ಕೋಕಾ-ಕೋಲಾ ಇಂಡಿಯಾ ಮತ್ತು ಭಾರತದ ಅತಿದೊಡ್ಡ ರೀಟೇಲ್ ವ್ಯಾಪಾರಿ ಆದಂಥ ರಿಲಯನ್ಸ್ ರೀಟೇಲ್ ಪ್ರಮುಖ ಉಪ್ರಕಮವೊಂದನ್ನು ತೆಗೆದುಕೊಂಡಿವೆ. ಅದರ ಪ್ರಕಾರ, ರಿವರ್ಸ್ ವೆಂಡಿಂಗ್ ಮಶೀನ್ ಮತ್ತು ಸಂಗ್ರಹದ ಬುಟ್ಟಿಗಳ ಮೂಲಕ ವಾಪಸ್ ಪಡೆದು, ಗ್ರಾಹಕರಿಂದ ಬಳಕೆಯಾದಂಥ ಪೆಟ್ (polyethylene terephthalate) ಬಾಟಲಿಗಳ ಪುನರ್ ಬಳಕೆಗೆ ಮುಂದಾಗಲಾಗಿದೆ. ಇದಕ್ಕೆ “ಭೂಲ್ ನಾ ಜಾನಾ, ಪ್ಲಾಸ್ಟಿಕ್ ಬಾಟಲ್ ಲೌಟಾನಾ” (ಮರೆಯಬೇಡಿ, ಪ್ಲಾಸ್ಟಿಕ್ ಬಾಟಲಿ ಹಿಂತಿರುಗಿಸಿ) ಎಂಬ ಶೀರ್ಷಿಕೆಯಲ್ಲಿ ಉಪಕ್ರಮ ಆರಂಭಿಸಲಾಗಿದೆ. ಇದನ್ನು ಮುಂಬೈನಲ್ಲಿ ಇರುವಂಥ ರಿಲಯನ್ಸ್ ಸ್ಟೋರ್ ಗಳಲ್ಲಿ ಈ ಸುಸ್ಥಿರ ಉಪಕ್ರಮವನ್ನು ಶುರು ಮಾಡಲಾಗಿದೆ.
ರಿಲಯನ್ಸ್ ರಿಟೇಲ್ನ ವ್ಯಾಪಕ ಶ್ರೇಣಿಯ ಫ್ಯಾಷನ್ ಮತ್ತು ಜೀವನಶೈಲಿಯ ಪ್ರತೀಕವಾಗಿರುವ ಉನ್ನತ-ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ 'ಪರ್ಫಾರ್ಮ್ಯಾಕ್ಸ್', ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನೊಂದಿಗೆ (ಎಐಎಫ್ಎಫ್) ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ರಿಲಯನ್ಸ್ನ ಜಿಯೋ ಮಾರ್ಟ್ ಹಾಗೂ ಫೇಸ್ಬುಕ್ನ ಮಾಲೀಕತ್ವದ ವಾಟ್ಸಾಪ್ ದೇಶಾದ್ಯಂತ ಇರುವ ಲಕ್ಷಾಂತರ ದಿನಸಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಜೋಡಿಸಲು ಯೋಜನೆ ರೂಪಿಸಿವೆ. ಹೀಗಾಗಿ ಇದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಿಗೆ ರಿಲಯನ್ಸ್ ರಿಟೇಲ್ ಭಾರಿ ಪೈಪೋಟಿ ನೀಡಲಿದೆ. ರಿಲಯನ್ಸ್ ಜಿಯೋದಲ್ಲಿನ ಶೇ 9.9 ರಷ್ಟು ಪಾಲು ಖರೀದಿಸುವ ಒಪ್ಪಂದಕ್ಕೆ ಫೇಸ್ಬುಕ್ ಸಹಿ ಹಾಕಿದೆ. ಈ ಒಪ್ಪಂದದಿಂದ, ಭಾರತದಲ್ಲಿ ಚಿಲ್ಲರೆ ಅಂಗಡಿ ನಿರ್ವಹಣೆ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.