿಕ್ರಿಯಿಸಿರುವ ನಾವು ಕಾನೂನನ್ನು ತಿದ್ದುಪಡಿ ಮಾಡುತ್ತೇವೆ, ಏಕೆಂದರೆ ಸುಪ್ರೀಂಕೋರ್ಟ್ ಸಂಸತ್ತಿಗಿಂತ ಮೇಲಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.