ಆಗ ಕರಾಟೆ ಕಿಡ್‌, ಈಗ ಹುಡುಗರ ಫೇವರಿಟ್‌..! ಥಟ್‌ ಅಂತ ಇವರ ಹೆಸರೇಳಿ ನೋಡೋಣ.. 

Samantha Ruth Prabhu : ಈ ಫೋಟೋದಲ್ಲಿರುವ ಕರಾಟೆ ಕಿಡ್‌ ಯಾರು ಅಂತ ಗೊತ್ತಾಯ್ತಾ..? ಸಧ್ಯ ಈಕೆ ಟ್ರೆಂಡ್‌ ಸೆಟರ್‌, ಈಕೆ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಚಿತ್ರಮಂದಿರಮುಂದೆ ಸಾಲು ಗಟ್ಟಿ ನಿಂತಿರುತ್ತಾರೆ.. ಯಾರು ಅಂತ ಗೊತ್ತಾಯ್ತಾ..? 

Written by - Krishna N K | Last Updated : Jun 15, 2024, 03:00 PM IST
    • ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರುವುದು ಸಾಮಾನ್ಯ ಸಂಗತಿಯಲ್ಲ.
    • ಕೆಲ ನಟಿಯರು ದಶಕಗಳಿಂದ ಸಿನಿರಂಗದಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡು ಬಂದಿದ್ದಾರೆ.
    • ಈ ಫೋಟೋದಲ್ಲಿರುವ ನಟಿ ಕೂಡ ಹೊಸಬರ ನಡುವೆ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ..
ಆಗ ಕರಾಟೆ ಕಿಡ್‌, ಈಗ ಹುಡುಗರ ಫೇವರಿಟ್‌..! ಥಟ್‌ ಅಂತ ಇವರ ಹೆಸರೇಳಿ ನೋಡೋಣ..  title=

Samantha childhood pic : ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರುವುದು ಸಾಮಾನ್ಯ ಸಂಗತಿಯಲ್ಲ. ಸೌಂದರ್ಯ ಮತ್ತು ಪ್ರತಿಭೆಯ ಜೊತೆಗೆ, ಅದೃಷ್ಟವೂ ಬೇಕು. ತ್ರಿಶಾ ಮತ್ತು ನಯನತಾರಾ ಅವರಂತಹ ಕೆಲವು ನಟಿಯರು ದಶಕಗಳಿಂದ ಸಿನಿರಂಗದಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡು ಬಂದಿದ್ದಾರೆ. ಇವರಂತೆ ಈ ಫೋಟೋದಲ್ಲಿರುವ ನಟಿ ಕೂಡ ಹೊಸಬರ ನಡುವೆ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ..

ಹೌದು.. ಮೇಲಿನ ಫೋಟೋದಲ್ಲಿರುವ ಕರಾಟೆ ಕಿಡ್‌, ಈಗ ಸೌತ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾಳೆ. ಆಕೆಗೆ ಫ್ಯಾನ್ ಫಾಲೋಯಿಂಗ್ ರೇಂಜ್ ಕೂಡ ಸಖತ್ತಾಗಿದೆ. ಹಾಗಿದ್ರೆ, ಈ ಫೋಟೋದಲ್ಲಿರುವ ಮಗು ಯಾರೆಂದು ಹೇಳಿ ನೋಡೋಣ..

ಇದನ್ನೂ ಓದಿ:ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ ಮೊದಲ ರಿಯಾಕ್ಷನ್

ಆಕೆ ಬೇರೆ ಯಾರೂ ಅಲ್ಲ, ತನ್ನ ಮೊದಲ ಸಿನಿಮಾದಿಂದಲೇ ಸಿನಿ ಪ್ರೇಮಿಗಳ ಮನಗೆದ್ದ ನಟಿ ಸಮಂತಾ. 2010ರಲ್ಲಿ ಬಿಡುಗಡೆಯಾದ ‘ಏಮ್‌ ಮಾಯ ಚೈಸಾವೆ’ ಸಿನಿಮಾದ ಮೂಲಕ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲೇ ಹುಡುಗರ ಹಾಟ್ ಫೇವರಿಟ್ ಆದ್ರು ಸ್ಯಾಮ್.

ನಂತರದ ದಿನಗಳಲ್ಲಿ ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್.. ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಖ್ಯಾತಿ ಗಳಿಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ಸಮಂತಾ ಇದೀಗ ಡಿವೋರ್ಸ್‌ ಪಡೆದಿದ್ದಾರೆ.

ಇದನ್ನೂ ಓದಿ:ರೇಣುಕಸ್ವಾಮಿ ಏನ್‌ ಸತ್ಯ ಹರಿಶ್ಚದ್ರನಾ..? ಬುದ್ದಿ ಕಲಿಸಲು ಹೊಡೆದಿರಬೇಕು, ಅವನು ಸತ್ತ : ನಟಿ ಕಸ್ತೂರಿ

ಸಮಂತಾಗೆ ಮಯೋಸಿಟಿಸ್ ಕಾಣಿಸಿಕೊಂಡಿತು. ಅದರ ಚಿಕಿತ್ಸೆಗಾಗಿ, ಅವರು ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಸಧ್ಯ ಕಮ್ ಬ್ಯಾಕ್ ನೀಡಲು ಸಿದ್ಧವಾಗುತ್ತಿದ್ದಾರೆ. ಸ್ಯಾಮ್‌ ಅವರನ್ನ ರಿಯಲ್‌ ಫೈಟರ್‌ ಅಂತ ಕರೆಯುತ್ತಾರೆ, ಕಾರಣ ಎಷ್ಟೇ ನೋವು ಇದ್ದರೂ ಅವುಗಳನ್ನು ಮೆಟ್ಟಿನಿಲ್ಲುವ ಅವರ ಸ್ವಭಾವ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News