ಕೋಕಾ ಕೋಲಾ ಇಂಡಿಯಾ- ರಿಲಯನ್ಸ್ ರೀಟೇಲ್ ಜತೆಯಾಗಿ ಪೆಟ್ ಬಾಟಲಿಗಳ ಸಂಗ್ರಹ, ಮರುಬಳಕೆಗೆ ಮಹತ್ವದ ಹೆಜ್ಜೆ

 ಕೋಕಾ-ಕೋಲಾ ಇಂಡಿಯಾ ಮತ್ತು ಭಾರತದ ಅತಿದೊಡ್ಡ ರೀಟೇಲ್ ವ್ಯಾಪಾರಿ ಆದಂಥ ರಿಲಯನ್ಸ್ ರೀಟೇಲ್ ಪ್ರಮುಖ ಉಪ್ರಕಮವೊಂದನ್ನು ತೆಗೆದುಕೊಂಡಿವೆ. ಅದರ ಪ್ರಕಾರ, ರಿವರ್ಸ್ ವೆಂಡಿಂಗ್ ಮಶೀನ್ ಮತ್ತು ಸಂಗ್ರಹದ ಬುಟ್ಟಿಗಳ ಮೂಲಕ ವಾಪಸ್ ಪಡೆದು, ಗ್ರಾಹಕರಿಂದ ಬಳಕೆಯಾದಂಥ ಪೆಟ್ (polyethylene terephthalate) ಬಾಟಲಿಗಳ ಪುನರ್ ಬಳಕೆಗೆ ಮುಂದಾಗಲಾಗಿದೆ. ಇದಕ್ಕೆ “ಭೂಲ್ ನಾ ಜಾನಾ, ಪ್ಲಾಸ್ಟಿಕ್ ಬಾಟಲ್ ಲೌಟಾನಾ” (ಮರೆಯಬೇಡಿ, ಪ್ಲಾಸ್ಟಿಕ್ ಬಾಟಲಿ ಹಿಂತಿರುಗಿಸಿ) ಎಂಬ ಶೀರ್ಷಿಕೆಯಲ್ಲಿ ಉಪಕ್ರಮ ಆರಂಭಿಸಲಾಗಿದೆ. ಇದನ್ನು ಮುಂಬೈನಲ್ಲಿ ಇರುವಂಥ ರಿಲಯನ್ಸ್ ಸ್ಟೋರ್ ಗಳಲ್ಲಿ ಈ ಸುಸ್ಥಿರ ಉಪಕ್ರಮವನ್ನು ಶುರು ಮಾಡಲಾಗಿದೆ.

Written by - Zee Kannada News Desk | Last Updated : Jan 16, 2024, 06:59 PM IST
  • - ಮುಂಬೈ ಮತ್ತು ದೆಹಲಿಯಲ್ಲಿನ 36 ರಿಲಯನ್ಸ್ ರೀಟೇಲ್ ಸ್ಟೋರ್‌ಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ
    - ಬಾಟಲಿ ಸಂಗ್ರಹ- ಮರುಬಳಕೆ ಉಪಕ್ರಮ 2025ರ ವೇಳೆಗೆ ಭಾರತದಲ್ಲಿನ 200 ರಿಲಯನ್ಸ್ ಸ್ಟೋರ್‌ಗಳಿಗೆ ವಿಸ್ತರಣೆ
    - ಪ್ರಾಯೋಗಿಕ ಹಂತದಲ್ಲಿ ವಾರ್ಷಿಕ 5,00,000 (ಐದು ಲಕ್ಷ) ಪೆಟ್ ಬಾಟಲಿಗಳ ಸಂಗ್ರಹದ ಗುರಿ
ಕೋಕಾ ಕೋಲಾ ಇಂಡಿಯಾ- ರಿಲಯನ್ಸ್ ರೀಟೇಲ್ ಜತೆಯಾಗಿ ಪೆಟ್ ಬಾಟಲಿಗಳ ಸಂಗ್ರಹ, ಮರುಬಳಕೆಗೆ ಮಹತ್ವದ ಹೆಜ್ಜೆ title=

ಮುಂಬೈ: ಕೋಕಾ-ಕೋಲಾ ಇಂಡಿಯಾ ಮತ್ತು ಭಾರತದ ಅತಿದೊಡ್ಡ ರೀಟೇಲ್ ವ್ಯಾಪಾರಿ ಆದಂಥ ರಿಲಯನ್ಸ್ ರೀಟೇಲ್ ಪ್ರಮುಖ ಉಪ್ರಕಮವೊಂದನ್ನು ತೆಗೆದುಕೊಂಡಿವೆ. ಅದರ ಪ್ರಕಾರ, ರಿವರ್ಸ್ ವೆಂಡಿಂಗ್ ಮಶೀನ್ ಮತ್ತು ಸಂಗ್ರಹದ ಬುಟ್ಟಿಗಳ ಮೂಲಕ ವಾಪಸ್ ಪಡೆದು, ಗ್ರಾಹಕರಿಂದ ಬಳಕೆಯಾದಂಥ ಪೆಟ್ (polyethylene terephthalate) ಬಾಟಲಿಗಳ ಪುನರ್ ಬಳಕೆಗೆ ಮುಂದಾಗಲಾಗಿದೆ. ಇದಕ್ಕೆ “ಭೂಲ್ ನಾ ಜಾನಾ, ಪ್ಲಾಸ್ಟಿಕ್ ಬಾಟಲ್ ಲೌಟಾನಾ” (ಮರೆಯಬೇಡಿ, ಪ್ಲಾಸ್ಟಿಕ್ ಬಾಟಲಿ ಹಿಂತಿರುಗಿಸಿ) ಎಂಬ ಶೀರ್ಷಿಕೆಯಲ್ಲಿ ಉಪಕ್ರಮ ಆರಂಭಿಸಲಾಗಿದೆ. ಇದನ್ನು ಮುಂಬೈನಲ್ಲಿ ಇರುವಂಥ ರಿಲಯನ್ಸ್ ಸ್ಟೋರ್ ಗಳಲ್ಲಿ ಈ ಸುಸ್ಥಿರ ಉಪಕ್ರಮವನ್ನು ಶುರು ಮಾಡಲಾಗಿದೆ.

ಭಾರತ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಗೆ ಪೂರಕವಾಗಿ ರೀತಿ ಬಾಟಲಿಗಳ ಸಂಗ್ರಹವನ್ನು ಮುಂಬೈ ಹಾಗೂ ದೆಹಲಿಯ 36 ರಿಲಯನ್ಸ್ ರೀಟೇಲ್ ಸ್ಟೋರ್‌ ಗಳು, ಸ್ಮಾರ್ಟ್ ಬಜಾರ್, ಸಹಕಾರಿ ಭಂಡಾರ್ ಸ್ಟೋರ್ ಗಳಲ್ಲಿ ಶುರುವಾಗಿದೆ. ಮತ್ತು 2025ರ ವೇಳೆಗೆ ಭಾರತದಲ್ಲಿನ 200 ರಿಲಯನ್ಸ್ ಸ್ಟೋರ್‌ಗಳಿಗೆ ವಿಸ್ತರಣೆ ಆಗಲಿದೆ. ಈಗ ಪ್ರಾಯೋಗಿಕ ಹಂತದಲ್ಲಿ ವಾರ್ಷಿಕವಾಗಿ 5,00,000 (ಐದು ಲಕ್ಷ) ಪೆಟ್ ಬಾಟಲಿಗಳನ್ನು ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. 

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಕರ್ತವ್ಯದ ಅಧಿಕಾರಿ (OSD) ಕಾಜಿ ಇರ್ಫಾನ್ ಅವರ ಉಪಸ್ಥಿತಿಯಲ್ಲಿ ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ರಿಲಯನ್ಸ್ ರೀಟೇಲ್‌ನ ಸ್ಮಾರ್ಟ್ ಬಜಾರ್ ಸ್ಟೋರ್‌ನಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು.

ಈಗ ಅಳವಡಿಸಲಾದ ರಿವರ್ಸ್ ವೆಂಡಿಂಗ್ ಮಶೀನ್ ಅಥವಾ ಬುಟ್ಟಿಗಳಲ್ಲಿ ಹಾಕುವ ಮೂಲಕ ಬಾಟಲಿಗಳನ್ನು ಹಿಂತಿರುಗಿಸುವಂಥ ಗ್ರಾಹಕರಿಗೆ ಕೋಕಾ ಕೋಲಾ ಇಂಡಿಯಾದ ಉತ್ಪನ್ನಗಳ ಮೇಲೆ ಭರ್ಜರಿಯಾದ ರಿಯಾಯಿತಿಯನ್ನೇ ನೀಡಲಾಗುತ್ತದೆ. ಹೀಗೇ ವಿಲೇವಾರಿಯಾ್ ಬಾಟಲಿಗಳನ್ನು ಸಂಗ್ರಹಿಸಿ, ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಪುನರ್ ಬಳಕೆ ಮಾಡಲಾಗುತ್ತದೆ. ಅಂದಹಾಗೆ ಪಾಲಿಯೆಸ್ಟರ್ ಮತ್ತು ಪ್ಲಾಸ್ಟಿಕ್ಸ್ ಪುನರ್ ಬಳಕೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಂಚೂಣಿಯಲ್ಲಿದೆ. ಈ ಉಪಕ್ರಮದಿಂದ ಆಗುವ ಉಪಯೋಗ ಏನೆಂದರೆ ಗ್ರಾಹಕರನ್ನು ಈ ರೀತಿಯ ಸಲೀಸಾದ ತ್ಯಾಜ್ಯ ವಿಲೇವಾರಿ ಮೂಲಕ ಜವಾಬ್ದಾರಿಯುತ ನಿರ್ವಹಣೆಯಲ್ಲಿ ತೊಡಗಿಸಿದಂತಾಗುತ್ತದೆ. ಇದಕ್ಕಾಗಿ ಇಷ್ಟು ಸಮಯ ಅನುಸರಿಸುತ್ತಿದ್ದ ಸಾಂಪ್ರದಾಯಿಕ ಆರ್ಥಿಕ ಕ್ರಮದಿಂದ ವಿಭಿನ್ನವಾದದ್ದನ್ನು ಅನುಸರಿಸಿದಂತಾಗುತ್ತದೆ.

ಇದನ್ನೂ ಓದಿ: ನಿವೃತ್ತಿ ವೇತನ ನೀಡಲು ಲಂಚ ಕೇಳಿದ ಅಧಿಕಾರಿ ಅಮಾನತು ಸೇರಿ 3,000 ಕ್ಕೂ ಹೆಚ್ಚು ಮನವಿಗಳಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ಈ ಉಪಕ್ರಮದ ಬಗ್ಗೆ ಮಾತನಾಡಿದ ರಿಲಯನ್ಸ್ ರೀಟೇಲ್ ಲಿಮಿಟೆಡ್‌ನ ದಿನಸಿ ರೀಟೇಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಾಮೋದರ್ ಮಲ್, “ಭಾರತೀಯ ಕುಟುಂಬಗಳು ಪ್ರತಿದಿನ ಹಾಲಿನ ಪೌಚ್‌ಗಳು, ಪ್ಲಾಸ್ಟಿಕ್ ಬಾಟಲಿಗಳು, ಪತ್ರಿಕೆಗಳನ್ನು ಸಹ ಕಸದ ಬುಟ್ಟಿಗೆ ಹಾಕದ ಅಭ್ಯಾಸವನ್ನು ಹೊಂದಿದ್ದವು. ನಾವು ಅವುಗಳನ್ನು ಸ್ವಚ್ಛಗೊಳಿಸುತ್ತೇವೆ, ಸಂಗ್ರಹಿಸುತ್ತೇವೆ ಮತ್ತು ಅವುಗಳನ್ನು ರದ್ದಿವಾಲಾಗಳಿಗೆ ಹಸ್ತಾಂತರಿಸುತ್ತೇವೆ. ಅವರುಗಳು ಇಂದಿನ ಜಗತ್ತಿನಲ್ಲಿ ಮರುಬಳಕೆ ಮಾಡುವಂಥ ವಿಶಿಷ್ಟ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರಂಥವರು. ಆಧುನಿಕ ರೀಟಲರ್ ಆಗಿ ಸ್ಮಾರ್ಟ್ ಬಜಾರ್ ಆಧುನಿಕ ವಿಧಾನಗಳೊಂದಿಗೆ ಈ ಪದ್ಧತಿಯನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿದೆ. ಕೋಕಾ ಕೋಲಾ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಬೆಂಬಲದೊಂದಿಗೆ ನಮ್ಮ ಮಳಿಗೆಗಳಲ್ಲಿ ಖರೀದಿ ಮಾಡುವವರ ಜತೆಗೆ ವಿಶಾಲವಾದ ನಮ್ಮ ಮಳಿಗೆಗಳ ಜಾಲದೊಂದಿಗೆ ಯೋಜಿಸಿರುವಂಥ ಬಹುಮುಖ್ಯವಾದ  ಪ್ರಯತ್ನಗಳಲ್ಲಿ ಒಂದಾಗಿದೆ,” ಎಂದು ಹೇಳಿದರು.

ಕೋಕಾ ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ ಗ್ರಾಹಕ ಮತ್ತು ವಾಣಿಜ್ಯ ನಾಯಕತ್ವದ ಉಪಾಧ್ಯಕ್ಷೆ ಶ್ರೀಮತಿ ಗ್ರೀಷ್ಮಾ ಸಿಂಗ್ ಅವರು ಮಾತನಾಡಿ, "ಈ ಸಹಭಾಗಿತ್ವ ಮತ್ತು ವೇದಿಕೆಯ ಮೂಲಕ ನಾವು ಜಾಗೃತಿ ಮೂಡಿಸಬಹುದು ಮತ್ತು ರಿಲಯನ್ಸ್ ಸ್ಟೋರ್‌ನಲ್ಲಿ ಖರೀದಿ ಮಾಡುವಾಗ ಗ್ರಾಹಕರಿಗೆ ತಮ್ಮ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡಲು ಅನುಕೂಲಕರವಾದ ಮಾರ್ಗವನ್ನು ಒದಗಿಸಬಹುದು ಎಂಬುದಕ್ಕೆ ನಾವು ಸಂತೋಷಪಡುತ್ತೇವೆ. ರೀಟೇಲ್ ವ್ಯಾಪಾರ, ಸರ್ಕಾರ, ನಾಗರಿಕ ಸಮಾಜಗಳು ಮತ್ತು ಇಂಥ ಗ್ರಾಹಕ-ಕೇಂದ್ರಿತ ವಿಚಾರಗಳೊಂದಿಗಿನ ಇಂಥ ಸಹಭಾಗಿತ್ವದಿಂದಾಗಿ ಸಂಗ್ರಹ, ಮರುರೂಪ ಮತ್ತು ಮರುಬಳಕೆಯ ಬೆಳವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತದೆ,” ಎಂದರು. 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಪಾಲಿಯೆಸ್ಟರ್‌ನ ಪ್ರಗತಿ ಮತ್ತು ಕಾರ್ಯತಂತ್ರದ ಅಧ್ಯಕ್ಷ ಹೇಮಂತ್ ಡಿ ಶರ್ಮಾ ಅವರು ಮಾತನಾಡಿ, “ಸುಸ್ಥಿರತೆ ಮತ್ತು ಚಲಾವಣೆ ವಿಚಾರವಾಗಿ ಮುಖ್ಯ ಸ್ಥಾನದಲ್ಲಿ ರಿಲಯನ್ಸ್ ನಿಂತಿದೆ, ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲಗಳಾಗಿ ಪರಿವರ್ತಿಸುವಲ್ಲಿ ಭಾರತದ ಜವಾಬ್ದಾರಿಯನ್ನು ಮುನ್ನಡೆಸುತ್ತದೆ. ವಾರ್ಷಿಕವಾಗಿ ಇನ್ನೂರು ಕೋಟಿ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡುವುದು, ಅದನ್ನು 5 ಶತಕೋಟಿಗೆ ಹೆಚ್ಚಿಸುವ ಯೋಜನೆ ಹೊಂದಿದೆ ರಿಲಯನ್ಸ್. ಈ ಸುಸ್ಥಿರತೆಯ ಬದ್ಧತೆ ಮೂಲಕ ಈಗಿನ ಟ್ರೆಂಡ್‌ಗಳನ್ನು ಮುಂಚಿತವಾಗಿಯೇ ರೂಪಿಸುತ್ತಿದೆ ಮತ್ತು ಪರಿಸರ ಸ್ನೇಹಿ ಉತ್ಪಾದನೆಗೆ ಒಂದು ಮಾನದಂಡವನ್ನು ನಿಗದಿ ಮಾಡುತ್ತಿದೆ. ಎರಡು ದಶಕಗಳಿಂದ ರಿಲಯನ್ಸ್ ಮರುರೂಪ ನೀಡಿದ ನಂತರದ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡುತ್ತಿದೆ. ಇದು ಹಸಿರು, ವೃತ್ತೀಯ ಭವಿಷ್ಯಕ್ಕಾಗಿ ದೂರದೃಷ್ಟಿಯ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ,” ಎಂದರು.

ಇದನ್ನೂ ಓದಿ: Daily GK Quiz: ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು?

ಈ ಉಪಕ್ರಮವು ತನ್ನ ತ್ಯಾಜ್ಯವಿಲ್ಲದ ವಿಶ್ವ (ವರ್ಲ್ಡ್ ವಿತೌಟ್ ವೇಸ್ಟ್) ತಂತ್ರದ ಭಾಗವಾಗಿ ಕಂಪನಿಯು ಉತ್ಪಾದಿಸುವ ಶೇ 100ರಷ್ಟು ಪ್ಯಾಕೇಜಿಂಗ್‌ಗೆ ಸಮಾನವಾಗಿ ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ಕೋಕಾ ಕೋಲಾದ ಬದ್ಧತೆಯ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ. ಇದಕ್ಕೆ ಪೂರಕವಾಗಿ ಮನ್ನಡೆಸುವ ಶಕ್ತಿಯಾಗಿ, ಸುಸ್ಥಿರತೆ ಕೋಕಾ ಕೋಲಾ ನೀಡಿರುವ ಚಾಲನೆಯನ್ನು ಮುನ್ನಡೆಸಲಾಗುತ್ತದೆ. ಝೆಪ್ಟೋ ಜತೆಗೂಡಿ ಕೋಕಾ ಕೋಲಾವು ಭಾರತದಲ್ಲಿ “ಹಿಂತಿರುಗಿಸಿ ಮತ್ತು ಮರುಬಳಸಿ” ಉಪಕ್ರಮ ಆರಂಭಿಸಿದೆ. ಇದರ ಅಡಿಯಲ್ಲಿ ಈಗಾಗಲೇ ಭಾರತದಲ್ಲಿ 50,000 ಕುಟುಂಬಗಳು ಭಾಗವಹಿಸಿವೆ ಮತ್ತು ದೇಶದ 75 ನಗರಗಳಾದ್ಯಂತ ಯಶಸ್ವಿ ರಿವರ್ಸ್ ವೆಂಡಿಂಗ್ ಮಶೀನ್ ಅಳವಡಿಸಲಾಗಿದೆ. ಒಂದು ಟನ್ ಪೆಟ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News