ಬೆಂಗಳೂರು: ‘ಬಿಗ್ ಬಾಸ್’ ಮನೆಯಿಂದ ಆರ್ಯವರ್ಧನ್ ಗುರೂಜಿ ಆಚೆ ಬಂದಿದ್ದಾರೆ. ಮಿಡ್‍ನೈಟ್ ಎಲಿಮಿನೇಷನ್‍ನಲ್ಲಿ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಔಟ್ ಆಗಿದ್ದಾರೆ. ಸಖತ್ ಮನರಂಜನೆ ನೀಡುತ್ತಿದ್ದ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿರುವುದರಿಂದ ಅವರ ಸಾವಿರಾರು ಅಭಮಾನಿಗಳಿಗೆ ನೋವಾಗಿದೆ.
ಯಾವಾಗಲೂ ‘ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್’ ಎನ್ನುತ್ತಿದ್ದ ಆರ್ಯವರ್ದನ್ ಗುರೂಜಿ ಇದೀಗ ಅದೇ ನಂಬರ್ ಗೇಮ್ ಮೂಲಕ ಹೊರಬಿದ್ದಿದ್ದಾರೆ. ಪ್ರತಿ ಬಾರಿ ‘ಬಿಗ್ ಬಾಸ್’ ಫಿನಾಲೆ ವೇದಿಕೆ ಮೇಲೆ ಉಳಿಯುವುದು ಕೇವಲ 5 ಜನರು ಮಾತ್ರ. ಹೀಗಾಗಿ ‘ಬಿಗ್ ಬಾಸ್’ ಮನೆಯಲ್ಲಿ ಇದ್ದ 6 ಜನರ ಪೈಕಿ ಒಬ್ಬರ ಹೊರಹೋಗುವುದು ಅನಿವಾರ್ಯವಾಗಿತ್ತು. ಸೋಮವಾರದ ಮಧ್ಯರಾತ್ರಿ ಎಲಿಮಿನೇಷನ್‍ನಲ್ಲಿ ಗುರೂಜಿ ಔಟ್ ಆಗಿದ್ದಾರೆ.
ಇದನ್ನೂ ಓದಿ: Juliet 2 Movie First Look: ಕುತೂಹಲ ಮೂಡಿಸಿದೆ ‘ಜೂಲಿಯೆಟ್ 2’ ಚಿತ್ರದ ಫಸ್ಟ್ ಲುಕ್
ಸೋಮವಾರ ರಾತ್ರಿ ವಿನೂತನ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ನಂಬರ್ ಜೊತೆ ಕಾಣೆಯಾಗುವಂತಹ ಗೇಮ್ ಪ್ಲ್ಯಾನ್ ರೂಪಿಸಲಾಗಿತ್ತು. ನಂಬರ್ 9ರ ಜೊತೆ ಮುಳುಗುವ ಮತ್ತು ಅದರ ಜೊತೆ ಮತ್ತೆ ವಾಪಸ್ಸಾಗುವ ಯೋಜನೆ ರೂಪಿಸಲಾಗಿತ್ತು. ‘ಬಿಗ್ ‘ಬಾಸ್’ ಮನೆಯಲ್ಲಿರುವ 6 ಜನರ ಪೈಕಿ ಯಾವ ಸ್ಪರ್ಧಿ ನಂಬರ್ ಜೊತೆ ವಾಪಸ್ ಬರುವುದಿಲ್ಲವೋ ಅವರು ಎಲಿಮಿನೇಟ್ ಅಂತಾ ಘೋಷಿಸುವುದಾಗಿ ತಿಳಿಸಲಾಗಿತ್ತು. ಹೀಗಾಗಿ ಆ ನಂಬರ್ ಜೊತೆ ಆರ್ಯವರ್ಧನ್ ಗುರೂಜಿ ಬಂದಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಆ ಎಲಿಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ.
ಈ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‍ನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಕಾರಣದಿಂದ ಗುರೂಜಿ ಫಿನಾಲೆ ವೇದಿಕೆ ಮೇಲಿರಲಿದ್ದಾರೆಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಮಧ್ಯರಾತ್ರಿಯೇ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಸೂಟ್‍ಕೇಸ್ ಸಮೇತ ಮನೆಬಾಗಿಲು ತಟ್ಟಿದ್ದಾರಂತೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್‍ರದ್ದು ಆತ್ಮಹತ್ಯೆಯಲ್ಲ, ಕೊಲೆ: ಶವಾಗಾರ ಸಿಬ್ಬಂದಿಯ ಶಾಕಿಂಗ್ ಹೇಳಿಕೆ
ಇನ್ನೂ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿರುವ ವಿಚಾರ ವಾಹಿನಿಯಾಗಲಿ ಅಥವಾ ಗುರೂಜಿ ಆಗಲಿ ಇನ್ನೂ ಖಚಿತಪಡಿಸಿಲ್ಲ. ಆದರೆ ಗುರೂಜಿ ಮನೆಯಿಂದ ಆಚೆ ಬಂದಿರುವ ವಿಚಾರ ‘ಬಿಗ್ ಬಾಸ್’ ನೋಡುಗರ ನಡುವೆ ವ್ಯಾಪಕ ಚರ್ಚೆಯಾಗುತ್ತಿದೆ. ಫಿನಾಲೆಯಲ್ಲಿ ಇರಬೇಕಾದ ಗುರೂಜಿ ಮನೆ ಸೇರಿರುವ ವಿಚಾರ ಕೇಳಿ ಅವರ ಸಾವಿರಾರು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರಂತೆ.
‘ಬಿಗ್ ಬಾಸ್’ ಮನೆಯಲ್ಲಿ ಇದ್ದಷ್ಟು ದಿನವೂ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಆರ್ಯವರ್ಧನ್ ಗುರೂಜಿ ಫೈನಲ್ ತಲುಪುತ್ತಾರೆ ಅಂತಾನೇ ಅವರ ಫ್ಯಾನ್ಸ್ ಖುಷಿಯಲ್ಲಿದ್ದರು. ಆದರೆ ಇದೀಗ ಅವರು ಅನಿವಾರ್ಯವಾಗಿ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ಒಂದು ರೀತಿ ಶಾಕ್ ಉಂಟಾಗಿದೆಯಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.